Advertisement
ಶಿಕ್ಷಣ ಹಕ್ಕು ಕಾಯ್ದೆಯಡಿ ಶೇ.25ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಂಡಿರುವ ಶಾಲೆಗಳಿಗೆ 2018-19ರ ಶುಲ್ಕ ಮರುಪಾವತಿ ಸ್ಪಲ್ಪ ಬಾಕಿಯಿದೆ. ಹಾಗೆಯೇ 2019-20ನೇ ಸಾಲಿನ ಪೂರ್ಣ ಶುಲ್ಕ ಮರುಪಾವತಿ ಬಾಕಿಯಿದೆ. ಸುಮಾರು 1,300ಕೋ.ರೂ.ಗಳಷ್ಟು ಸರಕಾರ ನೀಡಬೇಕಿದೆ. ತುರ್ತು ರಜೆ ನೀಡಿರುವುದರಿಂದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬಂದಿಗೆ ವೇತನ ಪಾವತಿ ಮಾಡಬೇಕಿದೆ. ಅಲ್ಲದೆ ಶಾಲೆಗಳ ಇನ್ನಿತರೇ ಖರ್ಚು, ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ. ಹೀಗಾಗಿ ಆರ್‌ಟಿಇ ಬಾಕಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಎಂದು ಕ್ಯಾಮ್ಸ… ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ಜತೆಗೆ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ಮೂರು ತಿಂಗಳುಗಳ ಕಾಲ ಇಎಸ್‌ಐ, ಇಪಿಎಫ್ ಮತ್ತು ಪ್ರೊಫೆಷನಲ್ ಟ್ಯಾಕ್ಸ… ವಿನಾಯತಿ ನೀಡುವಂತೆ ಕೇಂದ್ರದ ಸಂಬಂಧಪಟ್ಟ ಇಲಾಖೆಯ ಮನ ವೊಲಿಸುವಂತೆಯೂ ಪತ್ರದಲ್ಲಿ ಕೋರಲಾಗಿದೆ.
-ಡಿ. ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ