Advertisement

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

01:13 AM Apr 21, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಸಾವೀರ್‌ ಹುಸೇನ್‌ ಶಾಜೀಬ್‌ ಹಾಗೂ ಶಿವಮೊಗ್ಗ ತೀರ್ಥಹಳ್ಳಿಯ ಅಬ್ದುಲ್‌ ಮಥೀನ್‌ ತಾಹಾ ಕಸ್ಟಡಿ ಅವಧಿ ಎ.22ರಂದು ಮುಕ್ತಾಯವಾಗಲಿದ್ದು, ಇಬ್ಬರು ನ್ಯಾಯಾಲಯಕ್ಕೆ ಹಾಜರುಪಡಿಸಲು ಎನ್‌ಐಎ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮಾ.1ರಂದು ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಮುಸಾವೀರ್‌ ಹಾಗೂ ತಾಹಾನನ್ನು ಎ.12ರಂದು ಬಂಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next