ಉಡುಪಿ: ‘ಒಂದು ಮೊಟ್ಟೆಯ ಕತೆ’ ಚಿತ್ರ ರಾಜ್ಯವ್ಯಾಪಿ ಹೊಸ ಸಂಚಲನ ಮೂಡಿಸಿರುವ ಚಿತ್ರ. ಈ ಅದ್ಭುತ ಚಿತ್ರದ ತೆರೆಯ ಹಿಂದಿನ ಕ್ಯಾಮರಾ, ಎಡಿಟಿಂಗ್, ಗ್ರಾಫಿಕ್ಸ್, ಕಲರಿಸ್ಟ್ ಈ ಎಲ್ಲ ಕಾರ್ಯವನ್ನು ಒಬ್ಬರೇ ನಿರ್ವಹಿಸಿರುವುದು ವಿಶೇಷ. ಫಿಲ್ಮ್ ಇನ್‌ಸ್ಟಿಟ್ಯುಟ್‌ನಲ್ಲಿ ಪದವಿ ಪಡೆಯದೆ, ಸದಭಿರುಚಿಯ ಸಿನೆಮಾ ನೋಡಿ, ಯೂಟ್ಯೂಬ್ ಟ್ಯುಟೋರಿಯಲ್‌ನಲ್ಲಿ ಸಾಪ್ಟ್ವೇರ್ ಕಲಿತ ಉಡುಪಿ ಪಡು ತೋನ್ಸೆ ಬೆಂಗ್ರೆಯ ಪ್ರವೀಣ್ ಶ್ರೀಯಾನ್ ಅವರೇ ಮೊಟ್ಟೆ ಕತೆಯ ತೆರೆಯ ಹಿಂದಿನ ರೂವಾರಿ.
Advertisement
ಅನುಭವಿಗಳ ದಂಡೇ ಬೇಕುಸಿನೆಮಾವೆಂದರೆ ತೆರೆಯ ಹಿಂದೆ ಸಾಕಷ್ಟು ಕೆಲಸಗಳಿರುತ್ತವೆ. ಅದರಲ್ಲೂ ಅನುಭವಿಗಳ ದಂಡೇ ಬೇಕಾಗಿರುತ್ತದೆ. ಆದರೆ ರಾಜ್ಯದಲ್ಲೆಡೆ ಭರವಸೆ ಮೂಡಿಸಿರುವ ಒಂದು ಮೊಟ್ಟೆಯ ಕತೆ ಚಿತ್ರದ ಸಿನೆಮಾಟೋಗ್ರಫಿ (ಕೆಮೆರಾ), ಎಡಿಟಿಂಗ್ (ಸಂಕಲನ), ಗ್ರಾಫಿಕ್ಸ್, ಕಲರಿಸ್ಟ್, ವಿಎಫ್ಎಕ್ಸ್ ಜವಾಬ್ದಾರಿ ನಿರ್ವಹಿಸಿದವರು ಉಡುಪಿ ಪಡುತೋನ್ಸೆ ಬೆಂಗ್ರೆಯ ಪ್ರವೀಣ್ ಶ್ರೀಯಾನ್. ಪ್ರವೀಣ್ ಅವರು ಯಾವುದೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಪಡೆಯದಿದ್ದರೂ ಯೂಟ್ಯೂಬ್ ಟ್ಯುಟೋರಿಯಲ್ ಮೂಲಕ ಸಿನೆಮಾಟೋಗ್ರಫಿ, ಫಿಲ್ಮ್ ಎಡಿಟಿಂಗ್ ಕಲಿತು ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಜಾnನವನ್ನು ಸಂಪಾದಿಸಿಕೊಂಡಿರುವುದು ವಿಶೇಷ.
ಪ್ರವೀಣ್‌ಗೆ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಲು ಮುಂಬಯಿ ಹಾಗೂ ಮಣಿಪಾಲದಲ್ಲಿ ಗ್ರಾಫಿಕ್ಸ್ ಡಿಸೈನರ್ ಹಾಗೂ ಪ್ರೋಗ್ರಾಮರ್ ಆಗಿದ್ದ ಮಾವ ರಮೇಶ್ ಶ್ರೀಯಾನ್ ಅವರೇ ಪ್ರಮುಖ ಪ್ರೇರಣೆ. ಪಿಯುಸಿಯಲ್ಲಿರುವಾಗ ಮಾವನ ಗ್ರಾಫಿಕ್ಸ್ ಕೆಲಸದಿಂದ ಆಕರ್ಷಣೆಗೊಂಡು, ಈ ಬಗೆಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ಅವರಿಂದ ಮನೆಯಲ್ಲಿಯೇ ಕಲಿತರು. ಪಿಯು ಶಿಕ್ಷಣ
ಬೆಂಗ್ರೆಯ ಮೊಗವೀರ ಸಮುದಾಯದ ಕಲ್ಯಾಣಿ ಶ್ರೀಯಾನ್ ಹಾಗೂ ಶೇಖರ್ ಮಾಬುಕಳ ದಂಪತಿಯ ಮಕ್ಕಳಲ್ಲಿ ಪ್ರವೀಣ್ ಶ್ರೀಯಾನ್ ಎರಡನೆಯವರಾಗಿದ್ದು, ಅಕ್ಕ, ತಮ್ಮ ಇದ್ದಾರೆ. ಕೆಮ್ಮಣ್ಣು ಸರಕಾರಿ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದರು.
Related Articles
ಆನಂತರ ಉಡುಪಿಯ ಖಾಸಗಿ ಚಾನೆಲ್‌ನಲ್ಲಿ ಗ್ರಾಫಿಕ್ಸ್ ಡಿಸೈನರ್, ವಿಡಿಯೋ ಎಡಿಟರ್, ಜಾಹೀರಾತು ರಚನೆಕಾರರಾಗಿದ್ದರು. ಇದೇ ವೇಳೆ ದೂರ ಶಿಕ್ಷಣದ ಮೂಲಕ ಬಿಕಾಂ ಪದವಿ ಪಡೆದರು. 2-3 ವರ್ಷಗಳ ಹಿಂದೆ ತನ್ನದೇ ಸ್ವಂತ ಆ್ಯಡ್ ಫಿಲ್ಮ್ ಪ್ರೊಡಕ್ಷನ್ ಹೌಸ್ ಆರಂಭಿಸಿ, ಉಡುಪಿಯ ಪ್ರತಿಷ್ಠಿತ ಕಂಪೆನಿಗಳ ಕಾನ್ಸೆಪ್ಟ್ ಜಾಹೀರಾತು, ಸೃಜನಶೀಲತೆಯ ಜಾಹೀರಾತಿನ ರಚನೆ ಮೂಲಕ ಪ್ರಸಿದ್ಧಿ ಪಡೆದರು. ಇದೇ ವೇಳೆ ಸಿನೆಮಾದಲ್ಲೂ ಕೆಲಸ ಮಾಡಬೇಕೆಂಬ ಹಂಬಲ ಹುಟ್ಟಿಕೊಂಡಿತು.
Advertisement
ಸಿನೆಮಾ, ಪುಸ್ತಕಗಳ ಪ್ರಭಾವಈ ಮಧ್ಯೆ ರಾಜ್ ಶೆಟ್ಟಿ ಜತೆ ಸೇರಿ “ಸುಮ್ನೆ ನಮಗೆ ಯಾಕೆ’ ಹಾಗೂ “ಫೈವ್ ಲೆಟರ್’ ಎನ್ನುವ ಕಿರುಚಿತ್ರ ತಯಾರಿಸಿದರು. ಈ ಎರಡೂ ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೇ ಮೊದಲ ಮೆಟ್ಟಿಲು ಎಂದು ಪರಿಗಣಿಸಿದ ಪ್ರವೀಣ್ ಸಿನೆಮಾ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಗುರಿಯೊಂದಿಗೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ ಸಹಿತ ಪ್ರಸಿದ್ಧ ಸಾಹಿತಿಗಳ ಹಲವು ಕೃತಿಗಳನ್ನು ಓದಿದರು. ಜತೆಗೆ ಸದಭಿರುಚಿಯ ಇಂಗ್ಲಿಷ್, ಮಲಯಾಳಂ, ಇರಾನಿ ಭಾಷೆಗಳ ಸಿನೆಮಾಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಅದರ ಸಿನೆಮಾಟೋಗ್ರಫಿ, ಫ್ರೆàಮ್‌ಗಳನ್ನು ಅರಿತುಕೊಂಡರು. ಎಮ್ಯಾನುವೆಲ್ ಲುಬೆಝಿR, ರೋಗರ್ ಡೆಕೀನ್ಸ್, ಸಂತೋಷ್ ಸಿವನ್, ರಾಜೀವ್ ರವಿ, ಸೈಜು ಖಾಲಿದ್, ಸಮೀರ್ ತಾಹೀರ್‌ರಂತಹ ಸಾಧಕ ಸಿನೆಮಾಟೋಗ್ರಾಫರ್‌ಗಳ ಸಂದರ್ಶನದಲ್ಲಿ ಅವರ ಅನುಭವದ ಮಾತು, ಕಲಿತ ರೀತಿಯೇ ಪ್ರವೀಣ್‌ರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಮೊದಲ ಚಿತ್ರವನ್ನೇ ರೆಡ್ ಎಂಎಕ್ಸ್ ಕೆಮೆರಾದಲ್ಲಿ ಚಿತ್ರೀಕರಿಸಿ ಸೈ ಎನಿಸಿಕೊಂಡ ಪ್ರವೀಣ್, ಅವಿರತವಾದ ಪರಿಶ್ರಮ, ಹೊಸದನ್ನು ಕಲಿಯುವ ತುಡಿತ, ಅಗಾಧವಾದ ಆತ್ಮವಿಶ್ವಾಸವೇ ಅವರನ್ನು ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸಿನೆಮಾಟೋಗ್ರಾಫರ್ ಆಗುವ ಭರವಸೆ ಮೂಡಿಸಿದ್ದಾರೆ. ನಾವು ಈ ಸಿನೆಮಾವನ್ನು ಕೇವಲ 16 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದು. ಅಷ್ಟು ಕಡಿಮೆ ಸಮಯದಲ್ಲಿ ಗುಣಮಟ್ಟದ ಚಿತ್ರೀಕರಣ ಮಾಡಲು ನಮಗೆ ಪ್ರತಿಭಾನ್ವಿತ ಕಲಾವಿದ ಬೇಕಾಗಿತ್ತು. ಗುಣಮಟ್ಟಕ್ಕೆ ಎಲ್ಲೂ ತೊಂದರೆ ಆಗದಂತೆ ಆ ಕೆಲಸವನ್ನು ಪ್ರವೀಣ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರವೀಣ್ ಈ ಸಿನೆಮಾದಲ್ಲಿ ತುಂಬಾ ಜವಾಬ್ದಾರಿ ವಹಿಸಿಕೊಂಡು ಕೆಲಸ ನಿರ್ವಹಿಸಿರುವುದಷ್ಟೆ ಅಲ್ಲದೆ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಅವರೊಬ್ಬ ನಿರ್ದೇಶಕನಿಗೆ ಬೇಕಾದಂತಹ ನಿಜವಾದ ಆರ್ಟಿಸ್ಟ್. ಕತೆಗೆ ಮಹತ್ವ ಕೊಟ್ಟು ಕೆಲಸ ಮಾಡುತ್ತಾರೆ.
– ರಾಜ್ ಬಿ. ಶೆಟ್ಟಿ, ನಿರ್ದೇಶಕ ಮೊದಲ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಯಿದೆ. ನಮ್ಮ ತಂಡದ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದು ಆರಂಭವಷ್ಟೇ. ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ. ಯಶಸ್ವಿ ಸಿನೆಮಾಟೋಗ್ರಾಫರ್ ಸಂದರ್ಶನ ನೋಡುತ್ತಿದ್ದೆ. ಅವರ ಅನುಭವ, ಒಂದೊಂದು ಫ್ರೆàಮ್‌ಗಳ ಅರ್ಥವನ್ನು ಬಿಡಿಸಿ ಹೇಳುತ್ತಿದ್ದರು. ಇದರಿಂದ ಸಿನೆಮಾಟೋಗ್ರಾಫರ್ ಏನು ಎನ್ನುವುದನ್ನು ತಿಳಿದುಕೊಂಡೆ. ಅದಲ್ಲದೆ ಕುವೆಂಪು, ತೇಜಸ್ವಿ ಅವರ ಸಾಹಿತ್ಯ, ಸದಭಿರುಚಿಯ ಸಿನೆಮಾಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.
– ಪ್ರವೀಣ್ ಶ್ರೀಯಾನ್