Advertisement
ಎಲ್ಲೆಲ್ಲಿ ಹೂಡಿಕೆ?ಕೆನಡಾದ ಹೂಡಿಕೆದಾರರು ಭಾರತದ ಷೇರು, ಸಾಲ ಮಾರುಕಟ್ಟೆ, ಮೂಲಸೌಕರ್ಯ, ಗ್ರೀನ್ ಎನರ್ಜಿ, ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಂದರೆ ಸುಮಾರು 600ಕ್ಕೂ ಹೆಚ್ಚು ಕೆನಡಾದ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಇದರಲ್ಲಿ ದೊಡ್ಡ ಕಂಪೆನಿಗಳಾದ ಬಾಂಬೈಡೈìಯರ್, ಎಸ್‌ಎನ್‌ಸಿ ಲ್ಯಾವಲಿನ್ ಕೂಡ ಸೇರಿವೆ. ಇನ್ನು ಭಾರತದ 100ಕ್ಕೂ ಹೆಚ್ಚು ಕಂಪೆನಿಗಳು ಕೆನಡಾದಲ್ಲಿ ಅಸ್ತಿತ್ವ ಹೊಂದಿವೆ. ಇದರಲ್ಲಿ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋದಂಥ ಕಂಪೆನಿಗಳು ಸೇರಿವೆ. ಈ ಕಂಪೆನಿಗಳು ಕೆನಡಾದ 24 ಸಾವಿರ ಮಂದಿಗೆ ಉದ್ಯೋಗ ನೀಡಿವೆ. ಇದೆಲ್ಲ ಸೇರಿದರೆ ಒಟ್ಟಾರೆಯಾಗಿ ವಾರ್ಷಿಕ 100 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವಹಿವಾಟು ಆಗಲಿದೆ.
2000ರಿಂದ ಈಚೆಗೆ ನೋಡುವುದಾದರೆ, ಕೆನಡಾವು ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡುವ ದೇಶಗಳ ಸಾಲಿನಲ್ಲಿ 18ನೇ ಸ್ಥಾನ ಪಡೆದಿದೆ. ಕೆನಡಾದ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹಾಕಿದ್ದಾರೆ. ಅಂದರೆ ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ, ಪೇಟಿಯಂ, ಝೋಮ್ಯಾಟೋ, ನೈಕಾ, ದೆಲಿØàವರಿ, ವಿಪ್ರೋ ಮತ್ತು ಇನ್ಫೋಸಿಸ್‌ನಲ್ಲಿ ಹೂಡಿಕೆ ಇದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶೇ.0.5ರಷ್ಟು ವಿದೇಶಿ ಬಂಡವಾಳ ಕೆನಡಾದಿಂದ ಬಂದಿದೆ. ಸೇವೆ ಮತ್ತು ಮೂಲಸೌಕರ್ಯದ ವಲಯದಲ್ಲಿ ಶೇ.40.63ರಷ್ಟು ಕೆನಡಾದ ಹೂಡಿಕೆ ಇದೆ. ಕೆನಡಾದ ಪೆನ್ಶನ್ ಫಂಡ್ ಸಿಪಿಪಿಯು ಭಾರತದ ಷೇರುಮಾರುಕಟ್ಟೆಯಲ್ಲಿ 15 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಮತ್ತೂಂದು ಪೆನ್ಶನ್ ಕಂಪೆನಿ ಸಿಡಿಪಿಕ್ಯೂ 6 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಅಂಟಾರೀಯೋ ಟೀಚರ್ಸ್ ಪೆನ್ಶನ್ ಫಂಡ್ 3 ಬಿಲಿಯನ್ ಡಾಲರ್ ಹಾಕಿದೆ. ಒಟ್ಟಾರೆಯಾಗಿ ಕೆನಡಾದ ಪೆನ್ಶನ್ ಕಂಪೆನಿಗಳೇ 900 ಬಿಲಿಯನ್ ಡಾಲರ್‌ನಷ್ಟು ಹಣ ಹೂಡಿಕೆ ಮಾಡಿವೆ. ಇನ್ನು ಕೆನಡಾ ಸರಕಾರವು ಭಾರತದಲ್ಲಿ ಆರ್ಥಿಕ ಅಭಿವೃದ್ಧಿ, ಸಾಂಕ್ರಾಮಿಕ ರೋಗ ಚಿಕಿತ್ಸೆ, ಪೌಷ್ಟಿಕಾಂಶ, ಪುನರ್ಬಳಕೆ ಇಂಧನ ಯೋಜನೆಗಳಿಗಾಗಿ 76 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ.
Related Articles
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಕೆನಡಾ ನಡುವೆ ಆರ್ಥಿಕ ಸಹಭಾಗಿತ್ವದ ವಿಚಾರದಲ್ಲಿ ಯಶಸ್ವೀ ಭಾಗೀದಾರಿಕೆಗಳಾಗಿವೆ. ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಮಾತುಕತೆಗಳು ನಡೆಯುತ್ತಿದ್ದು, ಈಗಿನ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿವೆ. ಆರ್ಥಿಕ ಸಹಭಾಗಿತ್ವದ ವಿಚಾರಕ್ಕೆ ಬಂದರೆ, ಕೆನಡಾವು ಭಾರತದ ಒಟ್ಟಾರೆ ಉತ್ಪಾದಿತ ಸರಕುಗಳಲ್ಲಿ ಶೇ,0.23ರಷ್ಟು ರಫ್ತು ಮಾಡುತ್ತಿದೆ. 2022ರಲ್ಲಿ ಎರಡೂ ಸರಕಾರಗಳು ಇಂಡಿಯಾ- ಕೆನಡಾ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಬಗ್ಗೆ ಮಾತುಕತೆ ಶುರು ಮಾಡಿದ್ದವು. ಈಗ ಈ ಮಾತುಕತೆಗಳೂ ಸ್ಥಗಿತವಾಗುವ ಹಂತಕ್ಕೆ ಬಂದಿವೆ.
Advertisement
ಉಗ್ರರ ಗಡೀಪಾರಿಗಾಗಿ 5 ವರ್ಷಗಳಲ್ಲಿ ಭಾರತದಿಂದ 26 ಬಾರಿ ಮನವಿಭಾರತದಲ್ಲಿ ವಿವಿಧ ಅಪರಾಧ ಮತ್ತು ದೇಶದ್ರೋಹಿ ಕೃತ್ಯಗಳನ್ನು ಎಸಗಿ ತಲೆಮರೆಸಿಕೊಂಡು ಕೆನಡಾದಲ್ಲಿ ನೆಲೆಯಾಗಿರುವ ಖಲಿಸ್ಥಾನಿ ಬೆಂಬಲಿಗರು ಮತ್ತು ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಗಡೀಪಾರು ಮಾಡುವಂತೆ ಕೇಂದ್ರ ಸರಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ 26 ಬಾರಿ ಕೆನಡಾ ಸರಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಸರಕಾರ ಈ ಮನವಿಯನ್ನು ನಿರ್ಲಕ್ಷಿಸಿದ್ದೇ ಅಲ್ಲದೆ ಖಲಿಸ್ಥಾನಿ ಬೆಂಬಲಿತ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಭಾರತದಲ್ಲಿ ಭಯೋತ್ಪಾದನೆ ಮತ್ತು ಹೇಯ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿ ದೇಶದಿಂದ ಪರಾರಿಯಾಗಿರುವ 13 ಉಗ್ರರು ಮತ್ತು ಕ್ರಿಮಿನಲ್‌ಗಳು ಕೆನಡಾದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಪೈಕಿ ಕೆನಡಾದ ಬಾರ್ಡರ್ ಸರ್ವಿಸಸ್ ಏಜೆನ್ಸಿಯಲ್ಲಿ ಸೂಪರಿಂಟೆಂಡೆಂಟ್ ಆಗಿರುವ ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ, ಬುಧವಾರ ರಾತ್ರಿ ಹತ್ಯೆಗೀಡಾದ ಖಲಿಸ್ಥಾನಿ ಉಗ್ರ ಸುಖ್‌ದೂಲ್ ಸಿಂಗ್ ಅಲಿಯಾಸ್ ಸುಖಾ ದುನೆR ಸೇರಿದ್ದಾರೆ. ಖಲಿಸ್ಥಾನಿ ಟೈಗರ್ ಫೋರ್ಸ್‌ನ ಮುಖ್ಯಸ್ಥ ಹರ್‌ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಬಳಿಕವೂ ಈ ಬಗ್ಗೆ ಕೆನಡಾ ಸರಕಾರ ಭಾರತದ ಮನವಿಯ ಬಗೆಗೆ ತಲೆಕೆಡಿಸಿಕೊಂಡಿಲ್ಲ. ನಿಜ್ಜರ್ ಹತ್ಯೆ ಪ್ರಕರಣವನ್ನು ಕೆನಡಾ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿತ್ತಾದರೂ ಹತ್ಯೆ ನಡೆದು ಮೂರು ತಿಂಗಳುಗಳು ಕಳೆದರೂ ಈವರೆಗೆ ಓರ್ವನೇ ಓರ್ವ ಆರೋಪಿಯ ಬಗೆಗೆ ಕನಿಷ್ಠ ಸುಳಿವು ಕೂಡ ಲಭಿಸದಿರುವುದು ಸೋಜಿಗವೇ ಸರಿ. ಸಾಂಸ್ಕೃತಿಕ, ಶೈಕ್ಷಣಿಕ ಸಂಬಂಧ ಭಾರತ ಮತ್ತು ಕೆನಡಾ ಮಧ್ಯೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧವೂ ಚೆನ್ನಾಗಿತ್ತು. ಜಗತ್ತಿನಲ್ಲೇ ಭಾರತ ಬಿಟ್ಟರೆ ಹೆಚ್ಚು ಸಿಕ್ಖರು ವಾಸಿಸುತ್ತಿರುವುದು ಕೆನಡಾದಲ್ಲೇ. ವಾಷಿಂಗ್ಟನ್ ಪೋಸ್ಟ್ ಪ್ರಕಾರ 7,70,000 ಮಂದಿ ಸಿಕ್ಖರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. 2022ರ ದಾಖಲೆಗಳ ಪ್ರಕಾರ, ಕೆನಡಾದಲ್ಲಿ 3.40 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಕೆನಡಾ ಮತ್ತು ಭಾರತದ ಶೈಕ್ಷಣಿಕ ಸಂಸ್ಥೆಗಳ ನಡುವೆ 600 ಒಪ್ಪಂದಗಳಾಗಿವೆ. ಅಲ್ಲದೆ ಕೆನಡಾದಲ್ಲಿ ಜಗತ್ತಿನ 8 ಲಕ್ಷ ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ ಶೇ.40ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ. ಭಾರತ ಬಿಟ್ಟರೆ ಚೀನ ಎರಡನೇ ಸ್ಥಾನದಲ್ಲಿದೆ. ಶೇ.12ರಷ್ಟು ವಿದ್ಯಾರ್ಥಿಗಳು ಚೀನದವರಿದ್ದಾರೆ. ಮುಂದೇನಾಗಬಹುದು? ತಜ್ಞರ ಪ್ರಕಾರ, ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಅವರ ಭಾರತ ವಿರೋಧಿ ನಡೆಯಿಂದ ಜಾಗತಿಕ ಮಟ್ಟದಲ್ಲಿ ಅಂಥ ವ್ಯತ್ಯಾಸವೇನೂ ಆಗದು. ಈಗಿನ ಪರಿಸ್ಥಿತಿ ಪ್ರಕಾರ, ಟ್ರಾಡೊ ಅವರ ಹೇಳಿಕೆಯನ್ನು ಅಲ್ಲಿನ ರಾಜಕೀಯ ಪಕ್ಷಗಳೇ ಒಪ್ಪುತ್ತಿಲ್ಲ. ರಾಜಕೀಯ ಕಾರಣಗಳಿಂದಾಗಿ ಮತ್ತೂಂದು ದೇಶದ ಮೇಲೆ ಗೂಬೆ ಕೂರಿಸುವ ಮುನ್ನ ಯೋಚನೆ ಮಾಡಬೇಕು ಎಂದು ಹೇಳುತ್ತಿವೆ.
ಕೆನಡಾದಲ್ಲಿರುವ ಖಲಿಸ್ಥಾನಿಗಳ ಒತ್ತಡಕ್ಕೆ ಮಣಿದಿರುವ ಟ್ರಾಡೊ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳುವ ಸಲುವಾಗಿ ಭಾರತ ವಿರೋಧಿ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಅಮೆರಿಕ, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ದೇಶಗಳು ಸರಿಯಾಗಿ ಸ್ಪಂದಿಸಲಿಲ್ಲ. ಅಲ್ಲದೆ ಭಾರತವೂ ಹಿಂದಿನಿಂದಲೂ ಈ ಎಲ್ಲ ದೇಶಗಳ ಜತೆಗೆ ಖಲಿಸ್ಥಾನಿಗಳ ಪುಂಡಾಟದ ಬಗ್ಗೆ ಹೇಳಿಕೊಂಡೇ ಬಂದಿದೆ. ಈ ಖಲಿಸ್ಥಾನಿ ಅಬ್ಬರ ಈ ದೇಶಗಳಲ್ಲಿಯೂ ಇದೆ. ಭಾರತ ಮೊದಲಿನಿಂದಲೂ ಭಯೋತ್ಪಾದನ ವಿರೋಧಿ ನಡೆ ಅನುಸರಿಸಿಕೊಂಡು ಬಂದಿದ್ದು, ಈ ನಿಲುವಿಗೆ ಈ ದೇಶಗಳು ಬೆಂಬಲಿಸಿಕೊಂಡೇ ಬರಬೇಕಾಗಿದೆ. ಖಲಿಸ್ಥಾನಿಗಳ ಜತೆಗೆ ಪಾಕಿಸ್ಥಾನದ ಐಎಸ್‌ಐ ಮತ್ತು ಇನ್ನಿತರ ಉಗ್ರ ಸಂಘಟನೆಗಳು ಸಂಪರ್ಕದಲ್ಲಿರುವ ಬಗ್ಗೆಯೂ ಭಾರತ ಉಲ್ಲೇಖೀಸಿಕೊಂಡೇ ಬಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ದಿನಗಳವರೆಗೆ ಕೆನಡಾ ಮತ್ತು ಭಾರತದ ಸಂಬಂಧ ಹಾಳಾಗಬಹುದು. ಆದರೆ ಉಳಿದ ದೇಶಗಳ ಜತೆಗಿನ ದ್ವಿಪಕ್ಷೀಯ ಸಂಬಂಧ ಹಾಗೆಯೇ ಮುಂದುವರಿಯುತ್ತದೆ ಎಂದೇ ತಜ್ಞರು ಅಭಿಪ್ರಾಯಪಡುತ್ತಾರೆ. ಉಗ್ರ ಗುಂಪುಗಳ ನಡುವಣ ಗ್ಯಾಂಗ್‌ವಾರ್ ಕಾರಣ
ಕೆನಡಾ ಸಹಿತ ವಿದೇಶಗಳಲ್ಲಿ ಖಲಿಸ್ಥಾನಿ ಉಗ್ರರ ಹತ್ಯೆ ಸರಣಿ ಮುಂದುವರಿ ದಿರುವಂತೆಯೇ ಭಾರತ ಈ ಹತ್ಯೆಗಳಿಗೆ ಉಗ್ರ ಗುಂಪುಗಳ ನಡುವಣ ಗ್ಯಾಂಗ್‌ವಾರ್ ಕಾರಣ ಎಂದು ಹೇಳಿದೆ. ಬುಧ ವಾರ ರಾತ್ರಿ ನಡೆದ ಸುಖಾ ದುನೆR ಹತ್ಯೆಯ ಹೊಣೆಯನ್ನು ಸದ್ಯ ಹೊಸದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿ ಯಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ವಹಿಸಿಕೊಂಡಿರುವುದು ಭಾರತದ ಈ ವಾದವನ್ನು ಮತ್ತಷ್ಟು
ಪುಷ್ಟೀಕರಿಸಿದಂತಾಗಿದೆ.