ನವದೆಹಲಿ: ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೂ ಭಾರತ ಸರ್ಕಾರಕ್ಕೂ ಸಂಭಾವ್ಯ ಸಂಬಂಧವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಬೆನ್ನಲ್ಲೇ ಕೆನಡಾ ಸೋಮವಾರ ಉನ್ನತ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ.
ಭಾರತ ಸರ್ಕಾರ ಮತ್ತು ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ನಡುವಿನ ಸಂಬಂಧದ ಬಗ್ಗೆ ದೇಶದ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎಂದು ಟ್ರೂಡೊ ಹೇಳಿದರು.
ಇದರ ಪರಿಣಾಮವಾಗಿ ಕೆನಡಾದಲ್ಲಿರುವ ಭಾರತೀಯ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಹೊರಹಾಕಲಾಗಿದೆ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ. ಜೊತೆಗೆ ಜಸ್ಟಿನ್ ಟ್ರುಡೊ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದರು.
ಜಸ್ಟಿನ್ ಟ್ರುಡೊ ಹೇಳಿದ್ದೇನು ?
ಒಟ್ಟಾವಾದಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಕೆನಡಾದ ಭದ್ರತಾ ಏಜೆನ್ಸಿಗಳು ಭಾರತ ಸರ್ಕಾರದ ಏಜೆಂಟರ ನಡುವಿನ ಸಂಭಾವ್ಯ ಸಂಪರ್ಕ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಶ್ವಾಸಾರ್ಹ ಆರೋಪಗಳನ್ನು ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ಹೇಳಿದ್ದಾರೆ.
ಜಿ20 ಶೃಂಗಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಅಲ್ಲದೆ “ಭಾರತ ಸರ್ಕಾರದ ಉನ್ನತ ಗುಪ್ತಚರ ಭದ್ರತಾ ಅಧಿಕಾರಿಗಳಿಗೆ ಕೆನಡಾ ತನ್ನ ಆಳವಾದ ಕಳವಳವನ್ನು ಘೋಷಿಸಿದೆ ಎಂದು ಟ್ರುಡೊ ಹೇಳಿದ್ದಾರೆ.
ಇದನ್ನೂ ಓದಿ: New Parliament: ಇಂದಿನಿಂದ ಹೊಸ ಸಂಸತ್ ಭವನದಲ್ಲಿ ಕಲಾಪ… ಶಾಂತಿ ಕಾಪಾಡಲು ಸ್ಪೀಕರ್ ಮನವಿ