Advertisement

ಕೊಡಚಾದ್ರಿ-ಕೊಲ್ಲೂರು ಕೇಬಲ್‌ ಕಾರ್‌ಗೆ ಅನುಮೋದನೆ: ಸಂಸದ ಬಿ.ವೈ. ರಾಘವೇಂದ್ರ

10:40 PM Mar 26, 2022 | Team Udayavani |

ಶಿರಾಳಕೊಪ್ಪ: 1200 ಕೋಟಿ ರೂ. ವೆಚ್ಚದ 7 ಕಿ.ಮೀ. ಉದ್ದದ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಕೇಬಲ್‌ ಕಾರ್‌ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೊದನೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2021-22ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್‌, ರೋವರ್ ಮತ್ತು ರೇಂಜರ್ ಚಟುವಟಿಕೆ ಹಾಗೂ ಪುರಸಭೆ ವ್ಯಾಪ್ತಿಯ 21ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೊಡಚಾದ್ರಿ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 20 ಕೋಟಿ ರೂ. ನೀಡಿದ್ದರು.

ಆದರೆ, ಕಾನೂನು ತೊಡಕಿನಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ರಸ್ತೆ ನಿರ್ಮಾಣಕ್ಕೆ ಪರಿಸರ ಇಲಾಖೆಯ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಸ್ವೀಕರಿಸಿರುವ ಕೇಂದ್ರ ಸಚಿವರು ಸಭೆಯಲ್ಲಿ ಅನುಮೋದನೆಯನ್ನು ಸಹ ನೀಡಿದ್ದಾರೆ.ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ ಸಮಿತಿಯು ಬಿ++ ಗ್ರೇಡ್‌ ನೀಡಿದೆ.

ಶಿರಾಳಕೊಪ್ಪದ ಪ್ರಥಮ ದರ್ಜೆ ಕಾಲೇಜಿಗೆ ಮುಂದಿನ ವರ್ಷ ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ, ಕಾಲೇಜಿಗೆ ಅವಶ್ಯಕತೆ ಇರುವ ಮೂಲ ಸೌಕರ್ಯ ಪಟ್ಟಿ ಸಿದ್ಧಪಡಿಸಿ ಕೊಡಿ ಎಂದೂ ಪ್ರಾಂಶುಪಾಲರಿಗೆ ಸೂಚಿಸಿದರು.

ನಂತರ ಸಭೆ ನಡೆಸಿದ ಅವರು ಕಾಲೇಜು ಕ್ಯಾಂಟೀನ್‌, ಕ್ರೀಡಾಂಗಣ, ಅಡಿಟೋರಿಯಂ, ಪಾಲಿಟೆಕ್ನಿಕ್‌ ಹಾಗೂ ಪದವಿ ಕಾಲೇಜಿಗೆ ಸೇರಿ 160 ಡೆಸ್ಕಾಗಳನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ ಮಾತನಾಡಿ, ತಾಳಗುಂದ, ಉಡುಗಣಿ ಸೇರಿದಂತೆ ತಾಲೂಕನ್ನು ಸಮಗ್ರ ನೀರಾವರಿಯಾಗಿ ಪರಿವರ್ತಿಸಲು ಜನರು ಬೆಂಬಲವಾಗಿ ನಿಲ್ಲಬೇಕು ಎಂದರು.

ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕ ಅಗಡಿ ಅಶೋಕ್‌,ಶಿಮುಲ್‌ ನಿರ್ದೇಶಕ ಸಿದ್ದಲಿಂಗಪ್ಪ, ಭೋವಿ ನಿಗಮದ ನಿರ್ದೇಶಕ ಸಣ್ಣಹನುಮಂತಪ್ಪ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರ್‌, ಕೆಎಸ್‌ಡಿಎಲ್‌ ನಿರ್ದೇಶಕಿ ನಿವೇದಿತಾ ರಾಜು, ಪುರಸಭೆ ಅಧ್ಯಕ್ಷೆ ಮಂಜುಳಾ ರಾಜು,ಉಪಾಧ್ಯಕ್ಷೆ ರಾಜೇಶ್ವರಿ ವಸಂತ, ಮುಖ್ಯಾ ಧಿಕಾರಿ ಹೇಮಂತ್‌, ಟೌನ್‌ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ,ಕಾಲೇಜು ಕಾರ್ಯಾಧ್ಯಕ್ಷ ಎನ್‌.ಟಿ. ರಾಜಶೇಖರಪ್ಪ, ಉದ್ಯಮಿ ಎಂ.ಆರ್‌. ಸತೀಶ್‌, ನಾಗಿಹಳ್ಳಿ ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next