ಒಟ್ಟಾವಾ: ಕಳೆದ ವರ್ಷ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾ ಸಂಸತ್‌ನಲ್ಲಿ ಶ್ರದ್ಧಾಂಜಲಿ
ಸಲ್ಲಿಸಲಾಗಿದೆ. ಆ ದೇಶದ ಸಂಸತ್‌ನ ಸ್ಪೀಕರ್ ಆತನ ಹೆಸರನ್ನು ಉಲ್ಲೇಖಿಸಿ ಗೌರವ ಸೂಚಿಸುವ ಬಗ್ಗೆ ಪ್ರಕಟಿಸಿದ್ದಾರೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ನಿಜ್ಜರ್‌ನನ್ನು ಕಳೆದ ವರ್ಷದ ಜೂ.23ರಂದು ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದರು. ಸಂಸತ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಕೆನಡಾ ಸರ್ಕಾರದ ನಡೆಗೆ ಭಾರತೀಯ ರಾಯಭಾರ ಕಚೇರಿ ತಕ್ಕ ತಿರುಗೇಟು
ನೀಡಿದೆ.
ಖಲಿಸ್ತಾನಿ ಉಗ್ರರು 1985ರಲ್ಲಿ ನಡೆಸಿದ ಏರ್ ಇಂಡಿಯಾ ವಿಮಾನ (ಕನಿಷ್ಕ) ಸ್ಫೋಟದಲ್ಲಿ ಮೃತಪಟ್ಟ 329 ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸುವಂತೆ ಕೆನಡಾದ ಭಾರತೀಯರಿಗೆ ಕರೆ ನೀಡಿದೆ.
1985ರ ಜೂನ್ 23ರಂದು ಏರ್ ಇಂಡಿಯಾ ವಿಮಾನದ ಮೇಲೆ ಖಲಿಸ್ತಾನ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಅದರಲ್ಲಿ 86 ಮಕ್ಕಳು ಸೇರಿದಂತೆ 329 ಮಂದಿ ಮೃತಪಟ್ಟಿದ್ದರು. ಜೂ.23ಕ್ಕೆ ಈ ದುರಂತ ನಡೆದು 39 ವರ್ಷ. ಕೆನಡಾದ ಏರ್ ಇಂಡಿಯಾ ಸ್ಮಾರಕದಲ್ಲಿ ಮೃತರಿಗೆ ನಮನ ಸಲ್ಲಿಸಲಾಗುತ್ತದೆ. ಭಾರತೀಯರು ಭಾಗಿಯಾಗಿ ಭಯೋತ್ಪಾದನೆ ವಿರುದ್ಧದ ಒಗ್ಗಟ್ಟನ್ನೂ ಪ್ರದರ್ಶಿಸಿ’ಎಂದು ಹೇಳಿದೆ.