Advertisement

ಸಹಕಾರ ಬ್ಯಾಂಕ್‌ಗಳ ಲೆಕ್ಕಾಚಾರ: ಭಾರಿ ಹೇರಾಫೇರಿ

03:45 AM Jan 20, 2017 | |

ಮುಂಬೈ: 500 ಮತ್ತು 1000 ರೂ. ನೋಟುಗಳ ಅಪನಗದೀಕರಣದ ನಂತರ, ದೇಶದಲ್ಲಿನ ಕಪ್ಪುಹಣವನ್ನು ಬಿಳಿ ಮಾಡಿಕೊಡುವಲ್ಲಿ ಸಹಕಾರಿ ಬ್ಯಾಂಕುಗಳು ಭಾರಿ ಸಹಕಾರ ನೀಡಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ನೀಡಿದೆ.

Advertisement

ಈ ಸಂಬಂಧ ಆರ್‌ಬಿಐಗೆ ವಿವರವಾಗಿ ಬರೆದಿರುವ ಅದು, ನ.8ರ ನಂತರ ಹಲವಾರು ಸಹಕಾರಿ ಬ್ಯಾಂಕುಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಕೋಟ್ಯಂತರ ರೂಪಾಯಿ ಕಪ್ಪುಹಣವನ್ನು ವೈಟ್‌ ಮಾಡಿಕೊಟ್ಟಿವೆ ಎಂದು ಆರೋಪಿಸಿದೆ. ಈ ನಿಟ್ಟಿನಲ್ಲಿ ಪುಣೆ ಮತ್ತು ಮುಂಬೈನ ಎರಡು ಬ್ಯಾಂಕುಗಳ ವಹಿವಾಟನ್ನು ಉದಾಹರಣೆಯಾಗಿ ನೀಡಿದೆ.  ಸಹಕಾರಿ ಬ್ಯಾಂಕುಗಳಲ್ಲಿ ಇದ್ದ ಹಣಕ್ಕೂ, ಆರ್‌ಬಿಐಗೆ ನೀಡಿದ ಲೆಕ್ಕಕ್ಕೂ ಹೊಂದಾಣಿಕೆಯೇ ಆಗುತ್ತಿಲ್ಲ. ಹೇಳಿದ್ದೊಂದು, ಲೆಕ್ಕದಲ್ಲಿ ತೋರಿಸಿದ್ದೊಂದು ಆಗಿದೆ. ಪುಣೆ ಮತ್ತು ಮುಂಬೈ ಬ್ಯಾಂಕುಗಳಲ್ಲಿ 113 ಕೋಟಿ ರೂಪಾಯಿ ಮೌಲ್ಯದ ಹಳೇ ನೋಟುಗಳು ಹೆಚ್ಚುವರಿಯಾಗಿ ಸಿಕ್ಕಿವೆ ಎಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next