Advertisement

ಬಾಳೆಕಂದು ಕಡಿದು ನವರಾತ್ರಿ ಉತ್ಸವಕ್ಕೆ ತೆರೆ

02:15 PM Oct 06, 2022 | Team Udayavani |

ಹಾಸನ: ವಿಜಯ ದಶಮಿ ಹಬ್ಬದ ಅಂಗವಾಗಿ ಕೊನೆಯ ದಿವಸ ಬುಧವಾರದಂದು ಸಂಜೆ ಶಾಸಕರಾದ ಪ್ರೀತಂ ಜೆ. ಗೌಡರ ಸಮ್ಮುಖದಲ್ಲಿ ನರಸಿಂಹರಾಜ ಅರಸ್‌ ಅವರು ಬಾಳೆಕಂದು ಕಡಿಯುವ ಮೂಲಕ 9 ದಿವಸಗಳ ನವರಾತ್ರಿಗೆ ವಿರಾಮ ಹೇಳಿದರು.

Advertisement

ಪ್ರತಿ ವರ್ಷ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರೂಪಾಕ್ಷ, ಆಂಜನೇಯ ಸ್ವಾಮಿ ಹಾಗೂ ಸಿದ್ಧೇಶ್ವರ ದೇವರನ್ನು ಹಾಸನಾಂಬೆ ವೃತ್ತದಿಂದ ಮೆರವಣಿಗೆ ಮೂಲಕ ವಿವಿಧ ಬೀದಿಗಳಲ್ಲಿ ಬಂದು ನಂತರ ನಗರದ ಸಾಲಗಾಮೆ ರಸ್ತೆ ಬಳಿ ಇತಿಹಾಸವುಳ್ಳ ಬನ್ನಿ ಮಂಟ ಪಕ್ಕೆ ಕರೆತರಲಾಗುತಿತ್ತು. ಕಳೆದ ಎರಡು ವರ್ಷ ಕೊರೊನಾ ಇದ್ದುದರಿಂದ ಟ್ರ್ಯಾಕ್ಟರ್‌ ಮೂಲಕ ದೇವರನ್ನು ತರಲಾಗಿತ್ತು. ಆದರೇ, ಈಗ ಟ್ರ್ಯಾಕ್ಟರ್‌ ಮೂಲಕ ದೇವರನ್ನು ತರುವುದು ಬೇಡ ಎಂದು ಶ್ರೀ ನೀರು ಬಾಗಿಲು ಆಂಜನೇಯ ದೇವರು ಹಾಗೂ ಶ್ರೀ ಸಿದ್ಧೇಶ್ವರ ದೇವರನ್ನು ಟ್ರ್ಯಾಕ್ಟರ್‌ ಮೂಲಕ ಕೊಂಡೂಯ್ಯಲು ವಿರೋಧ ವ್ಯಕ್ತಪಡಿಸಿ ಹೆಗಲ ಮೇಲೆ ಹೊತ್ತುಕೊಂಡು ತಂದ ಪ್ರಸಂಗ ನಡೆಯಿತು.

ಸರಳ ಆಚರಣೆಗೆ ಖಂಡನೆ: ಸರಕಾರದ ನಿಧಿಯಿಂದ ಈ ಕಾರ್ಯಕ್ರಮಕ್ಕೆ ಹಣವಿದ್ರೂ ಕೂಡ ಯಾವ ಸಂಭ್ರಮದಿಂದ ದಸರಾ ಆಚರಿಸದೇ ಸರಳವಾಗಿ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ಮುಂದಿನ ವರ್ಷದಲ್ಲಿ ಈ ರೀತಿ ಆಗದಂತೆ ನಿಗಾ ವಹಿಸಲು ಕೋರಿದರು. ಕ್ಷೇತ್ರದ ಶಾಸಕರಾದ ಪ್ರೀತಮ್‌ ಜೆ. ಗೌಡರು ಆಗಮಿಸಿ ಬಾಳೆಕಂದು ಕಡೆಯುವ ದೃಶ್ಯವನ್ನು ಕಣ್ತುಂಬಿಕೊಂಡರು.

ಉತ್ಸವಕ್ಕೆ ವಿಧ್ಯುಕ್ತ ತೆರೆ: ಐದು ದೇವರನ್ನು ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ತಂದು ಪೂಜೆ ಸಲ್ಲಿಸಿ ಬಾಳೆಕಂದು ಕಡಿಯವ ಮೂಲಕ 9 ದಿವಸಗಳ ನವರಾತ್ರಿ ಹಬ್ಬಕ್ಕೆ ವಿರಾಮ ಹೇಳಿದರು. ಮೆರವಣಿಗೆ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರು ಸುಗಮ ಸಂಚಾರ ಮಾಡಿ ಕೊಟ್ಟು ನಿಯಂತ್ರಿಸಿದರು. ದೇವರ ಉತ್ಸವದ ಅಡ್ಡಪಲ್ಲಕ್ಕಿ ಮನೆ ಮುಂದೆ ಬರುತ್ತದೆ ಎಂದು ನಿವಾಸಿಗಳು, ರಸ್ತೆಗೆ ನೀರು ಹಾಕಿ ರಂಗೋಲಿಯಿಂದ ಸಿಂಗಾರ ಮಾಡಿದ್ದರು.

ಬನ್ನಿ ಕಡೆಯುವ ಸಂಪ್ರದಾಯ ಪಾಲನೆ: ನರಸಿಂಹರಾಜ ಅರಸ್‌ ಕಳೆದ 32 ವರ್ಷಗಳಿಂದಲೂ ಬನ್ನಿ ಕಡೆಯುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದು, ಈ ದೇವರ ಉತ್ಸಹದ ಮೂಲಕವೇ ನವರಾತ್ರಿ ವಿಜಯ ದಶಮಿ ಹಬ್ಬದ ಕೊನೆಯ ದಿನವನ್ನು ಬನ್ನಿ ಕಡಿಸುವ ಮೂಲಕ ಅಂತ್ಯಗೊಳಿಸುವುದು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಬನ್ನಿ ಕಡಿಯುವ ಅರಸ್‌ ಕಳೆದ ಮೂರು ದಿವಸಗಳಿಂದ ಉಪವಾಸವಿದ್ದು, ಖಡ್ಗಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಾರೆ. ನವರಾತ್ರಿ 9 ದಿನ ಮುಗಿದ ಮೇಲೆ ಆಯುಧ ಪೂಜೆ ನಡೆದು ಮಾರನೆ ದಿವಸ ಬನ್ನಿ ಕಡಿಯುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಪೂಜೆ ಕೊನೆಯಲ್ಲಿ ಬನ್ನಿ ಕಡಿದ ಮೇಲೆ ಬಾಳೆ ಎಲೆ ಮತ್ತು ಬನಿ ಎಲೆ ಪಡೆಯಲು ಜನ ಮುಗಿ ಬಿದಿದ್ದರು.

Advertisement

ಶಾಸಕರ ಭರವಸೆ: ನರಸಿಂಹರಾಜ ಅರಸು ಅವರು ಬಹುವರ್ಷದಿಂದ ನಗರಸಭೆ ವ್ಯಾಪ್ತಿಯಲ್ಲಿ ನಿವೇಶ ನಕ್ಕೆ ಬೇಡಿಕೆಯಿಟ್ಟಿದ್ದರು. ಆ ಬೇಡಿಕೆ ಪರಿಗಣಿಸಿದ ಕ್ಷೇತ್ರದ ಶಾಸಕರು ನಿವೇಶನ, ಮನೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದು ಸಂತಸ ತಂದಿದೆ ಎಂದು ತಿಳಿಸಿದರು.

ಶಾಸಕರಿಂದ ಹಬ್ಬದ ಶುಭಾಶಯ: ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರು ಮಾತನಾಡಿ, ನಗರ ಮತ್ತು ಜಿಲ್ಲೆಯ ಜನತೆಗೆ ವಿಜಯದಶಮಿ ಶುಭಾಶಯಗಳನ್ನು ಮೊದಲು ಹೇಳುತ್ತೇನೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಸಿದ್ಧೇಶ್ವರ ದೇಗುಲದ ಕುಟುಂಬ ವರ್ಗವು ಹಲವಾರು ದಶಕಗಳಿಂದ ಈ ಉತ್ಸವ ಮಾಡಿಕೊಂಡು ಬರುತ್ತಿದೆ. ಇಂದು ಬನ್ನಿ ಕಡಿಯುವ ಮೂಲಕ ವಿಧ್ಯುಕ್ತವಾಗಿ 9 ದಿನಗಳ ವಿಜಯದಶಮಿಗೆ ತೆರೆ ಎಳೆದಿದ್ದಾರೆ ಎಂದರು. ಹಲವಾರು ದಶಕಗಳಿಂದ ಈ ಪೂಜಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಅವರಿಗೆ ದೇವರು ಶಕ್ತಿ ಕೊಟ್ಟು ಹಾಸನದ ಜನತೆಗೆ ಒಳಿತನ್ನು ಬಯಸಿ ಪೂಜೆ ಸಲ್ಲಿಸಿ ದ್ದಾರೆ. ಬಾಳೆಕಂದು ಕಡೆಯುವ ನರಸಿಂಹರಾಜ್‌ ಅರಸು ಅವರು ನಿವೇಶನಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಸಮರ್ಪಕ ಉತ್ತರ ಕೊಡದೇ ಮಾತಿಗೆ ವಿರಾಮ ಹೇಳಿ ತೆರೆಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next