Advertisement

ಧರ್ಮಜಾಗೃತಿಗೆ ಉತ್ತರಾದಿ ಶ್ರೀಗಳ ಕರೆ

03:45 AM Feb 05, 2017 | Team Udayavani |

ಉಡುಪಿ: ಪೀಠಾಧಿಪತಿಗಳು, ಯುವ ವಿದ್ವಾಂಸರು ಸೇರಿ ತಣ್ತೀಜ್ಞಾನದ ಧರ್ಮಪ್ರಸರಣ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.

Advertisement

ಶ್ರೀಮಧ್ವ ಸಪ್ತಮ ಶತಮಾನೋತ್ಸವದ ಪ್ರಯುಕ್ತ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಮಾಧ್ವ ತತ್ತÌಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಅನೇಕ ವಿದ್ಯಾಪೀಠಗಳಿಂದ ಯುವ ವಿದ್ವಾಂಸರು ಸಮಾಜಕ್ಕೆ ಬರುತ್ತಿದ್ದಾರೆ. ಅವರೆಲ್ಲರೂ ಖಾಸಗಿ ಜೀವನದ ಜತೆಗೆ ಧರ್ಮಜಾಗೃತಿ, ಧರ್ಮಪ್ರಸರಣ ಕಾರ್ಯದಲ್ಲಿ ತೊಡಗಬೇಕು. ಆ ಮೂಲಕ ಪ್ರತಿಯೊಬ್ಬನ ಮನೆಯಿಂದ ಧರ್ಮದ ರಕ್ಷಣೆಯ ಕಾರ್ಯ ಆಗಬೇಕು ಎಂದು ಹೇಳಿದರು.

ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರ ಗುರುಗಳಾದ ಶ್ರೀ ಸತ್ಯಪ್ರಮೋದತೀರ್ಥರ ಮಹಾಸಮಾರಾಧನೆ ನ. 6, 7, 8ರಂದು ಶ್ರೀಕೃಷ್ಣ ಮಠದಲ್ಲಿ ನಡೆಯಲಿದೆ. ಇದೇ ಸಂದರ್ಭ ಶ್ರೀ ಸತ್ಯಾತ್ಮತೀರ್ಥರ ಸುಧಾಮಂಗಳ ಮಹೋತ್ಸವ ನಡೆಯಲಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪ್ರಕಟಿಸಿದರು.

ವಿದ್ವಾಂಸ ಧೀರೇಂದ್ರಾಚಾರ್ಯ ಅವರಿಗೆ 1 ಲ.ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಿ ಪೇಜಾವರ ಶ್ರೀಗಳು ಗೌರವಿಸಿದರು. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬೆಂಗಳೂರಿನ ಶ್ರೀವಿಶ್ವಗುರುಪ್ರಿಯತೀರ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next