ಒಟ್ಟಾವ (ಕೆನಡಾ): ಭಾರತೀಯರೂ ಸೇರಿದಂತೆ ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಅನ್ಯದೇಶೀಯ ವಿದ್ಯಾರ್ಥಿಗಳ ಸಂಖ್ಯೆಗೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಅಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ 9 ಲಕ್ಷಕ್ಕೇರಿದೆ. ಪರಿಣಾಮ ಅಲ್ಲಿ ಮನೆಗಳ ಕೊರತೆ ಹೆಚ್ಚಾಗಿದ್ದು, ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರಲು ಸರ್ಕಾರ ಮುಂದಾಗಿದೆ.
ಕೆನಡಾದಲ್ಲಿ ಕೆಲಸದ ಪರವಾನಗಿ ಸಿಗುವುದು ಸುಲಭ. ಆದ್ದರಿಂದ ಅಲ್ಲಿ ಓದಲು ಆಸಕ್ತಿ ತೋರುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ. ಕೆನಡಾ ಸರ್ಕಾರವೂ ತನ್ನ ಆರ್ಥಿಕ ಬೆಳವಣಿಗೆಗೆ, ವಿದೇಶೀಯರನ್ನೇ ಅವಲಂಬಿಸಿದೆ. 2012ರಲ್ಲಿ ಆ ದೇಶದಲ್ಲಿದ್ದ ವಿದ್ಯಾರ್ಥಿಗಳ ಪ್ರಮಾಣ 2,75,000. ಈ ಸಂಖ್ಯೆ 2022ಕ್ಕೆ 8 ಲಕ್ಷಕ್ಕೇರಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಭಾರತೀಯರ ಪ್ರಮಾಣವೇ ಶೇ.40ರಷ್ಟಿದೆ.
ಏನು ಸಮಸ್ಯೆಯೇನು?:
ಸಿಖ್ ಸಮುದಾಯ ಕೆನಡಾದಲ್ಲಿ ನೆಲೆಸಲು ಆಸಕ್ತಿ ತೋರುತ್ತಿದೆ. ಹಾಗೆಯೇ ಇತರೆ ಭಾರತೀಯರೂ ಅಲ್ಲಿಗೆ ಹೋಗುತ್ತಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮ ಅಲ್ಲಿ ಮನೆಗಳ ಪ್ರಮಾಣ ತೀರಾ ಕಡಿಮೆಯಾಗಿದೆ, ಹಾಗೆಯೇ ಬಾಡಿಗೆ ವಿಪರೀತ ಜಾಸ್ತಿಯಾಗಿದೆ. ಇದನ್ನು ಕೆನಡಾ ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದೇಶಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದೆ.
– ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ- 9 ಲಕ್ಷ
– ಈ ಪೈಕಿ ಭಾರತೀಯರ ಪ್ರಮಾಣ – ಶೇ.40
– ಕೆನಡಾದಲ್ಲಿ ವಾಸವಿರುವ ಭಾರತೀಯರು- 18 ಲಕ್ಷ
………