Advertisement

ಕೋವಿಡ್‌-19 ಸೋಂಕು ಹರಡುವಿಕೆಯಲ್ಲಿ ಶ್ವಾನಗಳ ಪಾತ್ರ

11:41 AM Apr 20, 2020 | sudhir |

ಟೊರಾಂಟೋ: ಕೋವಿಡ್‌-19 ಸೋಂಕು ಹರಡುವಿಕೆಯಲ್ಲಿ ಬೀದಿ ನಾಯಿಗಳೂ ಪ್ರಮುಖ ಪಾತ್ರ ವಹಿಸಲಿದ್ದು, ನಿರ್ದಿಷ್ಟವಾಗಿ ನಾಯಿ ಕರಳಿನಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನದ ವರದಿ ತಿಳಿಸಿದೆ.

Advertisement

ಮಾಲಿಕ್ಯುಲರ್‌ ಬಯೋಲಜಿ ಮತ್ತು ಎವಲ್ಯೂಷನ್‌ ಪತ್ರಿಕೆಯಲ್ಲಿ ಈ ಕುರಿತಾದ ವರದಿ ಪ್ರಕಟವಾಗಿದ್ದು, ಕೆನಡಾದ ಒಟ್ಟಾವ ವಿಶ್ವವಿದ್ಯಾಲಯದ ಕ್ಸುಹುವಾ ಕ್ಸಿಯಾ ಸಂಶೋಧಕರ ತಂಡ ಈ ಅಧ್ಯಯನವನ್ನು ನಡೆಸಿದೆ. ಹಾವುಗಳಿಂದ ಪ್ರಾರಂಭವಾಗಿ ಮಧ್ಯಂತರದಲ್ಲಿ ಪ್ಯಾಂಗೊಲಿನ್‌, ಇತ್ತೀಚೆಗೆ ಬಾವಲಿಗಳಿಂದ ಸಾರ್ಷ್‌-ಕೋವ್‌-2 ಎಂಬ ವೈರಸ್‌ ಮನುಷ್ಯರಿಗೆ ಹರಡಿದೆ ಎಂದು ಅಧ್ಯಯನ ಹೇಳಿದೆ.

ವರದಿಯ ಪ್ರಕಾರ, ವಿಶ್ವಾದ್ಯಂತ ನಾಯಿಗಳ ದತ್ತಾಂಶ ಪರಿಶೀಲಿಸಿದಾಗ ಅತಿ ಹೆಚ್ಚು ನಾಯಿಗಳೇ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿವೆ. ಅದರಲ್ಲಿಯೂ ಕರುಳಿಗೆ ಸಂಬಂಧಪಟ್ಟ ಕಾಯಿಲೆ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜತೆಗೆ ಕೋವಿಡ್, ಸಾರ್ಷ್‌-ಕೋವ್‌-2, ಬ್ಯಾಟ್‌ ಕೋವ್‌, ರ್ಯಾಟ್‌ ಟಿಜಿ -13 ವೈರಸ್‌ಗಳು ನಾಯಿಗೆ ಹರಡಿರುವ ರೋಗಗಳ ಲಕ್ಷಣಗಳಿಗೆ ಹೋಲುತ್ತವೆ ಎಂದು ಹೇಳಲಾಗಿದ್ದು, ನಾಯಿಗಳು ಬಾವಲಿಗಳನ್ನು ತಿನ್ನುವ ಪರಿಣಾಮ ಅವುಗಳಿಗೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಬೀದಿನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ವೈರಾಣುಗಳು ಮಾನವನಿಗೂ ಹರಡುವ ಸಂಭವವಿದೆ ಎಂದು ಉಲ್ಲೇಖೀಸಿದೆ.

ಕ್ಸುಹುವಾ ಕ್ಸಿಯಾ ಅವರ ಪ್ರಕಾರ, ಈ ಪ್ರಾಣಿಗಳಿಂದ ಪ್ರತ್ಯೇಕಿಸಲ್ಪಟ್ಟ ವೈರಸ್‌ಗಳು ಸಾರ್ಷ್‌-ಕೋವ್‌-2ಕ್ಕೂ ತುಂಬಾ ಭಿನ್ನವಾಗಿವೆ. ಸಾರ್ಷ್‌-ಕೋವ್‌-2 ಮೂಲ ಮತ್ತು ಆರಂಭಿಕ ಪ್ರಸರಣ ಪತ್ತೆ ಹಚ್ಚಲು ಪೂರ್ವಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement

ಸೋಂಕನ್ನು ಕೊಲ್ಲಲು ಬೇಕು ಜ್ಯಾಪ್‌
ಮಾನವರಲ್ಲಿ ಮತ್ತು ಸಸ್ತನಿಗಳಲ್ಲಿ ಜ್ಯಾಪ್‌ (ಘಅಕ) ಎಂಬ ಪ್ರಮುಖ ಆಂಟಿವೈರಲ್‌ ಪ್ರೋಟೀನ್‌ ಎಂಬ ಅಂಶವಿದ್ದು, ವೈರಸ್‌ ಕೊಲ್ಲಲು ಜ್ಯಾಪ್‌ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕ್ಸಿಯಾ ಹೇಳಿದ್ದಾರೆ. ಯಾರಲ್ಲಿ ಈ ಅಂಶ ಕಡಿಮೆ ಇರುತ್ತದೆಯೋ ಅವರಿಗೆ ವೈರಸ್‌ ಹರಡುತ್ತದೆ.

ಪ್ರಸ್ತುತ ಕೋವಿಡ್‌-19 ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಹರಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪತ್ತೆ ಹಚ್ಚಲು ಜಗತ್ತಿನ ವಿಜ್ಞಾನಿಗಳು ಪರದಾಡುತ್ತಿದ್ದಾರೆ. ಅಲ್ಲದೆ, ಸಂಶೋಧಕರು ಕಾಡು ನಾಯಿಗಳಲ್ಲಿ ಸಾರ್ಷ್‌ ತರಹದ ವೈರಸ್‌ ಕಂಡು ಬರುತ್ತದೆಯೇ ಇಲ್ಲವೇ ಎಂಬುದರ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next