Advertisement

ಸಂಘಟಿತರಾಗಲು ಬ್ಯಾಂಕ್‌ ನೌಕರರಿಗೆ ಕರೆ

11:59 AM Jun 10, 2018 | Team Udayavani |

ಬೆಂಗಳೂರು: ಬ್ಯಾಂಕ್‌ ನೌಕರರ ಸಂಘಗಳು ಸಂಘಟಿತವಾದಾಗ ಸರ್ಕಾರಿ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್‌.ಎಂ.ಫಾರೂಕ್‌ ಷಾಹಬ್‌ ಹೇಳಿದ್ದಾರೆ.

Advertisement

ಸ್ಟೇಟ್‌ ಬ್ಯಾಂಕ್‌ ನೌಕರರ ಸಂಘದಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 13ನೇ ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೆಲ್ವೆ ಸಿಬ್ಬಂದಿ, ಟ್ರೇಡ್‌ ಯೂನಿಯನ್‌ಗಳಲ್ಲಿ ಹೆಚ್ಚಿನ ಒಗ್ಗಟ್ಟಿದೆ. ಆದರೆ, ಬ್ಯಾಕ್‌ ನೌಕರರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹೀಗಾಗಿ ಸರ್ಕಾರದ ಸೌಲಭ್ಯವನ್ನು ಬ್ಯಾಂಕ್‌ ನೌಕರರು ಸಮರ್ಪಕವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಯುಎಫ್‌ಬಿಯು ಸಲಹೆಗಾರ ಸಂಜೀವ್‌ ಕೆ.ಬಂದ್ಲಿàಶ್‌, ಎಐಎಸ್‌ಬಿಐಎಸ್‌ಎಫ್‌ನ ಅಧ್ಯಕ್ಷ ವಿ.ವಿ.ಎಸ್‌.ಆರ್‌.ಶರ್ಮಾ, ಉಪಾಧ್ಯಕ್ಷ ಅರುಣ್‌ ಭಗೋಲಿವಾಲ್‌, ಎಸ್‌ಬಿಎಸ್‌ಯುನ ಅಧ್ಯಕ್ಷ ಟಿ.ರಮೇಶ್‌ ರಾವ್‌, ಮುಖ್ಯಕಾರ್ಯದರ್ಶಿ ಕೆ.ಎನ್‌.ಎನ್‌.ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next