Advertisement
ಟೊರೆಂಟೋದ ಮಾದರಿಗ್ರಂಥಾಲಯ ಕೆನಡಾದ ಟೊರೆಂಟೋದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಹಲವು ಕಾರಣಗಳಿಗಾಗಿ ಇಡೀ ಜಗತ್ತಿಗೆ ಮಾದರಿಯಾಗುವ ಗ್ರಂಥಾಲಯವಾಗಿದೆ. ಇದೂ ಕೇವಲ ಪುಸ್ತಕ ಓದುವ ಗ್ರಂಥಾಲಯವಾಗದೇ ಹಲವು ರೀತಿಯ ಕಲಿಕೆ, ಕೌಶಲಾಭಿವೃದ್ಧಿಯ ತಾಣವಾಗಿದೆ.
ಟೋರೆಂಟೋದ ಮಾದರಿ ಗ್ರಂಥಾಲಯದಲ್ಲಿ ಒಂದೇ ಸೂರಿನಡಿ ಅನೇಕ ಆವಶ್ಯಕತೆಗಳನ್ನು ಪಡೆಯಬಹುದಾಗಿದ್ದು, ಈ ಸಾರ್ವಜನಿಕ ಗ್ರಂಥಾಲಯದಲ್ಲಿ 120 ದೇಶಗಳ ಮಿಕ್ಕೂ ಸುದ್ದಿ ಪತ್ರಿಕೆಗಳು, ಜರ್ನಲ್‌ಗಳು, ಮಿಲಿಯನ್ ಗಟ್ಟಲೇ ಪುಸ್ತಕಗಳು ನಾವು ಓದಬಹುದಾಗಿದೆ. ಈಗಾಗಲೇ ಹೇಳಿದಂತೆ ಇದೂ ಕೇವಲ ಓದುವ ತಾಣವಾಗದಷ್ಟೇ ಅಲ್ಲದೇ ಕಲಿಯುವ ತಾಣವಾಗಿದೆ. ಈ ಸಾರ್ವಜನಿಕ ಗ್ರಂಥಾಲಯದಲ್ಲಿ ಶೂ ನಿರ್ಮಿಸುವುದು, ಆಹಾರ ತಯಾರಿಸುವುದು, ಪಬ್ಲಿಕ್ ಸ್ಪೀಚ್ ನೀಡುವುದು ಹೇಗೆ ಎಂಬುದನ್ನು ಈ ಗ್ರಂಥಾಲಯದಲ್ಲಿ ಕಲಿಸಿಕೊಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ವೇದಿಕೆಯನ್ನು ಕೂಡ ನಿರ್ಮಿಸಲಾಗಿದೆ. ಹಾಗಾಗಿ ಓದಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಲಿಕೆಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಈ ಸಾರ್ವಜನಿಕ ಗ್ರಂಥಾಲಯದಲ್ಲಿ 3ಡಿ ಪ್ರಿಂಟರ್ ಹಾಗೂ ಸೆರ್ಲಾಕ್ ಹೋಮ್ಸ್ ಅಧ್ಯಯನ ಕೇಂದ್ರ ಎಂದು ಪ್ರತ್ಯೇಕವಾಗಿದ್ದು, ಇಲ್ಲಿ ಸಾಹಿತ್ಯ, ಸಂಶೋಧನೆ ಕುರಿತ ಗತ್ತಿನ 16 ಭಾಷೆಗಳ ಪುಸ್ತಕಗಳು ದೊರೆಯುತ್ತವೆ. ಇಲ್ಲಿ ಪುಸ್ತಕಗಳು ಡಿಜಿಟಲ್ ರೂಪದಲ್ಲಿ ಕೂಡ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಂಥಾಲಯದಲ್ಲಿ ಕಂಪ್ಯೂಟರ್‌ನ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಗ್ರಂಥಾಲಯವೂ ಕೇವಲ ಓದುವ, ಕಲಿಯುವುದಷ್ಟೇ ಅಲ್ಲದೇ ಮನೋರಂಜನೆಗೆ ಪೂರಕವಾಗಲೆಂದು ಸ್ಟುಡಿಯೋವನ್ನು ಕೂಡ ನಿರ್ಮಿಸಲಾಗಿದೆ. ಗ್ರಂಥಾಲಯಕ್ಕೆ ಓದಲು ಬಂದ ಸಾರ್ವಜನಿಕರು ಪುಸ್ತಕ, ಸುದ್ದಿ ಪತ್ರಿಕೆಗಳು ಓದಿ ಬೇಸರವಾದಾಗ ಗ್ರಂಥಾಲಯದಲ್ಲಿರುವ ಸ್ಟುಡಿಯೋದಲ್ಲಿ ಹೋಗಿ ಕಾಲ ಕಳೆದು, ಸಿನೆಮಾ, ಆ್ಯನಿಮೇಶನ್ ವಿಡಿಯೋಗಳನ್ನು ನೋಡಬಹುದಾಗಿದೆ. ಈ ವಿಚಾರಕ್ಕಾಗಿ ಕೆನಡಾ ದೇಶದ ಟೋರೆಂಟೋ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಜಗತ್ತಿನ ಎಲ್ಲ ದೇಶಗಳ ಗ್ರಂಥಾಲಯಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಇದಲ್ಲದೇ ಭಾರತ ದೇಶಕ್ಕೆ ಕೂಡ ಈ ಟೋರೆಂಟೋ ಮಾದರಿಯ ಗ್ರಂಥಾಲಯದ ಆವಶ್ಯಕತೆ ಹೆಚ್ಚಿದೆ.
Related Articles
Advertisement