ಇಸ್ಲಾಮಾಬಾದ್: ಕಾಶ್ಮೀರದ ಜನತೆಗೆ, ತಮ್ಮ ನೆಲವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಅಥವಾ ಸ್ವತಂತ್ರ ರಾಷ್ಟ್ರವಾಗಿ ರೂಪಿಸುವ ಎರಡು ಆಯ್ಕೆಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಪುನಃ ಮೂಗು ತೂರಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸ್ಥಳೀಯ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ತರಾರ್ ಖಾಲ್ ಹಾಗೂ ಕೊಟ್ಲಿ ಪಟ್ಟಣಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಖಾನ್, ಈ ಹೊಸ ಪ್ರಸ್ತಾವನೆ ಮಂಡಿಸಿದ್ದಾರೆ.
ಖಾನ್ ಹೇಳಿಕೆ ವಿರೋಧಿಸಿರುವ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಷರೀಫ್, “ಎರಡು ರಾಷ್ಟ್ರಗಳಲ್ಲಿ ಯಾರನ್ನು ಸೇರಬೇಕೆಂಬುದು ಕಾಶ್ಮೀರಿಗರೇ ನಿರ್ಧರಿಸಲಿ ಎಂದು ಈಗಾಗಲೇ ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯೇ ನಿವಾರಿಸಬೇಕೆಂದು ಪಾಕಿಸ್ತಾನ ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಹಾಗಾಗಿ, ಖಾನ್ ಹೇಳಿಕೆ ಇತಿಹಾಸ ನಿರ್ಲಕ್ಷಿಸುವ ಹಾಗೂ ಸಂವಿಧಾನ ವಿರೋಧಿಸುವಂಥದ್ದು” ಎಂದಿದ್ದಾರೆ.
ಇದನ್ನೂ ಓದಿ :ಭಾರತದಿಂದ ಬಾಂಗ್ಲಾಗೆ ಜೀವರಕ್ಷಕ ಅನಿಲ : ಮೊದಲ ಬಾರಿಗೆ ರೈಲಲ್ಲಿ ವಿದೇಶಕ್ಕೆ ಆಮ್ಲಜನಕ ಪೂರೈಕೆ
ಡ್ರೋನ್ ವಿರುದ್ಧ ಭಾರತ ಆಕ್ಷೇಪ
ಇತ್ತೀಚೆಗೆ, ಭಾರತದ ಗಡಿಯೊಳಗೆ ಪಾಕ್ ಮೂಲದ ಡ್ರೋನ್‌ಗಳ ಕಾಟ ಹೆಚ್ಚಾಗುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಯ (ಐಬಿ) ಬಳಿಯ ಸುಚೇತ್‌ಗಢದಲ್ಲಿ ಆಯೋಜಿಸಲಾಗಿದ್ದ ಭಾರತದ ಬಿಎಸ್‌ಎಫ್ ಅಧಿಕಾರಿಗಳು ಹಾಗೂ ಪಾಕ್ ಸೇನೆಯ ರೇಂಜರ್‌ಗಳ ನಡುವಿನ ಸಭೆಯಲ್ಲಿ ಡ್ರೋನ್‌ಗಳ ಬಗ್ಗೆ ಭಾರತೀಯ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.