ಚಿಂಚೋಳಿ: ತಾಲೂಕಿನ ರೈತರ ಜೀವನಾಡಿ ಆಗಿರುವ ನಾಗರಾಳ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಸರಕಾರ ಕೋಟ್ಯಂತರ ರೂ. ಖರ್ಚುಮಾಡಿದೆ. ಆದರೆ ಕಾಲುವೆ ಆಧುನೀಕರಣ ಕಾಮಗಾರಿ ಕಳೆದ 3 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ.
ಕೆಳದಂಡೆ ಮುಲ್ಲಾಮಾರಿ ಮುಖ್ಯಕಾಲುವೆ ಅಧುನೀಕರಣಗೊಳಿಸಿ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸುವುದಕ್ಕಾಗಿ ಕಾಂಗ್ರೆಸ್ ಸರಕಾರದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಧ್ಯಮ ನೀರಾವರಿ ಯೋಜನೆ ಸಚಿವ ಎಂ.ಬಿ.ಪಾಟೀಲರ ನಿರ್ದೇಶನದಂತೆ ಯೋಜನೆ ಪೂರ್ಣಗೊಳಿಸುವುದಕ್ಕಾಗಿ 2017-18ನೇ ಸಾಲಿನಲ್ಲಿ 117 ಕೋಟಿ ರೂ. ಸರಕಾರ ನೀಡಿತ್ತು.ಯೋಜನೆಯ ಮುಖ್ಯ ಕಾಲುವೆ ಅಭಿವೃದ್ಧಿಕಾಮಗಾರಿ ಒಂದು ವರ್ಷ ವಿಳಂಬ ಆಗಿದ್ದರಿಂದ ಮತ್ತೆ ಪರಿಷ್ಕೃತ ದರವಾಗಿ 124 ಕೋಟಿ ರೂ.ನೀಡಿತ್ತು.ಮುಖ್ಯಕಾಲುವೆ ಅಧುನೀಕರಣ ಕಾಮಗಾರಿಯನ್ನು ಬೆಂಗಳೂರಿನ ಕೆ.ಸ್ಟಾರ್ ಬಿಲ್ಡರ್ಸ್ ಡೆವಲಪರ್ಸ್‌ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಕಳೆದ 3 ವರ್ಷಗಳಿಂದ ಮುಖ್ಯ ಕಾಲುವೆ ಅಧುನಿಕರಣ ಕಾಮಗಾರಿ ನಿಂತು ಹೋಗಿದೆ. ಮುಖ್ಯ ಗುತ್ತಿಗೆದಾರರು ಕೆಲಸವನ್ನು ಬೇರೆಯವರಿಗೆ ನೀಡಿರುವುದರಿಂದಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಯೋಜನೆಯ ಮೂಲಗಳು ತಿಳಿಸಿವೆ.
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ 0-80 ಕಿಮೀ ಉದ್ದದ ಮುಖ್ಯಕಾಲುವೆ ಅಧುನಿಕರಣ ಕಾಮಗಾರಿ ಪ್ರಾರಂಭಿಸಲಾಗಿದೆ. ಅದರೆ ಉತ್ತಮ ಗುಣಮಟ್ಟ ಸರಿಯಾಗಿ ಇಲ್ಲದ ಕಾರಣ ಸಿಮೆಂಟ್ ಲೈನಿಂಗ್ ಸಂಪೂರ್ಣವಾಗಿ ಬಿರುಕು ಕಾಣಿಸಿಕೊಂಡಿವೆ ಎಂದು ರೈತರು ದೂರುತ್ತಿದ್ದಾರೆ.
ಮುಲ್ಲಾಮಾರಿ ನೀರಾವರಿ ಯೋಜನೆಮುಖ್ಯ ಕಾಲುವೆ ನಿರ್ಮಾಣದಿಂದಾಗಿ ಚಿಮ್ಮನಚೋಡ,ದೋಟಿಕೊಳ, ತಾಜಲಾಪೂರ,ಖೋದಾವಂದಪೂರ, ಹೂಡದಳ್ಳಿ, ಕನಕಪೂರ,ಗಾರಂಪಳ್ಳಿ,ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ,ಚಿಮ್ಮಾಇದಲಾಯಿ, ದಸ್ತಾಪೂರ, ಇಂದ್ರಪಾಡಹೊಸಳ್ಳಿ, ಅಣವಾರ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಸುಲೇಪೇಟ, ಯಾಕಾಪೂರ, ರಾಮತೀರ್ಥ, ಪೆಂಪನಪಳ್ಳಿ,ಬೆಡಕಪಳ್ಳಿಕೊಡಂಪಳ್ಳಿ , ಕೆರೋಳಿ, ಖರ್ಚಖೇಡ ಗ್ರಾಮಗಳ ಒಟ್ಟು 9713 ಹೆಕ್ಟೇರ್ ಜಮೀನುಗೆ ನೀರು ಪಡೆದುಕೊಳ್ಳಲು ಅನುಕೂಲವಾಗಲಿದೆ.
ಯೋಜನೆಯ ಮುಖ್ಯಕಾಲುವೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅನೇಕ ರೈತರು ಯೋಜನೆಯ ನಂಬಿಕೊಂಡಂತಹ ಹಿಂಗಾರು ಬಿತ್ತನೆ ಮಾಡಿಲ್ಲ. 80 ಕಿಮೀ ಮುಖ್ಯ ಕಾಲುವೆ ಮತ್ತು 64 ಉಪ ಕಾಲುವೆಗಳುಮತ್ತು ಹೊಲ ಗಾಲುವೆಗಳು ಅಧುನಿಕರಣ ಕಾಮಗಾರಿ ತುಂಬಾ ನಿರ್ಲಕ್ಷéತನಕ್ಕೆ ಒಳಗಾಗಿದೆ. ರೈತರ ಜಮೀನುಗಳಿಗೆ ನೀರು ಹರಿಯುವುದುಯಾವಾಗ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ. ಪ್ರಸಕ್ತಸಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ.ಜಲಾಶಯದಲ್ಲಿ ಒಳ ಹರಿವು ಉಂಟಾಗಿ ಕಳೆದ ಜೂನ್ -ಅಕ್ಟೋಬರ್‌ವರೆಗೆ ನಿರಂತವಾಗಿ ನದಿಗೆ ನೀರು ವ್ಯರ್ಥವಾಗಿ ಹರಿದು ಬಿಡಲಾಗಿದೆ. ಯೋಜನೆಯ ಮುಖ್ಯ ಕಾಲುವೆಯ ಕಾಮಗಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆಎಂಬ ಆರೋಪಗಳು ಕೇಳಿ ಬರುತ್ತಿವೆ. ತಾಲೂಕಿನ ರೈತರ ಜೀವನಾಡಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಪೂರ್ಣಗೊಳ್ಳುವುದು ಯಾವಾಗ? ಅಚುrಕಟ್ಟು ಪ್ರದೇಶದ ರೈತರು ನೀರು ಬರುವಿಕೆಗಾಗಿ ಕಾಯುವಂತಾಗಿದೆ. ಜನಪ್ರತಿನಿಧಿಗಳ ಮತ್ತು ಕೆಎನ್‌ಎಲ್ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ರೈತರ ಹೊಲಗಳಿಗೆ ನೀರು ಬರುತ್ತಿಲ್ಲವೆಂಬ ಮಾತುಗಳು ರೈತರಲ್ಲಿ ಕೇಳಿ ಬರುತ್ತಿವೆ.
-ಶಾಮರಾವ ಚಿಂಚೋಳಿ