Advertisement

UV Fusion: ಕಳೆದ ಸಮಯ ಮತ್ತೆ ಸಿಗುವುದೇ

03:05 PM Sep 24, 2023 | Team Udayavani |

ಮನುಷ್ಯನ ಜೀವನದಲ್ಲಿ ಸಮಯ ಎನ್ನುವುದು ಅತ್ಯಮೂಲ್ಯ. ಸಮಯವನ್ನು ಗೌರವಿಸಬೇಕು. ಗಾಳಿಯನ್ನು ತಡೆಯಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಈ ಸಮಯ ಕೂಡ ಕೈಗೆ ಸಿಗದ ಮಾಯ ಜಿಂಕೆ. ಕಷ್ಟ ಸುಖ ಎನ್ನುವುದು ಕೇವಲ ಮಾನವನಿಗೆ ಇರಬಹುದು ಆದರೆ ಈ ಮೂರು ಅಕ್ಷರದ ಸಮಯಕ್ಕೆ ಇಲ್ಲ.

Advertisement

ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಅರಿವಿಲ್ಲದೆ ಜನರು ಕೈಚೆಲ್ಲಿರುವ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮಾರ್ಗದರ್ಶಕರಾಗಿ ಶಿಕ್ಷಕರು ಹೇಳುತ್ತಿದ್ದ ಬುದ್ಧಿಮಾತನ್ನು ಕೇಳದೇ ಇತರೆ ಆಟೋಟ, ದುಶ್ಚಟಗಳಿಗೆ ಒಳಗಾಗುವುದನ್ನು ಕಾಣಬಹುದು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಂಬ್ಬ ಮನುಷ್ಯನು ಸಮಯವನ್ನು ಒಂದಲ್ಲ ಒಂದು ರೀತಿಯಲ್ಲಿ ದುರುಪಯೋಗ ಮಾಡಿಕೊಂಡಿರುತ್ತಾನೆ.

ಕಳೆದು ಹೋದ ಸಮಯದಂತೆ, ಆಡಿ ಹೋದ ಮಾತು, ಒಡೆದು ಹೋದ ಮುತ್ತನ್ನು ಎಂದಿಗೂ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಮಾತನಾಡುವಾಗ ಸಾವಿರ ಬಾರಿ ಯೋಚಿಸಬೇಕು ಎಂದು ಬಸವಣ್ಣನವರು ವಚನದಲ್ಲಿ ತಿಳಿಸಿರುವುದು ಕೂಡ ನಾವು ಕಾಣಬಹುದು. ಆದರೆ ನಮ್ಮ ಹಿರಿಯರ, ವಚನಕಾರರ ನುಡಿಯನ್ನು ಇಂದು ಯಾರು ಕೂಡ ಅನುಸರಿಸುವವರಿಲ್ಲ. ತನ್ನ ಮಾತೇ ಸರಿ ಎಂದು ಅಹಂನಿಂದ ನಿರ್ಧರಿಸಿ ನುಡಿದು ನಡೆಯುತ್ತಾ ಜೀವನವನ್ನೇ ವ್ಯರ್ಥಪಡಿಸಿಕೊಳ್ಳುತ್ತಿದ್ದೇವೆ.

ಶ್ರೀಮಂತ, ಬಡವ ಎನ್ನುವ ತಾರತಮ್ಯದ ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿ ಇರುವುದು ದಿನದ ಇಪ್ಪತ್ನಾಲ್ಕು ಗಂಟೆ ಮಾತ್ರ. ಸಮಯ ಎಲ್ಲರನ್ನೂ ಪರಿಚಯಿಸುತ್ತದೆ. ಆದರೇ ಯಾರು ನಮ್ಮವರೆಂದು ಸಮಯ ಬಂದಾಗಲೇ ಅರಿವಾಗುತ್ತದೆ. ಎಷ್ಟೋ ಬಾರಿ ನಮ್ಮೊಳಗಿನ ಜಂಭದಿಂದ ದುಡುಕಿ ಬಿಡುತ್ತೇವೆ. ಇನ್ನೊಂದು ಹೇಳುವುದಾದರೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಜಂಗಮವಾಣಿಯಲ್ಲಿ ಸಿಲುಕಿಕೊಂಡು ಸಮಯವ ಕಳೆದು ಬಿಡುತ್ತೇವೆ. ಇದರೊಂದಿಗೆ ಸಿನೆಮಾಗಳನ್ನು ಅಥವಾ ಇನ್ಯಾವುದೋ ಆಟ, ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇವೆ. ಅದೇ ಯಾರೋಬ್ಬರು ಬಂದು ಭಗವದ್ಗೀತೆ ಓದು ಎಂದರೆ ನಮ್ಮಲ್ಲಿ ಸಮಯವಿಲ್ಲ ಎನ್ನುತ್ತೇವೆ. ಆ ಕ್ಷಣ ಸಮಯದ ಗೋಚರವಾಗುತ್ತದೆ ಎಷ್ಟು ವಿಪರ್ಯಾಸವಲ್ಲ ನಮ್ಮ ಜೀವನ.

ಹುಟ್ಟಿದ ಪ್ರತಿಯೊಬ್ಬನು ಸಾಯಲೇಬೇಕು. ಎಷ್ಟು ವರ್ಷ ಬದುಕಿರುತ್ತೇವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಇರುವಷ್ಟು ದಿನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಬಾಳುವುದನ್ನು ಕಲಿತಾಗ ಅಂದುಕೊಂಡಿದ್ದ ಗುರಿ ಮತ್ತು ಉತ್ತಮ ರೀತಿಯ ದಾರಿಯನ್ನು ಹಿಡಿಯಲು ಸಾಧ್ಯವಿದೆ.

Advertisement

-ಅನನ್ಯ ಎಚ್‌.

ಸುಬ್ರಹ್ಮಣ್ಯ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ,

ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next