Advertisement
ಪ್ರಶಸ್ತಿಯ ಹಾದಿಯಲ್ಲಿ ಅಲೆಕ್ಸಿ ಪಾಪಿರಿನ್ 11ನೇ ಶ್ರೇಯಾಂಕದ ಬೆನ್ ಶೆಲ್ಟನ್, 7ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್, 4ನೇ ಶ್ರೇಯಾಂಕದ ಹ್ಯೂಬರ್ಟ್ ಹುರ್ಕಾಜ್, ಬಳಿಕ ಅಮೆರಿಕದ ಸೆಬಾಸ್ಟಿಯನ್ ಕೋರ್ಡ ಅವರನ್ನು ಮಣಿಸಿದ್ದರು.ಈ ಜಯದಿಂದಾಗಿ ಪಾಪಿರಿನ್ ಅವರ ಟೆನಿಸ್ ರ್ಯಾಂಕ್ 62ರಿಂದ 23ಕ್ಕೆ ಏರಿಕೆಯಾಗಲಿದೆ.
ವನಿತಾ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಲ್ ಅಮೆರಿಕನ್ ಸೆಣಸಾಟದಲ್ಲಿ ಅವರು ಅಮಂಡಾ ಅನಿಸಿಮೋವಾ ವಿರುದ್ಧ 6-3, 2-6, 6-1 ಅಂತರದ ಜಯ ಒಲಿಸಿಕೊಂಡರು. ಇದು ಅವರ ಟೆನಿಸ್ ಬಾಳ್ವೆಯ
6ನೇ ಪ್ರಶಸ್ತಿಯಾಗಿದೆ.