ಕೆನಡಾ: ಸರ್ಕಾರಿ ಅಧಿಕಾರಿಗಳು ಧಾರ್ಮಿಕ ಗುರುತು ಧರಿಸುವುದನ್ನು ನಿಷೇಧಿಸುವ ಮಸೂದೆಗೆ ಕೆನಡಾದ ಕ್ಯೂಬೆಕ್ ಪ್ರಾಂತ್ಯದ ಜನಪ್ರತಿನಿಧಿಗಳು ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ಸರ್ಕಾರಿ ಅಧಿಕಾರಿಗಳು ಸಿಖ್ಬರ ಪೇಟ(ಟರ್ಬನ್) ಅಥವಾ ಮುಸ್ಲಿಮರ ಹಿಜಾಬ್ ಧರಿಸುವಂತಿಲ್ಲ. ಈ ವಿವಾದಿತ ಮಸೂದೆಯನ್ನು ಕ್ಯೂಬೆಕ್ ಸಂಸತ್ತಿನಲ್ಲಿ 75-35 ಮತಗಳಿಂದ ಅನುಮೋದಿಸಲಾಗಿದೆ. ಈ ಮಸೂದೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ಯೂ ಸೇರಿದಂತೆ ಹಲವು ಮುಖಂಡರು ವಿರೋಧಿಸಿದ್ದರು.
ಆದರೆ ಇದರಲ್ಲಿ ‘ಧಾರ್ಮಿಕ ನಂಬಿಕೆ ಗಳನ್ನು ಪ್ರದರ್ಶಿಸುವುದು’ ಎಂಬ ವಿಷಯ ವನ್ನು ಸ್ಪಷ್ಟವಾಗಿ ಉಲ್ಲೇಖೀಸಿಲ್ಲ. ಹೀಗಾಗಿ ಇದು ವಿವಾದಕ್ಕೀಡಾಗುವ ಸಾಧ್ಯತೆಯಿದೆ.
Advertisement