Advertisement
ಬಾಯಿಯು ನಮ್ಮ ದೇಹದ ಇತರ ಭಾಗಗಳ ಪ್ರವೇಶದ್ವಾರವಿದ್ದಂತೆ, ಹೀಗೆ ನಮ್ಮ ದೇಹದ ಇತರ ರೋಗಗಳ ಚಿಹ್ನೆಯು ಬಾಯಿಯಲ್ಲಿ ಕಂಡುಬರಬಹುದು. ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ಕೂಡ, ಇದರ ಚಿಹ್ನೆಗಳು ಬಾಯಿಯಲ್ಲಿ ಕಾಣಬಹುದು.
Related Articles
Advertisement
ವಸಡು ರೋಗ ಮತ್ತು ವಸಡು ಸುತ್ತ ಪರೆ ರೋಗ ಹಲ್ಲಿನ ಮೇಲೆ ಕುಳಿತುಕೊಳ್ಳುವ, ಶೇಖರವಾಗುವ ಬ್ಯಾಕ್ಟೀರಿಯಾಯುಕ್ತ ದಂತ ಪಾಚಿ .ಸಾಮಾನ್ಯವಾಗಿ, ವಸಡು ರೋಗವು ನಮ್ಮ ಹಲ್ಲಿನ ಮೇಲಿನ ದಂತ ಪಾಚಿಗೆ ಅನುಗುಣವಾಗಿರುತ್ತದೆ, ಆಂದರೆ, ಕಡಿಮೆ ದಂತಪಾಚಿ ಇರುವವರಲ್ಲಿ ವಸಡು ರೋಗ ಮತ್ತು ವಸಡು ಸುತ್ತ ಪರೆ ರೋಗ ತೀವ್ರತೆ ಕಡಿಮೆಯಿರುತ್ತದೆ. ಮತ್ತು ದಂತ ಪಾಚಿ ಹೆಚ್ಚು ಇರುವವರಲ್ಲಿ ಇದರ ತೀವ್ರತೆ ಹೆಚ್ಚಾಗಿರುತ್ತದೆ.
ಆದರೆ ಸಕ್ಕರೆ ಕಾಯಿಲೆ ಇರುವವರಲ್ಲಿ, ದಂತ ಪಾಚಿಯು ಸ್ವಲ್ಪವಿದ್ದರೂ ಕೂಡ ವಸಡು ರೋಗದ ತೀವ್ರತೆ ಹೆಚ್ಚಿರುತ್ತದೆ. ವಸಡು ಮತ್ತು ಹಲ್ಲಿನ ಸುತ್ತ ಇರುವ ಎಲುಬು, ಒಳಗೊಳಗೆ ಹಾಳಾಗುತ್ತಾ ಇರುವುದು. ದಂತ ಸುತ್ತು ಪರೆ ರೋಗ ತಜ್ಞರು ನಿಮ್ಮ ವಸಡನ್ನು ಪರೀಕ್ಷಿಸುವಾಗ ಈ ಅಂಶ ನಿಮ್ಮ ಗಮನಕ್ಕೆ ತಂದು ಡಯಾಬಿಟಿಸ್ ಪರೀಕ್ಷೆಗೆ ನಿಮ್ಮನ್ನೇ ಕೇಳಬಹುದು.
ವಸಡಿನಲ್ಲಿ ಕೀವು ತುಂಬಿದ ಗುಳ್ಳೆಗಳು ಡಯಾಬಿಟಿಸ್ ಇರುವವರಲ್ಲಿ, ನಮ್ಮ ಬಿಳಿರಕ್ತ ಕಣಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಮತ್ತು ದಂತಪಾಚಿಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಹೆಚ್ಚುವಿಕೆಯಿಂದಾಗಿ, ಅಲ್ಲಲ್ಲಿ ವಸಡು ಗುಳ್ಳೆಗಳಾಗಿ ಕೀವು ತುಂಬಿರುತ್ತದೆ. ಇವು ಡಯಾಬಿಟಿಸ್ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾದಾಗ ಬಂದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ ಕಡಿಮೆಯಾಗುತ್ತದೆ. ಒಮ್ಮೆ ಒಂದು ಹಲ್ಲಿನ ಪಕ್ಕ ಕಂಡುಬಂದರೆ, ಇನ್ನೊಮ್ಮೆ ಇನ್ನೊಂದು ಹಲ್ಲಿನ ಪಕ್ಕ ಕಂಡುಬರುತ್ತದೆ. ಇಂತಹ ಚಿಹ್ನೆಗಳಿದ್ದಲ್ಲಿ ನಿಮ್ಮ ರಕ್ತಪರೀಕ್ಷೆ ಮಾಡುವುದು ಉತ್ತಮ. ಜೊಲ್ಲು ಸ್ರವಿಕೆ ಮತ್ತು “ರುಚಿ’ಯಲ್ಲಿ ಬದಲಾವಣೆಜೊಲ್ಲುರಸ
ನಮ್ಮ ಬಾಯಿಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಅಂಗವಾಗಿದೆ. ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಪ್ರಮುಖ ಅಂಗವಾಗಿದೆ. ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಸ್ರವಿಸುವಿಕೆ ಕಡಿಮೆಯಾಗುವುದು. ಇದರಿಂದಾಗಿ, ಇವರಿಗೆ ಆವಾಗಾವಾಗ ನೀರು ಕುಡಿಯಬೇಕೆನ್ನಬಹುದು. ಜೊಲ್ಲುರಸ ಸ್ರವಿಸುವಿಕೆ ಕಡಿಮೆಯಾಗಿ, ಬಾಯಿಯ ಒಳಚರ್ಮವು ಉರಿಯೂತವು ಕಾಣಬಹುದು. ಇದಲ್ಲದೆಯೂ, ಹಲ್ಲಿನ ಮೇಲೆ ದಂತ ಪಾಚಿಯ ಸಂಗ್ರಹಣೆಯೂ ಜಾಸ್ತಿಯಾಗುವುದು. ಜೊಲ್ಲಿನಲ್ಲಿರುವ ರೋಗ ನಿರೋಧಕ ಅಂಶಗಳು, ಬಾಯಿಯಲ್ಲಿ ಸಿಗದೇ ಇರುವುದರಿಂದ, ದಂತಕುಳಿ (ಹಲ್ಲು ಕುಳಿಗಳು) ಕೂಡ ಜಾಸ್ತಿಯಾಗುವುದು. ವಿಪರೀತ ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಸ್ರವಿಸುವ ಗ್ರಂಥಿಗಳು ಊದಿಕೊಂಡಿರುವುದು ಕೂಡ ನಿಮ್ಮ ಬಾಯಿಯಲ್ಲಿ ಸರಿಯಾಗಿ ಜೊಲ್ಲು ರಸ ಸ್ರವಿಸುವಿಕೆ ಆಗುತ್ತಿದೆಯೇ ಇಲ್ಲವೇ ಎಂದು ನಿಮ್ಮ ದಂತವೈದ್ಯರು ಪರೀಕ್ಷಿಸಿ, ಸರಿಯಿಲ್ಲದಿದ್ದಲ್ಲಿ ‘ಸಕ್ಕರೆ ಕಾಯಿಲೆಗಾಗಿ’ ರಕ್ತ ಪರೀಕ್ಷೆ ಮಾಡುತ್ತಾರೆ. ಇದಲ್ಲದೆಯೂ ‘ರುಚಿ’ಯಲ್ಲಿ ಹೆಚ್ಚು ಕಡಿಮೆಯಾಗುವುದು ಕೂಡ ವಿಪರೀತ ಸಕ್ಕರೆ ಕಾಯಿಲೆ ಇರುವವರಲ್ಲಿ ಸಾಮಾನ್ಯ. ಶೀಲೀಂಧ್ರ ಸೋಂಕುಗಳು
ಬಾಯಿಯ ಒಣಚರ್ಮದಲ್ಲಿ ನಾಲಿಗೆಯ ಮೇಲೆ ಶಿಲೀಂಧ್ರ ಸೂಕ್ಷ್ಮಜೀವಿಗಳಿಂದ ಬಿಳಿ ಪದರವು ಕಂಡುಬರುತ್ತದೆ. ಇದನ್ನು ಹತ್ತಿಯಿಂದ ತೆಗೆದಾಗ ಬಂದು ಬಿಡುವುದಲ್ಲದೇ, ಕೆಳಗಿರುವ ಕೆಂಪಾದ ಭಾಗವು ಕಾಣುವುದು. ಇಂತಹ ಶಿಲೀಂಧ್ರ ಸೋಂಕು, ಸಕ್ಕರೆ ಕಾಯಿಲೆ ಇರುವವರಲ್ಲಿ ಸಾಮಾನ್ಯ ಇಂತಹ ಬಿಳಿಪದರವು ನಿಮ್ಮ ಬಾಯಿಯಲ್ಲಿ ಕಂಡಲ್ಲಿ ನಿಮಗೆ ‘ಸಕ್ಕರೆ ಕಾಯಿಲೆ’ ಪರಿಶೀಲನೆ ಅಗತ್ಯ.
ಇದಲ್ಲದೇ, ಸಕ್ಕರೆ ಕಾಯಿಲೆ ಇರುವವರಲ್ಲಿ, ಒಳಚರ್ಮವು, ಕೆಲವು ಚರ್ಮರೋಗಗಳಾದ, ಲೈಕನ್ ಪ್ಲಾನಸ್ ಬಾಯಿಯ ಉರಿಯ ಕಾಯಿಲೆಯೂ ಜಾಸ್ತಿಯಾಗಿರುವುದು. ಇವೆಲ್ಲಾ ಬಾಯಿಯಲ್ಲಿ ಕಾಣುವ ಚಿಹ್ನೆಯಾದರೆ, ಇನ್ನು ಕೆಲವರಲ್ಲಿ ಯಾವ ಚಿಹ್ನೆಯೂ ಕಾಣದಿದ್ದರೂ ದಂತ ವೈದ್ಯರು ‘ರಕ್ತ ಪರಿಶೀಲನೆ’ಗೆ ಸೂಚಿಸಬಹುದು. ನೀವು 40 ವರ್ಷಕ್ಕಿಂತ ಮೇಲಿನವರಾಗಿದ್ದರೆ ಅಥವಾ ನಿಮ್ಮ ತಂದೆ/ತಾಯಿ/ಅಣ್ಣ-ತಮ್ಮ/ಅಕ್ಕ-ತಂಗಿಯವರಲ್ಲಿ ಸಕ್ಕರೆ ಕಾಯಿಲೆ ಇದ್ದಲ್ಲಿ, ಅಥವಾ ಕೆಲವು ದೇಹದ ಇತರೇ ಚಿಹ್ನೆಗಳಾದ ಅತಿಯಾದ ಹಸಿವು, ಬಾಯಾರಿಕೆ ಅಥವಾ ಆವಾಗಾವಾಗ ಮೂತ್ರ ಹೋಗಬೇಕಾಗಿ ಅನಿಸುವುದು, ನಿಮಗೆ ಆದ ದೇಹದ ದೇಹದ ಗಾಯಗಳು ಗುಣವಾಗದೇ ಇರುವುದು. ಇವೆಲ್ಲವೂ ಸಕ್ಕರೆಯ ಕಾಯಿಲೆಯ ರಕ್ತ ಪರಿಶೀಲನೆಗೆ ಎಡವು ಮಾಡಿಕೊಡುವುದು. ಹೀಗೆ ಇದ್ದಲ್ಲಿ ನಿಮ್ಮ ದಂತವೈದ್ಯರು ನಿಮಗೆ, ರಕ್ತ ಪರಿಶೀಲನೆಗೆ ಹೇಳಿದ್ದಲ್ಲಿ ತಪ್ಪದೇ ಮಾಡಿಸಿ, ಇದರಿಂದಾಗಿ ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪ್ರಾರಂಭ ಮಾಡಿದ್ದಲ್ಲಿ, ಸಕ್ಕರೆ ಕಾಯಿಲೆ ದುಷ್ಪರಿಣಾಮಗಳು ಕಡಿಮೆಯಾಗುವುದು ಮತ್ತು ಆರೋಗ್ಯ ಜೀವನದಲ್ಲಿ ದಂತವೈದ್ಯರ ಪಾತ್ರವು ನಿಮಗೆ ಅರಿವಾಗುವುದು. – ಡಾ| ಜಿ. ಸುಬ್ರಾಯ ಭಟ್,
ಅಸೋಸಿಯೇಟ್ ಡೀನ್, ಪೀರಿಯೋಡಾಂಟಿಕ್ಸ್ ವಿಭಾಗ,
ಮಣಿಪಾಲ ವಿ.ವಿ.