Advertisement

ಕ್ಯಾಂಪ್ಕೋ ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ; ಅಡಿಕೆ ಬೆಳೆಗಾರರ ಹಿತ ಕಾಯಲು ಆಗ್ರಹ

02:35 AM Mar 17, 2022 | Team Udayavani |

ಮಂಗಳೂರು: ಜಿಎಸ್‌ಟಿ ತೆರಿಗೆಯು ವೈಜ್ಞಾನಿಕ ಎಂದು ಮೆಚ್ಚುಗೆ ಪಡೆದರುವಾಗ ಎಪಿಎಂಸಿ ಶುಲ್ಕವನ್ನು ಕೂಡ ಅದರೊಂದಿಗೆ ವಿಲೀನಗೊಳಿಸಿ ಆ ಮೂಲಕ ಕೃಷಿ ಉತ್ಪನ್ನಗಳನ್ನು ಸಂಘಟನ ಕ್ಷೇತ್ರದೊಳಗೆ ತಂದು ಕೃಷಿಕರಿಗೆ ಅವರ ಉತ್ಪನ್ನಗಳನ್ನು ಸಹಕಾರಿ ಸಂಸ್ಥೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ “ಕ್ಯಾಂಪ್ಕೊ’ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹಸಚಿವ ಅಮಿತ್‌ ಶಾ ಅವರಿಗೆ ಸಲ್ಲಿಸಿದೆ.

Advertisement

ಪ್ರಸ್ತುತ ಕೃಷಿ ಉತ್ಪನ್ನಗಳಿಗೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನು ಶೇ. 2ಕ್ಕೆ ಇಳಿಸಬೇಕು. ಇದರಿಂದ ಎಲ್ಲ ಕೃಷಿಕರೂ ಅಡಿಕೆಯನ್ನು ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚು. ಅಡಿಕೆಗೆ ಸಿಂಪಡಿಸುವ ಕಾಪರ್‌ಸಲ್ಫೆಟ್‌ ಮೇಲೆ ಶೇ. 18 ಹಾಗೂ ಮೈಕ್ರೋ ನ್ಯೂಟ್ರಿ ಯೆಂಟ್‌ ಮೇಲೆ ಶೇ. 12ರಷ್ಟು ಹಾಕುತ್ತಿರುವ ಜಿಎಸ್‌ಟಿಯನ್ನು ಶೇ. 5ಕ್ಕೆ ಇಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಖಾಸಗಿ ಜಾಲದಿಂದ
ರೈತರನ್ನು ತಪ್ಪಿಸಬಹುದು
ಅನೇಕ ಖಾಸಗಿ ವರ್ತಕರು ಯಾವುದೇ ದಾಖಲೆಗಳಿಲ್ಲದೆ ಕೃಷಿ ಕರು ಉತ್ಪನ್ನಗಳನ್ನು ತಮಗೇ ಮಾರು ವಂತೆ ಆಮಿಷವೊಡ್ಡುತ್ತಿದ್ದಾರೆ. ಸಣ್ಣ ದರ ಹೆಚ್ಚಳದ ಖುಷಿಯಲ್ಲಿ ಕೃಷಿ ಕರು ತಮಗರಿವಿಲ್ಲದೆಯೇ ತೆರಿಗೆ ತಪ್ಪಿಸುವ ಜಾಲದಲ್ಲಿ ಸೇರಿಬಿಡುತ್ತಾರೆ. ಇದರಿಂದ ಸರಕಾರಕ್ಕೆ ನಷ್ಟವಾಗುತ್ತದೆ. ಹಾಗಾಗಿ ಎಲ್ಲ ಉತ್ಪನ್ನಗಳ ಸಾಗಾಟದ ವೇಳೆ ಜಿಪಿಎಸ್‌ ಅಳವಡಿಸುವುದು ಮತ್ತು ಇ ವೇ ಬಿಲ್‌ ಹೊಂದಿರುವಂತೆ ನೋಡಿಕೊಳ್ಳಬಹುದು.

ಮೇಲ್ತೆರಿಗೆ ರದ್ದುಪಡಿಸಿ
ಪಾನ್‌ ಮಸಾಲಾ ಮೇಲೆ ಶೇ. 28ರಷ್ಟು ಜಿಎಸ್‌ಟಿ ಹಾಗೂ ಶೇ. 60ರಷ್ಟು ಮೇಲ್ತೆರಿಗೆ ವಿಧಿಸಲಾಗುತ್ತಿದೆ. ಅಧಿಕ ಸೆಸ್‌ನಿಂದಾಗಿ ಉತ್ಪಾದಕರು ಶೇ. 100ರಷ್ಟು ತೆರಿಗೆ ಪಾವತಿಗೆ ಮುಂದಾ ಗುತ್ತಿಲ್ಲ ಬದಲು ಅದನ್ನು ತಪ್ಪಿಸು ತ್ತಿದ್ದಾರೆ. ಆದ್ದರಿಂದ ಶೇ. 60ರ ಮೇಲೆ¤ರಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದು, ಪಾನ್‌ ಮಸಾಲಾ ತಂಬಾಕು ರಹಿತವಾಗಿದ್ದು ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿದೇಶದಿಂದ ಅಕ್ರಮ
ಸಾಗಾಟ ತಡೆಯಿರಿ
ಮ್ಯಾನ್ಮಾರ್‌ ದೇಶದ ಮೂಲಕ ಭಾರತಕ್ಕೆ ಆಗ್ನೇಯ ಏಷ್ಯಾದ ದೇಶ ಗಳಿಂದ ಅಡಿಕೆಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಕೇಂದ್ರೀಯ ಅಬಕಾರಿ ಸುಂಕ, ಕಸ್ಟಂಸ್‌ ಸುಂಕಗಳನ್ನು ತಪ್ಪಿಸಲಾಗುತ್ತಿದೆ. ಈ ಅಡಿಕೆಗೆ ಶೇ. 5ಜಿಎಸ್‌ಟಿ ವಿಧಿಸಲಾಗುತ್ತಿದೆ. ತಪ್ಪು ಮೌಲ್ಯಮಾಪನ, ನಕಲಿ ಪ್ರಮಾಣಪತ್ರ, ನಕಲಿ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌, ಕಡಿಮೆ ದರ ತೋರಿಸಿದ ರಶೀದಿಗಳ ಮೂಲಕ ದೇಶಕ್ಕೆ ಹಾಗೂ ಕೃಷಿಕರಿಗೆ ಮೋಸ ಮಾಡಲಾಗುತ್ತಿದೆ ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Advertisement

ಕನಿಷ್ಠ ಬೆಂಬಲ ಬೆಲೆ ನೀಡಿ
ಅಡಿಕೆ ಬೆಳೆಗಾರರು ಬಳಸುವ ಕಾರ್ಬನ್‌ ಫೈಬರ್‌ ದೋಟಿಗಳಿಗೆ ಬೇಕಾಗುವ ಕಾರ್ಬನ್‌ ಫೈಬರ್‌ಗೆ ಶೇ. 48ರಷ್ಟು ತೆರಿಗೆ ಪಾವತಿಸಬೇಕಿರುವುದ ರಿಂದ ದೋಟಿಯ ಬೆಲೆ ಬಹಳಷ್ಟು ಹೆಚ್ಚಾಗಿದ್ದು ಕೃಷಿಕರಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂನ ಈ ಸುಂಕ ವನ್ನು ತಗ್ಗಿಸಬೇಕು. ಅಡಿಕೆಯ ಔಷಧೀಯ ಗುಣದ ಬಗ್ಗೆ ಸಂಶೋ ಧನೆಗೆ ಅನುದಾನ ನೀಡಬೇಕು. ಉತ್ಪಾ ದನ ವೆಚ್ಚ ಮತ್ತು ಅದರ ಮಾರಾಟದಿಂದ ಸಿಗುವ ಮೊತ್ತ ಹೊಂದಾಣಿಕೆ ಯಾಗುತ್ತಿಲ್ಲ. ಹಾಗಾಗಿ ಕನಿಷ್ಠ ಬೆಂಬಲ ಬೆಲೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

ಮನವಿಯನ್ನು ಸಚಿವರಾದ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಅವರಿಗೂ ಸಲ್ಲಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರೊಂದಿಗೆ ಕೇಂದ್ರ ಸಚಿವರ ಚರ್ಚೆ
ಉಡುಪಿ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹಾಗೂ ಕೃಷಿ ಖಾತೆಯ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಅವರು ಬುಧವಾರ ದಿಲ್ಲಿಯ ಕೃಷಿ ಭವನದಲ್ಲಿ ಕರ್ನಾಟಕದ ಅಡಿಕೆ ಬೆಳೆಗಾರರ ಸಂಘದ ಸದಸ್ಯರೊಂದಿಗೆ ಹಲವು ವಿಷಯದ ಬಗ್ಗೆ ಚರ್ಚೆ ನಡೆಸಿದರು. ಅಡಿಕೆ ಕೃಷಿಗೆ ಆವರಿಸುವ ಹಳದಿ ರೋಗಕ್ಕೆ ಪರಿಹಾರೋಪಾಯ ಮತ್ತು ರಾಜ್ಯದ ಅಡಿಕೆ ಬೆಳೆಗಾರ ಹಿತ ಕಾಯುವ ನಿಟ್ಟಿನಲ್ಲಿ ಆಗಬೇಕಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಬೆಳೆಗಾರರ ಸಮಸ್ಯೆಗಳನ್ನು ಶೋಭಾ ಕರಂದ್ಲಾಜೆ ಅವರು ಕೇಂದ್ರ ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ದೇಶದ ರೈತರ ಕಲ್ಯಾಣಕ್ಕಾಗಿ ಅಗತ್ಯ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳುತ್ತಿದೆ. ರೈತರ ಹಿತ ಕಾಯಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಬದ್ಧವಾಗಿದೆ ಎಂದು ಸಚಿವ ನರೇಂದ್ರ ಸಿಂಗ್‌ ಭರವಸೆ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next