Advertisement

“ಶಿಬಿರಗಳು ವ್ಯಕ್ತಿತ್ವ ಬೆಳವಣಿಗೆಗೆ ಪೂರಕ’

08:13 PM Apr 26, 2019 | mahesh |

ಬಂಟ್ವಾಳ: ರಜಾಕಾಲದ ಶಿಬಿರಗಳು ಮಕ್ಕಳ ಮಾನಸಿಕ ವಿಕಸನ ಮಾಡುವುದರೊಂದಿಗೆ ಅಗತ್ಯ ಸಾಮಾಜಿಕ ಜಾಗೃತಿ ಹಾಗೂ ಜೀವನ ಶಿಕ್ಷಣ ನೀಡುತ್ತದೆ ಎಂದು ಅರ್ಕುಳ ಚಾರಿಟೆಬಲ್‌ ಟ್ರಸ್ಟಿನ ಕಾರ್ಯದರ್ಶಿ ಡಾ| ಅರ್ಕುಳ ಬೀಡು ಜಯಕುಮಾರ ಶೆಟ್ಟಿ ಹೇಳಿದರು.

Advertisement

ಅವರು ಅರ್ಕುಳ ಚಾರಿಟೆಬಲ್‌ ಟ್ರಸ್ಟಿನ ಆಶ್ರಯದಲ್ಲಿ ಸ್ಥಳೀಯ ದ್ವಾರ ಸಮಿತಿ ಹಾಗೂ ಶ್ರೀದೇವಿ ಬಯಲಾಟ ಸಮಿತಿಯ ಸಹಯೋಗದೊಂದಿಗೆ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಆವರಣದಲ್ಲಿ ಆಯೋಜಿಸಿದ ರಜಾಕಾಲದ ಶಿಬಿರ ವಿಕಾಸ-2019 ಅನ್ನು ಉದ್ಘಾಟಿಸಿ, ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಜ್ಯ ತರಬೇತಿದಾರ ಮಂಜು ವಿಟ್ಲ ಮಾತ ನಾಡಿ, ರಜಾಕಾಲದ ಶಿಬಿರಗಳು ಮಕ್ಕಳಲ್ಲಿ ಉತ್ತಮ ಆಸಕ್ತಿ ಬೆಳೆಸುವುದರೊಂದಿಗೆ ಬುದ್ಧಿಯ ವಿಕಾಸಕ್ಕೆ ಪೂರಕವಾಗಿದೆ. ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾದ ಪರಿಸರವನ್ನು ಒದಗಿಸುವ ಬೇಸಗೆ ಶಿಬಿರಗಳು ಅತೀ ಅಗತ್ಯ ಎಂದರು.

ಅರ್ಕುಳ ಅಡ್ಯಾರ್‌ ಗ್ರಾ.ಪಂ. ಉಪಾದ್ಯಕ್ಷೆ ಆಶಾ ಪ್ರಕಾಶ್‌, ಸದಸ್ಯರಾದ ಪವಿತ್ರಾ, ಸಂತೋಷ್‌ ತುಪ್ಪೆಕಲ್ಲು ಉಪಸ್ಥಿತರಿದ್ದರು. ವಿಕಾಸ ಶಿಬಿರದಲ್ಲಿ ಬಿಎಸ್‌ಎನ್‌ಎಲ್‌ ಮಾರುಕಟ್ಟೆ ಅಧಿಕಾರಿ ಕಂಪ ಸದಾನಂದ ಆಳ್ವ, ಮಂಟಮೆ ದಿನಕರ ಕರ್ಕೇರ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಆಶಾ, ಶೋಭಾ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಈ ಶಿಬಿರದಲ್ಲಿ ಸ್ಥಳೀಯ 69 ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ರಂಗ ಕಲೆ, ಭಾಷಣ ಕಲೆ, ಗುಂಪು ಚಟುವಟಿಕೆಗಳು, ಜೀವನ ಮೌಲ್ಯಗಳು ಹಾಗೂ ಪೌರತ್ವದ ಬಗ್ಗೆ ತರಬೇತಿ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next