ಮಣಿಪಾಲ: ಭಾರತೀಯ ಕ್ರಿಕೆಟಿನ ಮಾಜಿ ನಾಯಕ, ಬಂಗಾಲದ ಹುಲಿ, ಅಭಿಮಾನಿಗಳ ನೆಚ್ಚಿನ ದಾದಾ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಏಕಮಾತ್ರ ಸ್ಪರ್ಧಿ. ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಗಂಗೂಲಿ ಹೆಸರನ್ನು ಅವಿರೋಧವಾಗಿ ಸುಚಿಸಿವೆ. ಈ ಹಿನ್ನಲೆಯಲ್ಲಿ “ಸೌರವ್ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದರಿಂದ ಭಾರತೀಯ ಕ್ರಿಕೆಟಿನಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಬಹುದೇ?” ಎಂಬ ಪ್ರೆಶ್ನೆಯನ್ನು ಉದಯವಾಣಿ ಕೇಳಿತ್ತು. ಅದಕ್ಕೆ ಬಂದ ಆಯ್ದ ಪ್ರತಿಕ್ರಿಯೆಗಳು ಇಂತಿವೆ.
ಹಸನ್: ಸೌರವ ಗಂಗೂಲಿ ಕ್ರಿಕೆಟ್ ಲೋಕದಲ್ಲಿ ಭಾರತ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರು. ಈ ನಾಯಕ ತನ್ನ ನಾಯಕತ್ವ, ಗುಣಮಟ್ಟ, ಅಕ್ರಮಣಕಾರಿ ಶೈಲಿ ಮತ್ತು ಉತ್ತಮ ಬ್ಯಾಟಿಂಗ್ ನಿಂದಾಗಿ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಜೊತೆಗೆ ಭಾರತ ಕ್ರಿಕೆಟ್ ತಂಡದಲ್ಲಿ ದಾದಾ ಎಂದೆ ಹೆಸರುವಾಸಿಯಾಗಿರುವ ಸೌರವ ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ಗಮನಾರ್ಹ ಬದಲಾವಣೆ ತರುತ್ತಾರೆ ಮತ್ತು ವಿಶೇಷವಾಗಿ ಯುವ ಕ್ರಿಕೆಟ್ ಆಟಗಾರರಿಗೆ ಆದ್ಯತೆ ನೀಡುತ್ತಾರೆ ಎಂಬುದನ್ನು ನಿರೀಕ್ಷಿಸಬಹುದಾಗಿದೆ.
ಗಿರೀಶ್ ಪೂಜಾರಿ: ಕಪಿಲ್ ದೇವ್ ನಂತರ ಭಾರತೀಯ ಕ್ರಿಕೆಟ್ ತಂಡದಲ್ಲಿ ಬಹು ದೊಡ್ಡ ಬದಲಾವಣೆ ತಂದವರು ಸೌರವ್ ಗಂಗೂಲಿ. ಅದ್ದರಿಂದ ಬಿಸಿಸಿಐ ಅಧ್ಯಕ್ಷರಾದ ಮೇಲೂ ಅದೇ ರೀತಿಯ ಬದಲಾವಣೆಯನ್ನು ಖಂಡಿತವಾಗಿಯೂ ನೀರಿಕ್ಷಿಸಬಹುದು.
ಪೂರ್ಣಪ್ರಜ್ಞಾ: ಗಮನಾರ್ಹ ಬದಲಾವಣೆಗಿಂತ, ಬಿಸಿಸಿಐಯ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ರಾಜಕೀಯ ಮಧ್ಯ ಪ್ರವೇಶಿಸದೆ ಇದ್ದರೆ, ಆಗ ಉತ್ತಮ ಆಡಳಿತ ವ್ಯವಸ್ಥೆಯನ್ನು ಕ್ರೀಡಾಪ್ರೇಮಿಗಳು ನಿರೀಕ್ಷೆ ಮಾಡಬಹುದು.
ಜಗದೀಶ್ ಬಾರಿಕೆ: ಸೆಹ್ವಾಗ್, ಯುವರಾಜ್, ಕೈಫ್, ಇರ್ಫಾನ್, ಗಂಭೀರ್, ಹರ್ಭಜನ್, ಜಹೀರ್. ಬಾಲಾಜಿ, ಮುಂತಾದವರನ್ನು ಬೆಳೆಸಿ ಅದ್ಬುತ ತಂಡ ಕಟ್ಟಿದ ಮಹಾರಾಜ ಸೌರವ್ ಗಂಗೂಲಿ. ಮುಂದೆ ಭಾರತ ತಂಡದಲ್ಲಿ ಇನ್ನೂ ಬಲಿಷ್ಠತೆ ಮತ್ತು ಉತ್ತಮ ಆಡಳಿತವನ್ನು ಎದುರುನೋಡಬಹುದು.
ರೊಹಿಂದ್ರನಾಥ್: ತುಂಬಾ ವರುಷಗಳ ನಂತರ ಕ್ರಿಕೆಟ್ ಆಟಗಾರರೊಬ್ಬರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಕ್ರೀಡಾಪ್ರೇಮಿಗಳು ಹೆಮ್ಮೆ ಪಡುವ ವಿಷಯ. ಆದರೆ ರಾಜಕೀಯದಾಟಕ್ಕೆ ಕ್ರೀಡೆ ಬಲಿಯಾಗದಿರಲಿ.