Advertisement

 ಡಾಟಾ ಸೋರಿಕೆ ಹಗರಣ:ಬಾಗಿಲು ಮುಚ್ಚಿದ ಕೇಂಬ್ರಿಡ್ಜ್ ಅನಾಲಿಟಿಕಾ!

09:32 AM May 03, 2018 | |

ಲಂಡನ್‌: ಫೇಸ್‌ಬುಕ್‌ ನ ಕೋಟ್ಯಂತರ ಖಾತೆದಾರರ ಮಾಹಿತಿ ಸೋರಿಕೆ ಆರೋಪಕ್ಕೆ ಗುರಿಯಾಗಿರುವ ಲಂಡನ್‌ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಬಾಗಿಲು ಮುಚ್ಚಿರುವುದಾಗಿ ವರದಿಯಾಗಿದೆ. 

Advertisement

ಅಸೋಸಿಯೆಟೆಡ್‌ ಪ್ರೆಸ್‌ ವರದಿಯಂತೆ ಕೇಂಬ್ರಿಡ್ಜ್ ಅನಾಲಿಟಿಕಾ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಪ್ರಕಟನೆಯಲ್ಲಿ ಸಂಸ್ಥೆ ‘ಅಪಮಾನಕ್ಕೊಳಗಾಗಿದೆ’ ಎಂದು ಹೇಳಿದೆ. 

ಡಾಟಾ ಸೋರಿಕೆ ವಿವಾದದಿಂದ ಬಹುಪಾಲು ಗ್ರಾಹಕರನ್ನು ಕಳೆದುಕೊಂಡಿದೆ ಮಾತ್ರವಲ್ಲದೆ ಅಪಾರ ಪ್ರಮಾಣದ ಜಾಹೀರಾತು ಸರಬರಾಜುದಾರರನ್ನು ಕಳೆದುಕೊಂಡಿದ್ದು, ಇದೇ ಕಾರಣಕ್ಕಾಗಿ ಸಂಸ್ಥೆಯನ್ನೆ ಸ್ಥಗಿತಗೊಳಿಸಲಾಗಿದೆ. 

ಅಮೆರಿಕ ಅಧ್ಯಕ್ಷೀಯ ಚುನಾವಣೆ,ಭಾರತೀಯ ಚುನಾವಣೆಗಳ ಸಮಯದಲ್ಲಿ ಕೆಲವು ರಾಜಕೀಯ ಪಕ್ಷಗಳ ಜತೆಗೂಡಿ ಮತದಾರರ ಮೇಲೆ ಪರಿಣಾಮ ಬೀರುವ ಕೆಲಸ ಮಾಡಿರುವ ಆರೋಪವೂ  ಕೇಂಬ್ರಿಡ್ಜ್ ಅನಾಲಿಟಿಕಾ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ  ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಗೊಳಿಸಿತ್ತು. ಕೇಂಬ್ರಿಡ್ಜ್ ಅನಾಲಿಟಿಕಾ ಹಾಗೂ ಕಾಂಗ್ರೆಸ್‌ ನಡುವೆ ನಂಟಿದೆ ಎಂದು  ಬಿಜೆಪಿ ಆರೋಪಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next