Advertisement
“ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂಬ ವಾಕ್ಯದಂತೆ ಕಾಲೇಜು ಜೀವನ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಒಂದು ಮರೆಯಲಾಗದ ಅನುಭವ. ಗೆಳೆಯರೊಂದಿಗೆ ಜತೆಯಾಗಿ ಕಳೆದ ದಿನಗಳು, ಉಪನ್ಯಾಸಕರ ಬೈಗುಳ, ಜೀವನದ ಮೌಲ್ಯ ತಿಳಿಸಿಕೊಡುವ ಬುದ್ಧಿಮಾತುಗಳು, ಸ್ನೇಹ-ಪ್ರೀತಿಗಳ ಸಮ್ಮಿಲನ, ರಕ್ತ ಸಂಬಂಧಿಗಳಿಗಿಂತ ಮಿಗಿಲಾದ ಪರಸ್ಪರ ಬಾಂಧವ್ಯ- ಹೀಗೆ ಮರೆತರೂ ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ನೆನಪುಗಳು. ಇಂಥ ಸುಂದರ ಜಗತ್ತಿನ ಹೊಸ ಆಕರ್ಷಣೆಯೇ ಕ್ಯಾಂಪಸ್ ಹಬ್ಬಗಳು. ಹಿಂದೆಯೆಲ್ಲ ವಿವಿಧ ಹಬ್ಬಗಳಾದ ದಸರಾ, ದೀಪಾವಳಿ, ಈದ್ ಮಿಲಾದ್, ಕ್ರಿಸ್‌ಮಸ್ ಅವರವರ ಮನೆಯಲ್ಲಿ ಅವರವರ ಸಂಪ್ರದಾಯದಂತೆ ಆಚರಿಸುತ್ತಿದ್ದರು, ಈಗಲೂ ಆಚರಿಸುತ್ತಾರೆ. ಆದರೆ ಈಗ ಕಾಲ ಬದಲಾಗಿದೆ, ಜೊತೆಗೆ ನಮ್ಮ ಜನರೂ ಬದಲಾಗುತ್ತಿ¨ªಾರೆ. ಈ ಬದಲಾವಣೆಯ ಒಂದು ಭಾಗವೇ ಧಾರ್ಮಿಕ ಹಬ್ಬಗಳನ್ನು ಜಾತಿ-ಮತ-ಪಂಥ ಪಂಗಡ ಹೀಗೆ ಎಲ್ಲವನ್ನೂ ಬದಿಗಿರಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕಾಲೇಜು ಕ್ಯಾಂಪಸ್ಸುಗಳಲ್ಲಿ ಒಟ್ಟಾಗಿ ಆಚರಿಸುವುದು. ಇತ್ತೀಚೆಗೆ ಇಂತಹ ಹಬ್ಬಗಳಿಗೆ ನಮ್ಮ ಎಸ್‌ಡಿಎಮ್ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಸಾಕ್ಷಿಯಾಯಿತು. ಹಬ್ಬದ ದಿನ ವಿದ್ಯಾರ್ಥಿಗಳೆಲ್ಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು, ಹಬ್ಬದ ಪ್ರಯುಕ್ತ ಕೆಲವು ಸ್ಪರ್ಧೆಗಳನ್ನು ಆಯೋಜಿಸುವುದು, ವಿಜೇತರಾದವರಿಗೆ ಹಬ್ಬದ ದಿನ ಬಹುಮಾನ ಕೊಡುವುದು, ಅತಿಥಿಗಳಿಂದ ಹಬ್ಬದ ಮಹತ್ವ ಸಾರುವ ಭಾಷಣ, ವಿವಿಧ ನೃತ್ಯ ಹಾಡುಗಳು ಇವೆಲ್ಲ ಕ್ಯಾಂಪಸ್ ಹಬ್ಬದ ಸ್ಪೆಶಲ್.
ಎಸ್‌ಡಿಎಮ್ ಕಾಲೇಜು, ಉಜಿರೆ