Advertisement

ಪಾಕ್‌ ಪ್ರಧಾನಿ ಅಬ್ಬಾಸಿ ಸಚಿವ ಸಂಪುಟದಿಂದ ಪ್ರಮಾಣ ವಚನ ಸ್ವೀಕಾರ

11:57 AM Aug 04, 2017 | Team Udayavani |

ಇಸ್ಲಾಮಾಬಾದ್‌ : ಪಾಕಿಸ್ಥಾನದ ಮಧ್ಯಾವಧಿ ಪ್ರಧಾನಿ ಶಾಹೀದ್‌ ಖಾನ್‌ ಅಬ್ಬಾಸಿ ಅವರ ಸಚಿವ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸಿತು. 

Advertisement

ಖ್ವಾಜಾ ಆಸೀಫ್  ಅವರನ್ನು 2013ರ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಕಾಲಿಕ ವಿದೇಶ ಸಚಿವರನ್ನಾಗಿ ನೇಮಿಸಲಾಯಿತೆಂದು ಮಾಧ್ಯಮ ವರದಿಗಳು ತಿಳಿಸಿವೆ. 

ಇಸ್ಲಾಮಾಬಾದ್‌ನಲ್ಲಿನ ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಮಮ್‌ನೂನ್‌ ಹುಸೇನ್‌ ಅವರು ನೂತನ ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ನೂತನ ಸಚಿವ ಸಂಪುಟದಲ್ಲಿ 28 ಕ್ಯಾಬಿನೆಟ್‌ ಸಚಿವರು ಮತ್ತು 19 ಸಹಾಯಕ ಸಚಿವರು ಇದ್ದಾರೆ. ಇವರಲ್ಲಿ ಹಳೇ ಮುಖಗಳೇ ಅಧಿಕ ಸಂಖ್ಯೆಯಲ್ಲಿವೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಸಚಿವ ಖಾತೆ ಹಂಚಿಕೆ ಬಗ್ಗೆ ಯಾವುದೇ ಔಪಚಾರಿಕ ಪ್ರಕಟನೆ ಈ ತನಕ ಹೊರಬಂದಿಲ್ಲ ಎಂದು ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next