Advertisement

ರಫೇಲ್‌ ಆಡಿಟ್‌ನಿಂದ ಸಿಎಜಿ ಹಿಂದೆ ಸರಿಯಲಿ: ಕಾಂಗ್ರೆಸ್‌  

12:30 AM Feb 11, 2019 | Team Udayavani |

ಹೊಸದಿಲ್ಲಿ: ರಫೇಲ್‌ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ರವಿವಾರ ಹೊಸ ಆಗ್ರಹವನ್ನು ಮುಂದಿಟ್ಟಿದ್ದು, ರಫೇಲ್‌ ಒಪ್ಪಂದದ ಆಡಿಟಿಂಗ್‌ನಿಂದ ಮಹಾಲೇಖಪಾಲ (ಸಿಎಜಿ) ರಾಜೀವ್‌ ಮೆಹ್ರಿಷಿ ಅವರು ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.

Advertisement

ರಾಜೀವ್‌ ಅವರು ಒಪ್ಪಂದದ ಸಮಯದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದು, ಒಪ್ಪಂದ ಕುರಿತ ಮಾತುಕತೆಯಲ್ಲೂ ಭಾಗಿಯಾಗಿದ್ದರು. ಈಗ ಅವರೇ ಆಡಿಟಿಂಗ್‌ ಮಾಡಿದರೆ, ಸ್ವಹಿತಾಸಕ್ತಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, 36 ರಫೇಲ್‌ ಜೆಟ್‌ಗಳನ್ನು ಖರೀದಿಸುವ ಒಪ್ಪಂದದ ಬಗೆಗಿನ ಆಡಿಟಿಂಗ್‌ನಿಂದ ಅವರು ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಅಲ್ಲದೆ, ಮೆಹ್ರಿಷಿ ಅವರು ಸಂಸತ್‌ನಲ್ಲಿ ಸಿಎಜಿ ವರದಿಯನ್ನು ಸಲ್ಲಿಸುವುದೂ ಸರಿಯಲ್ಲ ಎಂದಿದೆ. 

ವಿವಾದಿತ ಡೀಲ್‌ ಕುರಿತ ಸಿಎಜಿ ವರದಿ ಸೋಮವಾರ ಸಂಸತ್‌ನಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಮೆಹ್ರಿಷಿ ಅವರು 2014ರ ಅ.24ರಿಂದ 2015ರ ಆಗಸ್ಟ್‌ 30ರ ವರೆಗೆ ಕೇಂದ್ರ ವಿತ್ತ ಕಾರ್ಯದರ್ಶಿಯಾಗಿದ್ದರು. ಪ್ರಧಾನಿ ಮೋದಿ ಅವರು 2015ರ ಎ. 10ರಂದು ಪ್ಯಾರಿಸ್‌ಗೆ ಹೋಗಿ, ರಫೇಲ್‌ ಡೀಲ್‌ಗೆ ಸಹಿ ಹಾಕಿದ್ದರು. ರಕ್ಷಣಾ ಒಪ್ಪಂದದ ಮಾತುಕತೆಯಲ್ಲಿ ವಿತ್ತ ಕಾರ್ಯದರ್ಶಿಯ ಪಾತ್ರವೂ ಪ್ರಮುಖವಾಗಿರುತ್ತದೆ. ಈಗ ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ ಆಗಿರುವ ಕಾರಣ, ಸಿಎಜಿ ಮೆಹ್ರಿಷಿ ಆಡಿಟಿಂಗ್‌ ಕೈಗೊಂಡರೆ ತಮ್ಮ ವಿರುದ್ಧ ತಾವೇ ತನಿಖೆ ನಡೆಸಿದಂತಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next