Advertisement

Cafe blast; ಸರಕಾರ ಮತ್ತು ಪೊಲೀಸ್ ಗುಪ್ತಚರ ವೈಫಲ್ಯ ಸ್ಪಷ್ಟವಾಗಿದೆ: ಬಿಜೆಪಿ

09:13 PM Mar 01, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟ ಘಟನೆ ನಡೆದಿರುವುದು ಸರಕಾರ ಮತ್ತು ಪೊಲೀಸ್ ಗುಪ್ತಚರ ವೈಫಲ್ಯವು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಸರ್ಕಾರವು ರಾಜ್ಯವನ್ನು ಅವ್ಯವಸ್ಥೆಗೆ ತಳ್ಳುತ್ತಿದೆ, ಇದು ಸಮಾಜವಿರೋಧಿಗಳಿಗೆ ಸುರಕ್ಷಿತ ಸ್ವರ್ಗವಾಗಿದೆ. ಅಪರಾಧಗಳನ್ನು ಹೆಚ್ಚಿಸುತ್ತಿದೆ. ಇಂದು ನಡೆದ ಸ್ಫೋಟ ಘಟನೆ ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಹೇಳಿಕೆ ನೀಡಿದುದರ ಮುಂದುವರಿದ ಭಾಗವಾಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ, ತುಷ್ಟೀಕರಣ ನೀತಿ ರಾಜ್ಯಕ್ಕೆ ಗಂಡಾಂತರ ತಂದಿಟ್ಟಿದೆ ಎಂದು ಕಿಡಿ ಕಾರಿದರು. ಎಂದು ಆರೋಪಿಸಿದರು.

ಎಫ್ ಎಸ್ ಎಲ್ ವರದಿಯಲ್ಲಿ ‘ಪಾಕಿಸ್ಥಾನ್ ಜಿಂದಾಬಾದ್’ ಎಂದು ಹೇಳಿರುವ ಬಗ್ಗೆ ಖಚಿತವಾದ ವರದಿ ಬಂದರೂ ಅದನ್ನು ಬೋಗಸ್ ಮಾಡಿ ಮತ್ತೊಂದು ರಿಪೋರ್ಟ್ ಕೊಡುವಂತಹ ಕೆಲಸ ಸರಕಾರ ಮಾಡುವ ಅನುಮಾನ ನಮಗಿದೆ ಎಂದರು.

‘ಶಿವಮೊಗ್ಗದಲ್ಲಿ ಟಿಪ್ಪು ಜಯಂತಿಯ ಮುಖೇನ ಹಿಂದೂಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳನ್ನು ಕಾಂಗ್ರೆಸ್ ಶಾಸಕರೇ ನಿರಪರಾಧಿಗಳು, ಅಮಾಯಕರು ಅವರ ವಿರುದ್ಧ ಕೇಸ್ ಹಿಂಪಡಿಯಿರಿ ಎಂದು ಗೃಹ ಸಚಿವರಿಗೆ ಪತ್ರ ಬರೆದಿದ್ದರು’ಎಂದರು.

ಕಾಂಗ್ರೆಸ್ ಸಂಸದನ ಹಿಂಬಾಲಕರು ಪಾಕ್ ಪರ ಘೋಷಣೆ ಕೂಗಿ ಇಡೀ ದೇಶಕ್ಕೆ ಆತಂಕ ಪಡುವ ಕೆಲಸ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ‘ಮೈ ಬ್ರದರ್ ಪಾಲಿಸಿ’ಯು ರಾಜ್ಯದ ಜನರ ರಕ್ಷಣೆ ವಿಚಾರದಲ್ಲಿ ದೊಡ್ಡ ಯಕ್ಷ ಪ್ರಶ್ನೆ ಹುಟ್ಟು ಹಾಕಿದೆ ಎಂದರು.

Advertisement

“ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸಮಗ್ರ ತನಿಖೆಯನ್ನು ನಡೆಸಿ ಈ ಅಂಶಗಳನ್ನು ಮೂಲದಿಂದ ನಿರ್ಮೂಲನೆ ಮಾಡುವಂತೆ ನಾವು ಪೊಲೀಸರನ್ನು ಬಲವಾಗಿ ಒತ್ತಾಯಿಸುತ್ತೇವೆ” ಎಂದರು.

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಮತ್ತೊಂದು ಜ್ವಲಂತ ಉದಾಹರಣೆಯಾಗಿದೆ ಎಂದರು.

“ಕಾಂಗ್ರೆಸ್ ಎಲ್ಲಿ ಅಧಿಕಾರಕ್ಕೆ ಬಂದರೂ, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಅದರ ನಿರ್ಲಜ್ಜ ಮತ್ತು ಕಡಿವಾಣವಿಲ್ಲದ ಓಲೈಕೆಯ ನೀತಿಯಿಂದಾಗಿ ಧೈರ್ಯಶಾಲಿಯಾಗುತ್ತಾರೆ. ಸರ್ಕಾರವು ಮೊದಲು ಕರ್ನಾಟಕದ ಜನರಿಗೆ ಸುರಕ್ಷತೆ ಮತ್ತು ಭದ್ರತೆಯ ‘ಗ್ಯಾರಂಟಿ’ಯನ್ನು ಖಾತ್ರಿಪಡಿಸಬೇಕು” ಎಂದರು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಬೆಂಗಳೂರಿನ ಜನರಿಗೆ ಸ್ಪಷ್ಟ ಉತ್ತರವನ್ನು ನೀಡಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಮುಕ್ತ ಹಸ್ತವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next