Advertisement
ಮರುಬಳಕೆಯೇ, ಮಾರಾಟವೇ? ಅನಾಲಿಟಿಕಾ, ಎಸ್.ಸಿ.ಎಲ್. ಸಂಸ್ಥೆಗಳು ತಮ್ಮ 2ನೇ ಇನ್ನಿಂಗ್ಸ್ ಶುರು ಮಾಡುತ್ತಿರುವುದರಿಂದ ಅನಾಲಿಟಿಕಾ ಹೊಂದಿರುವ ದತ್ತಾಂಶ ‘ಎಮರ್‌ಡೇಟಾ’ ಪಾಲಾಗಲಿದೆ ಎನ್ನಲಾಗುತ್ತಿದೆ. ಆದರೆ, ಇನ್ನೂ ಕೆಲವು ವರದಿಗಳು, ಸದ್ಯಕ್ಕೆ ತನ್ನಲ್ಲಿರುವ ಎಲ್ಲಾ ದತ್ತಾಂಶವನ್ನು ಒಳ್ಳೆಯ ಬೆಲೆಗೆ ಅನಾಲಿಟಿಕಾ ಮಾರಾಟ ಮಾಡಲಿದೆ ಎನ್ನುತ್ತಿವೆ. ಯಾವುದು ಸರಿ ಎಂಬುದನ್ನು ಕಾದು ನೋಡಬೇಕಿದೆ.
ಕೇಂಬ್ರಿಜ್ ಅನಾಲಿಟಿಕಾ ಬೆಂಗಳೂರಿನಲ್ಲೂ ತನ್ನ ಶಾಖಾ ಕಚೇರಿ ಹೊಂದಿದೆ. ಇದೀಗ, ಸಂಸ್ಥೆಯು ತನ್ನ ವಹಿವಾಟು ಸ್ಥಗಿತಗೊಳಿಸುತ್ತಿರುವುದರಿಂದ ಈ ಕಚೇರಿ ಬಂದ್ ಆಗಲಿದೆ. ಜತೆಗೆ, ಭಾರತದಲ್ಲಿರುವ ಸಂಸ್ಥೆಯ ಅಹ್ಮದಾಬಾದ್, ಗುವಾಹಾಟಿ, ಕಟಕ್, ಹೈದರಾಬಾದ್, ಇಂದೋರ್, ಕೋಲ್ಕತಾ, ಪಾಟ್ನಾ, ಪುಣೆ ಕಚೇರಿಗಳೂ ಶಟರ್ ಎಳೆದುಕೊಳ್ಳಲಿವೆ. – ಅನಾಲಿಟಿಕಾ ಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ : 2013
– 8.7 ಕೋಟಿ ಜನರ ಫೇಸ್‌ಬುಕ್ ಮಾಹಿತಿ ಕದ್ದ ಆರೋಪ ಹೊತ್ತಿರುವ ಅನಾಲಿಟಿಕಾ
– 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕದ್ದ ಮಾಹಿತಿ ಬಳಕೆ
– 2014ರಿಂದಲೇ ಮಾಹಿತಿ ಕಳವು ಆರಂಭಿಸಿದ್ದ ಅನಾಲಿಟಿಕಾ
Related Articles
ಅನಾಲಿಟಿಕಾ ಮತ್ತು ಅದರ ಮಾತೃಸಂಸ್ಥೆ ಎಸ್.ಸಿ.ಎಲ್. ಇಲೆಕ್ಟ್ರಾನಿಕ್ಸ್ ಒಟ್ಟಾಗಿಯೇ ಬಂದ್ ಆಗುತ್ತಿವೆ ಎನ್ನಲಾಗುತ್ತಿದೆ. ಹಾಗಂತ ಇದು ಶಸ್ತ್ರತ್ಯಾಗವಲ್ಲ. 2017ರಲ್ಲಿ ಎಸ್.ಸಿ.ಎಲ್. ಸಂಸ್ಥೆಯೇ ಹುಟ್ಟುಹಾಕಿದ್ದ ‘ಎಮರ್‌ಡೇಟಾ’ ಎಂಬ ಸಂಸ್ಥೆಗೆ ಈ ಎರಡೂ ಸಂಸ್ಥೆಗಳ ನಿರ್ದೇಶಕರು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
Advertisement
ಅನಾಲಿಟಿಕಾ ಮುಚ್ಚಿದರೂ, ಅದರ ವಿರುದ್ಧದ ತನಿಖೆ ಮುಂದುವರಿಯಲಿದೆ. ಸಂಸ್ಥೆಯಿಂದ ಲಿಖೀತ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. – ಕೇಂದ್ರ ಐಟಿ ಸಚಿವಾಲಯ