Advertisement

2 ವರ್ಷಗಳಲ್ಲಿ ಕೊರೊನಾ ಸೋಂಕು ಕೊನೆಯಾಗಲಿದೆ: ವಿಶ್ವ ಆರೋಗ್ಯ ಸಂಸ್ಥೆ

11:27 AM Aug 24, 2020 | Nagendra Trasi |

ಜಿನಿವಾ: 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಈಗ ಒಂದು ವೇಳೆ, ಲಸಿಕೆ ಪತ್ತೆಹಚ್ಚಲು ಜಗತ್ತು ಒಟ್ಟಾಗಿ ಯಶಸ್ವಿಯಾದರೆ, ಕೊರೊನಾ ಸೋಂಕು ಪಿಡುಗು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್‌ ಅದಾನೊಮ್‌ ಗೆಬ್ರೆಯೆಸಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

102 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಅಂತ್ಯವಾಗಲು 2 ವರ್ಷಗಳೇ ಬೇಕಾದವು.  ಸದ್ಯದ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಕೊರೊನಾ ಸೋಂಕು ತ್ವರಿತವಾಗಿ ವ್ಯಾಪಿಸುತ್ತಿದೆ.

ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣಕ್ಕೆ ಅದು ಹೆಚ್ಚು ಹರಡಿದೆ,’ ಎಂದು ಅವರು ಜಿನಿವಾದಲ್ಲಿ ಹೇಳಿದ್ದಾರೆ. ಜತೆಗೆ ಕೊರೊನಾ ಸೋಂಕನ್ನು ತಡೆಯುವ ತಂತ್ರಜ್ಞಾನ ಮತ್ತು ಜ್ಞಾನ ನಮ್ಮಲ್ಲಿದ್ದು, ಜಾಗತೀಕರಣ, ಜಾಗತಿಕ ಸಂಪರ್ಕಗಳು ನಮಗೆ ವರದಾನವಾಗಿದೆ.

ಹೀಗಾಗಿ ನಾವು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವೈರಸ್‌ ಅನ್ನು ಅಂತ್ಯಗೊಳಿಸಬಹುದು,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಗತ್ತು ಈಗ ಒಗ್ಗಟ್ಟಾಗಬೇಕು ಲಭ್ಯ ಇರುವ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು, ಪರಿಣಾಮಕಾರಿ ಲಸಿಕೆಗಳನ್ನು ಹೊರತರುವಲ್ಲಿ ನಾವು ಕಾರ್ಯಾಚರಿಸುವಲ್ಲಿ ಒಂದಾಗುವ ಅಗತ್ಯವಿದೆ,’ ಎಂದು ಅವರು ಸಂದೇಶ ನೀಡಿದ್ದಾರೆ.

ಕೋವಿಡ್‌: 7ನೇ ಸ್ಥಾನದಲ್ಲಿ ಮೆಕ್ಸಿಕೋ; ಜನರಲ್ಲಿ ಆತಂಕ

Advertisement

ಮಣಿಪಾಲ: ಮೆಕ್ಸಿಕೋದಲ್ಲಿ ಶನಿವಾರ 6,482 ಪ್ರಕರಣಗಳು ವರದಿಯಾಗಿದ್ದು, 644 ಸಾವುಗಳು ಸಂಭವಿಸಿವೆ. ಇದರೊಂದಿಗೆ, ಇಲ್ಲಿ ಸಾವಿನ ಸಂಖ್ಯೆ 60,254ಕ್ಕೆ ತಲುಪಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5,56,216ಕ್ಕೆ ಏರಿದೆ. ಸಾವಿನ ವಿಷಯದಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ಅನಂತರ ವಿಶ್ವದ ಮೂರನೇ ಸ್ಥಾನದಲ್ಲಿ ಭಾರತ ಇದೆ. ಮೆಕ್ಸಿಕೋ 7ನೇ ಸ್ಥಾನದಲ್ಲಿದೆ.

ಕಳೆದ 24 ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಬ್ರೆಜಿಲ್‌ ಆರೋಗ್ಯ ಸಚಿವಾಲಯ ಹೇಳಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 35 ಲಕ್ಷ ದಾಟಿದೆ. ಶನಿವಾರ ಇಲ್ಲಿ 892 ಸಾವುಗಳು ಸಂಭವಿಸಿವೆ. ದೇಶದಲ್ಲಿ ಸತ್ತವರ ಸಂಖ್ಯೆ ಈಗ 114250ಕ್ಕೆ ತಲುಪಿದೆ. ಡಬ್ಲ್ಯುಎಚ್‌ಒ ತಂಡ ಐದು ದಿನಗಳ ಪ್ರವಾಸದಲ್ಲಿ ಶನಿವಾರ ಬ್ರೆಜಿಲ್‌ಗೆ ಆಗಮಿಸಿತ್ತು. ಅಧಿಕಾರಿಗಳೊಂದಿಗೆ ಹೊಸ ಕ್ರಮಗಳ ಕುರಿತು ಚರ್ಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next