Advertisement

ಸ್ವಯಂ  ಉದ್ಯೋಗ ಹೊಂದಲು ಕರೆ

05:17 PM Aug 23, 2018 | Team Udayavani |

ಶಿರೂರ: ವಲಯ ವ್ಯಾಪ್ತಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮಹಿಳಾ ಸಂಘಗಳ ಪದಾಧಿಕಾರಿಗಳಿಗೆ ಬಲವರ್ಧನೆ ತರಬೇತಿ ಕಾರ್ಯಾಗಾರ ಮತ್ತು ಸದಸ್ಯರೆಯರಿಗೆ ಗ್ರೀನ್‌ ವೇ ಜಂಬೂ ಒಲೆಗಳ ವಿತರಣಾ ಕಾರ್ಯಕ್ರಮ ನಡೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ. ಒಲೆ ವಿತರಿಸಿ ಮಾತನಾಡಿದ ಅವರು, ಇಂದಿಗೂ ಹಳ್ಳಿಗಳಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ಒಲೆಗೆ ಸೌಧೆ ಬಳಸುವುದರಿಂದ ಅರಣ್ಯ ಹಾಗೂ ಪರಿಸರ ಹಾಳಾಗುತ್ತದೆ. ಇವುಗಳನ್ನು ತಪ್ಪಿಸಲು ಗ್ರೀನ್‌ವೇ ಜಂಬೂ ಒಲೆ ಸಹಕಾರಿಯಾಗುತ್ತದೆ ಎಂದರು.

Advertisement

ಪರಿಸರ ರಕ್ಷಣೆ ಮಾಡುವುದರ ಜತೆಯಲ್ಲಿ ಅರಣ್ಯ ಹಾಗೂ ಪರಿಸರ ಹಾಳಾಗದಂತೆ ಎಚ್ಚರ ವಹಿಸುವಂತೆ ಕೋರಿದರು. ಭವಿಷ್ಯದಲ್ಲಿ ಎದುರಾಗುವ ಅನಾಹುತ ತಡೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ವಲಯ ಮೇಲ್ವಿಚಾರಕ ಹನಮಂತ ಪಿ.ಎಸ್‌. ಮಾತನಾಡಿ, ಈಗಾಗಲೇ 20ಕ್ಕೂ ಹೆಚ್ಚು ಮಹಿಳೆಯರಿಗೆ ವಿತರಿಸಲಾಗಿದೆ. ವಲಯದಲ್ಲಿ 200ಕ್ಕೂ ಹೆಚ್ಚು ಒಲೆ ವಿತರಿಸುವ ಗುರಿಯಿದೆ ಎಂದರು. ತಾಲೂಕು ಯೋಜನಾ ಅಧಿಕಾರಿ ಜ್ಯೋತಿ ಜೋಳದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರೂರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಮನಕ್ಕಾ ರಾಮಣ್ಣವರ, ಸೇವಾ ಪ್ರತಿನಿಧಿ ಗಳಾದ ಬಸಮ್ಮ ಖಾನಾಪುರ, ಚೆನ್ನಮ್ಮ ವಡ್ಡರ, ಐನಾವತಿ ವಾಲಿಕಾರ, ಸಿದ್ದಪ್ಪ ಹಳ್ಳೂರ, ಅನಸೂಯಾ ಮುತ್ತನ್ನವರ, ಪ್ರೇಮಾ ದೊಡಮನಿ, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next