ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೋವಿಡ್ ಬಾಧಿತರಾಗಿ ಹೋಂ ಐಸೋಲೇಶೆನ್ ನಲ್ಲಿ ಇರುವ 1378 ಮಂದಿಯನ್ನು ಎರಡು ದಿನದೊಳಗೆ ಕೋವಿಡ್ ಕೇರ್ ಸೆಂಟರ್ ಗೆ ಕರೆತರಲು ಎಲ್ಲ ಗ್ರಾಮ ಪಂಚಾಯತ್ ಪಿಡಿಒಗಳಿಗೆ ಶಾಸಕ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ಮಂಗಳವಾರ ತಾ.ಪಂ ಕಚೇರಿಯಲ್ಲಿ ನೋಡಲ್ ಅಧಿಕಾರಿ.ಪಿಡಿಒಗಳ ಜತೆ ಸಭೆ ನಡೆಸಿದ ಶಾಸಕರು ಬೆಡ್ ಇಲ್ಲ ಆಕ್ಸಿಜನ್ ಇಲ್ಲ ಇತ್ಯಾದಿ ಸಮಸ್ಯೆಗಳಿಗೆ ಸೋಂಕು ಪೀಡಿತರು ಕೊನೆ ಕ್ಷಣದಲ್ಲೆ ಆಸ್ಪತ್ರೆಗಳಿಗೆ ಬರುವುದು ಕಾರಣ.ಇನ್ನು ಸೋಂಕು ಇದ್ದು ಮನೆಗಳಲ್ಲಿ ಐಸೋಲೇಶನ್ ಮಾಡಿಕೊಂಡಿರುವವರು ಅಲ್ಲಿ ವ್ಯವಸ್ಥೆ ಕೊರತೆ ಇತ್ಯಾದಿಗಳಿಂದ ಬಳಲುತ್ತಿದ್ದಾರೆ.
ಜತೆಗೆ ಮನೆಯಲ್ಲೆ ಇದ್ದು ಇತರರಿಗೆ ಹರಡುವುದಕ್ಕೂ ಎಡೆ ಮಾಡಿಕೊಡಬಹುದು.ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬರುವುದರಿಂದ ಬೆಡ್ ಸಮಸ್ಯೆ ಎಂದು ಗೊಂದಲಕ್ಕೆ ಒಳಗಾಗುತ್ತಾರೆ.ಇದನ್ನು ತಪ್ಪಿಸಲು ಮತ್ತು ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸೋಂಕನ್ನು ಹತೋಟಿಗೆ ತರಲು ಹೋಂ ಐಸೋಲೇಶನ್ ನಲ್ಲಿ ಉಳಿದುಕೊಂಡ ಎಲ್ಲರನ್ನು ಮನವೊಲಿಸಿ ಕೋವಿಡ್ ಆರೈಕೆ ಕೆಂದ್ರಕ್ಕೆ ತರುವಂತೆ ನೋಡಲ್ ಅಧಿಕಾರಿ, ಪಿಡಿಒಗಳಿಗೆ ಸೂಚಿಸಿದರು.
ಕೇಂದ್ರದಲ್ಲಿ ಎಲ್ಲವು ಉಚಿತ ವ್ಯವಸ್ಥೆ ಇರಲಿದೆ. ಜತೆಗೆ ಪಾಸಿಟಿವ್ ಪ್ರಕರಣಗಳಿರುವ ಮನೆಗಳಿಗೆ ಆಕ್ಸಿಮೀಟರ್ ಕೂಡ ನೀಡಲಾಗುತ್ತದೆ. ಒಟ್ಟಾರೆ ಉದ್ದೇಶ ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರುವುದಾಗಿದೆ.ಗ್ರಾಮ ಮಟ್ಟದ ಸಮಿತಿಗಳು ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಎಲ್ಲರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸೋಂಕನ್ನು ನಿರ್ಮೂಲನೆ ಮಾಡುವ ಕಡೆಗೆ ಹೆಚ್ಚು ಶ್ರಮ ವಹಿಸಬೇಕಿದೆ.ಇದು ಎಲ್ಲರ ಸಹಕಾರದಿಂದ ಸಾದ್ಯ ಎಂದರು.ತಹಶೀಲ್ದಾರ್ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಪುರಂದರ, ಶಶಿಧರ್ ಜಿ.ಎಸ್.ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.