Advertisement

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

12:59 AM Sep 07, 2024 | Team Udayavani |

ಮಂಗಳೂರು: ರೈತರೊಂದಿಗೆ ಒಳ್ಳೆಯ ಸಂಬಂಧ ಇರುವ ಕೆಲವು ವ್ಯಾಪಾರಿಗಳು ಅವರ ಕ್ಯಾಂಪ್ಕೊ ಸದಸ್ಯತ್ವದ ಚೀಟಿಯನ್ನು ಬಳಸಿಕೊಂಡು ರೈತರ ಸೋಗಿನಲ್ಲಿ ಕ್ಯಾಂಪ್ಕೊ ಶಾಖೆಗಳಿಗೆ ಬಂದು ಅಡಿಕೆ ಮಾರಾಟ ಮಾಡುತ್ತಿದ್ದು, ರೈತರು ಜಾಗರೂಕರಾಗಿರುವಂತೆ ಕ್ಯಾಂಪ್ಕೋ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇತ್ತೀಚೆಗೆ ವ್ಯಾಪಾರಿಯೊಬ್ಬ ರೈತರ ಕಾರ್ಡನ್ನು ದುರುಪಯೋಗ ಪಡಿಸಿಕೊಂಡು ಬರ್ಮಾ (ಮ್ಯಾನ್ಮಾರ್‌) ಮೂಲದ ಕಳಪೆ ಗುಣಮಟ್ಟದ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ ಕ್ಯಾಂಪ್ಕೊದ ಪುತ್ತೂರು ಶಾಖೆಯಲ್ಲಿ ಮಾರಾಟ ಮಾಡಲು ಪ್ರಯತ್ನಪಟ್ಟಿದ್ದಾನೆ.ಇಂತಹ ಮೋಸದ ವ್ಯಾಪಾರದಲ್ಲಿ ರೈತರು ಭಾಗಿಯಾಗಬಾರದು. ಅದಕ್ಕಾಗಿ ಕ್ಯಾಂಪ್ಕೊ ಕಾರ್ಡನ್ನು ಯಾರೂ ದುರುಪಯೋಗಪಡಿಸಲು ಅವಕಾಶ ನೀಡಬಾರದು.

ರೈತರು ಜಾಗರೂಕರಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಿಕೆಯ ದರ ಸ್ಥಿರತೆಗೆ ಹೊಡೆತ ಬೀಳುವ ಅಪಾಯವಿದೆ. ಒಮ್ಮೆ ಇಲ್ಲಿನ ಸ್ಥಳೀಯ ಅಡಿಕೆಯಲ್ಲಿ ಬೇರೆ ಕಳಪೆ ಗುಣಮಟ್ಟದ ಅಡಿಕೆ ಬೆರೆಸಿರುವುದು ಉತ್ತರ ಭಾರತದ ಗ್ರಾಹಕರ ಗಮನಕ್ಕೆ ಬಂದಲ್ಲಿ, ನಮ್ಮ ಅಡಿಕೆಯ ಖರೀದಿಯನ್ನೇ ನಿಲ್ಲಿಸುವ ಸಾಧ್ಯತೆಯಿದೆ.

ಹಾಗಾಗಿ ಎಚ್ಚರಿಕೆಯಿಂದಿರುವಂತೆ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next