Advertisement

ಕೊಹ್ಲಿಯನ್ನು ಜೋಕ್‌ ಎಂದ ಡಕೆಟ್‌ಗೆ ಅವಮಾನ

01:44 AM Mar 11, 2019 | |

ನವದೆಹಲಿ: ಸಮಕಾಲೀನ ಕ್ರಿಕೆಟ್‌ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯನ್ನು ಜೋಕ್‌ ಎಂದ ಇಂಗ್ಲೆಂಡ್‌ನ‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಬೆನ್‌ ಡಕೆಟ್‌ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಹೆಸರಿನಲ್ಲೇ ಡಕ್‌ ಹೊಂದಿರುವ ಈ ಕ್ರಿಕೆಟಿಗನಿಗೆ 66 ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಕೊಹ್ಲಿ ವಿರುದ್ಧ ಮಾತನಾಡಲು ಯಾವ ಯೋಗ್ಯತೆಯಿದೆ ಎಂದು ಹರಿಹಾಯ್ದಿದ್ದಾರೆ. ಕ್ರಿಕೆಟ್‌ ಶೌಟ್ಸ್‌ ಎಂಬ ಅಭಿಮಾನಿಗಳ ವೆಬ್‌ ಸೈಟ್‌ ತನ್ನ ಟ್ವೀಟರ್‌ ಖಾತೆಯನ್ನು ಕೊಹ್ಲಿ ಬಗ್ಗೆ ಪ್ರತಿಕ್ರಿಯೆ ಆಹ್ವಾನಿಸಿತ್ತು. ಅದಕ್ಕಾಗಿ ವಿರಾಟ್‌ ಕೊಹ್ಲಿ ಅಂದರೆ ಎಂದು ಕೇಳಿ ಪ್ರತಿಕ್ರಿಯೆಗೆ ಉಳಿದ ಜಾಗವನ್ನು ಖಾಲಿ ಬಿಟ್ಟಿತ್ತು. ಅದಕ್ಕೆ ಡಕೆಟ್‌, ಜೋಕ್‌ ಎಂದು ಪ್ರತಿಕ್ರಿಯಿಸಿದ್ದರು. ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆನ್ನುವುದು ಖಚಿತವಾಗಿಲ್ಲ. ಆದರೆ ಅಭಿಮಾನಿಗಳು ಅವರಿಗೆ ಚೆನ್ನಾಗಿ ನೀರಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next