ಹೊಸದಿಲ್ಲಿ : ದೇಶದಲ್ಲಿ ಅಕ್ರಮ ಠೇವಣಿ ಸಂಚಯನ ಪಿಡುಗನ್ನು ತಡೆಯುವ ನಿಟ್ಟಿನಲ್ಲಿ “ಅನಿಯಂತ್ರಿತ ಠೇವಣಿ ಯೋಜನೆ’ ಗಳನ್ನು ನಿಷೇಧಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿತು.
ಈ ಮಸೂದೆಯು 2019ರ ಅನಿಯಂತ್ರಿತ ಠೇವಣಿ ನಿಷೇಧಗಳ ಅಧ್ಯಾದೇಶವನ್ನು ಬದಲಿಸಲಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು “ಚಿಟ್ ಫಂಡ್ ಯೋಜನೆಗಳಿಂದಾಗಿ ದೇಶದಲ್ಲಿ ಜನರು ತೀವ್ರ ಮೋಸ, ವಂಚನೆ, ನಷ್ಟಕ್ಕೆ ಗುರಿಯಾಗಿದ್ದಾರೆ’ ಎಂದು ಹೇಳಿದರು.
ಪ್ರಸ್ತಾವಿತ ಮಸೂದೆಯು ಅಕ್ರಮವಾಗಿ ಠೇವಣಿ ಎತ್ತುವ ಚಟುವಟಿಕೆಗಳನ್ನು ನಿಷೇಧಿಸುವುದಲ್ಲದೆ ಕಾನೂನು ಪ್ರಕಾರ ಶಿಕ್ಷೆ ವಿಧಿಸುವ ಅವಕಾಶವನ್ನು ಹೊಂದಿರುತ್ತದೆ ಎಂದು ಜಾವಡೇಕರ್ ಹೇಳಿದರು.