Advertisement

ಕಾಲುವೆ ಅವಲಂಬಿತರಿಗಿಲ್ಲ ಅಭಯ

01:32 PM Apr 17, 2019 | Team Udayavani |

ಗಂಗಾವತಿ: ಜಿಲ್ಲೆಯ ರಾಜಕೀಯ ಅಧಿಕಾರ ನಿಯಂತ್ರಿಸುವ ಗಂಗಾವತಿಗೆ ಕಳೆದ ನಾಲ್ಕೈದು ವರ್ಷಗಳಿಂದ ಗರ ಬಡದಿದೆ. ತುಂಗಭದ್ರಾ ಜಲಾಶಯದಲ್ಲಿನ ನೀರಿನ ಕೊರತೆಯಿಂದ ಗಂಗಾವತಿ ತಾಲೂಕಿನಲ್ಲಿ ಒಂದೇ ಬೆಳೆ ಬೆಳೆಯುವ ಮೂಲಕ ರೈತರು ಕಷ್ಟದ ಜೀವನ ನಡೆಸಿದ್ದಾರೆ. ಕುಟುಂಬದ ನಾಲ್ಕೈದು ಜನರು ಬೆಂಗಳೂರಿಗೆ ಗುಳೆ ಹೋಗುವ ಮೂಲಕ ಅಲ್ಲಿಯ ಕೂಲಿ ನೆಚ್ಚಿಕೊಂಡಿದ್ದಾರೆ. ತೀವ್ರ ಬರದಿಂದಾಗಿ ಬಯಲು ಸೀಮೆ ಭೂಮಿಯಲ್ಲಿ ಏನು ಬೆಳೆಯಲಾಗಿಲ್ಲ. ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಇದೆಯಾದರೂ ಮಧ್ಯವರ್ತಿಗಳಿಂದಾಗಿ ಅವಶ್ಯಕತೆ ಇದ್ದವರಿಗೆ ಕೂಲಿ ಕೆಲಸ ಸಿಗುತ್ತಿಲ್ಲ.

Advertisement

ತಾಲೂಕಿನಲ್ಲಿ ಕೇಂದ್ರ ಸರಕಾರದ ಹೇಳಿಕೊಳ್ಳುವಂತಹ ಯೋಜನೆಗಳು ಅನುಷ್ಠಾನವಾಗಿಲ್ಲ. 1990ರಲ್ಲಿ ಶಂಕುಸ್ಥಾಪನೆಗೊಂಡ ಗಿಣಿಗೇರಾ ಮಹೆಬೂಬನಗರ ರೈಲ್ವೆ ಕಾಮಗಾರಿ ಇದೀಗ ಗಂಗಾವತಿವರೆಗೆ ಪೂರ್ಣಗೊಂಡಿದ್ದು ನಾಮಕಾವಸ್ತೆಗೆ ಜನರಿಗೆ ಅನುಕೂಲವಾಗದ ಸಮಯದಲ್ಲಿ ರೈಲು ಬಂದು ಹೋಗುತ್ತದೆ.

ನಗರಕ್ಕೆ ಮಂಜೂರಾದ ಅಮೃತಸಿಟಿ ಯೋಜನೆ ಜನರಿಗೆ ಅಷ್ಟಾಗಿ ತಲುಪಿಲ್ಲ. ವಿದ್ಯಾರ್ಥಿ ಯುವ ಜನರಿಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಗಂಗಾವತಿಗೆ ಮಂಜೂರಾದರೂ ಇಲ್ಲದಂತಾಗಿದೆ. ಪ್ರತಿ ವರ್ಷ ಗಂಗಾವತಿ ತಾಲೂಕಿನಿಂದ ವ್ಯವಹಾರ ವಿದ್ಯಾಭ್ಯಾಸ ಸೇರಿ ವಿವಿಧ ಕಾರಣಕ್ಕೆ ವಿದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದು ಪಾಸ್‌ಪೋರ್ಟ್‌ ವಿತರಣಾ ಕೇಂದ್ರವನ್ನು ಗಂಗಾವತಿ ಮಾಡದೇ ಕೊಪ್ಪಳದಲ್ಲಿ ಮಾಡಿದ್ದು, ಇದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ಮರಳಿ ಪ್ರಗತಿ ನಗರದಲ್ಲಿದ್ದ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ಅವಸಾನವಾಯಿತು. ಇದುವರೆಗೂ ಕೊಪ್ಪಳದಿಂದ ಪ್ರತಿನಿಧಿಸಿದ ಒಬ್ಬ ಲೋಕಸಭಾ ಸದಸ್ಯರು ಕೇಂದ್ರ ಸರಕಾರದ ಜತೆ ಮಾತನಾಡುವ ಅಥವಾ ಪತ್ರ ಬರೆಯುವ ಗೋಜಿಗೆ ಹೋಗಿಲ್ಲ.

ತಾಲೂಕಿನ ಸಂಗಾಪುರದಿಂದ ತಿರುಮಲಾ ಪುರದವರೆಗೆ ಬಹುತೇಕ ಗ್ರಾಮಗಳ ಜನರು ಪ್ರವಾಸೋದ್ಯಮದಿಂದ ಜೀವನ ನಡೆಸುತ್ತಿದ್ದಾರೆ. ಆನೆಗೊಂದಿ, ಚಿಂತಾಮಣಿ, ನವ ವೃಂದಾವನ, ವಾಲೀಕಿಲ್ಲಾ ಆದಿಶಕ್ತಿ ಮಂದಿರ, ಪಂಪಾ ಸರೋವರ, ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಹನುಮನಹಳ್ಳಿ,
ಋಷಿಮುಖ ಪರ್ವತ, ದೇಶ ವಿದೇಶಿಗರ ನೆಚ್ಚಿನ ತಾಣ ವಿರೂಪಾಪೂರಗಡ್ಡಿ ಸಾಣಾಪೂರ ಲೇಕ್‌, ಮೌರ್ಯರ ಕಾಲದ ಶಿಲಾಸಮಾಗಳು, ಕುಮ್ಮಟದುರ್ಗಾ, ಹೇಮಗುಡ್ಡ, ವಾಣಿಭದ್ರೇಶ್ವರ, ಆದಿಮಾನವ ಕಾಲದ ಗುಹಾಂತರ ಚಿತ್ರಗಳು ಹೀಗೆ ಹತ್ತು ಹಲವು ಪ್ರವಾಸಿ ತಾಣಗಳಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆ
ಶ್ರೀರಾಮಸರ್ಕ್ನೂಟ್‌ ಯೋಜನೆಯಲ್ಲಿ 200 ಕೋಟಿ ಹಣ ಮೀಸಲಿಟ್ಟು ಇಲ್ಲಿ ಮೂಲಸೌಲಭ್ಯ ಕಲ್ಪಿಸಲು ಯೋಜಿಸಿತ್ತು. ಈ ಯೋಜನೆಯನ್ನು 2015ರ ಕೇಂದ್ರದ ಬಜೆಟ್‌ ನಲ್ಲಿ ಘೋಷಣೆಯಾದರೂ ಇನ್ನೂ ಸಹ ಅನುಷ್ಠಾನವಾಗದೇ ಕಡತದಲ್ಲೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next