Advertisement

ಭೂಗಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

09:41 PM Oct 22, 2019 | Team Udayavani |

ದೇವನಹಳ್ಳಿ: ಪರಿಶಿಷ್ಟರ ಮಕ್ಕಳ ಹಾಸ್ಟಲ್‌ ಜಾಗ ಕಬಳಿಸಿರುವ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಹಾಸ್ಟಲ್‌ ನಿರ್ಮಾಣ ಮಾಡಲು ಆಗ್ರಹಿಸಿ ತಾಲೂಕು ಪ್ರಜಾ ವಿಮೋಚನ ಚಳುವಳಿ (ಸ್ವಾಭಿಮಾನ) ಸಂಘಟನೆ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ತಾಲೂಕು ಕಚೇರಿಯ ಗ್ರೇಡ್‌ 2 ತಹಶೀಲ್ದಾರ್‌ ಅನಿಲ್‌ ಕುಮಾರ್‌ರಿಗೆ ಈ ಕುರಿತು ಮನವಿ ಸಲ್ಲಿಸಿ, ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗಗಳ ಸಾರ್ವಜನಿಕ ವಿಧ್ಯಾರ್ಥಿ ನಿಲಯಗಳ ಕಟ್ಟಡನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ವಿಜಯಪುರದ ಸರ್ವೇ ನಂ 166/02 ರಲ್ಲಿರುವ 0.25 ಗುಂಟೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಕಬಳಿಸಿರುವ ಭೂಗಳ್ಳರ ವಿರುದ್ಧ ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989 ರ ಅನ್ವಯ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. 25 ಗುಂಟೆ ಜಮೀನನ್ನು ಸರ್ಕಾರ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

(ರಾಜ್ಯ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ರಾಜ್ಯಾಧ್ಯಕ್ಷ ಮುನಿ ಆಂಜನಪ್ಪ ಮಾತನಾಡಿ ಅಕ್ರಮವಾಗಿ ) ಭೂಗಳ್ಳರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಪೋಲೀಸ್‌ ವåತ್ತು ಸಮಾಜ ಕಲ್ಯಾಣ ಇಲಾಖೆ ದಿವ್ಯ ಮೌನ ವಹಿಸಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪರಿಶಿಷ್ಟರ ಸ್ವತ್ತಿನ ಭೂಕಬಳಿಕೆಯ ವಿಷಯವಾಗಿ ಚಿರ ನಿದ್ರೆಗೆ ಜಾರಿದೆ. ಇದರಿಂದಾಗಿ ಪರಿಶಿಷ್ಟ ಜಾತಿ ವರ್ಗದವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ.

ಕೂಡಲೇ ಸರ್ಕಾರ ಭೂಮಿ ವಶಕ್ಕೆ ಪಡೆದು ಕೊಂಡು ಶೋಷಿತರ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟಲ್‌ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. (ತಾಲೂಕು ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್‌ ಮಾತನಾಡಿ) ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆ ಯನ್ನು ಕೂಡಲೇ ಪ್ರತಿಷ್ಠಾಪನೆ ಮಾಡಲು ಕ್ರಮ ಕೈಗೊಳ್ಳಬೇಕು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹನುಮಣ್ಣ ಗೂಳ್ಯ, ಬೆಂಗಳೂರು ವಿಭಾಗೀಯ ಶಾಖೆ ಸಂಘಟನಾ ಕಾರ್ಯದರ್ಶಿ ಮುನಿರಾಜು, ಬೆಂಗಳೂರು ನಗರ ಆಧ್ಯಕ್ಷ ಆಯೂಬ್‌ ಖಾನ್‌, ಸಂಘಟನಾ ಕಾರ್ಯದರ್ಶಿ ಚನ್ನ ಮರಿಯಪ್ಪ, ತಾಲೂಕು ಗೌರವಾಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮ್‌ ಪ್ರಿಯನ್‌, ಕಾರ್ಯದರ್ಶಿ ಮುನಿರಾಜು, ಮುಖಂಡರಾದ ವಿಶ್ವನಾಥ್‌ ಚೌದರಿ, ಆನಂದ್‌, ಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ, ವರಲಕ್ಷ್ಮಿ, ಮುನಿಯಮ್ಮ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next