Advertisement

ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ: ಡಿಸಿಎಂ ಸವದಿ

11:00 PM Jan 12, 2020 | Team Udayavani |

ಕೊಪ್ಪಳ: ಬಿಜೆಪಿಯಿಂದ ಗೆದ್ದಿರುವ ಶಾಸಕರಿಗೆ ಸಂಕ್ರಾಂತಿ ಬಳಿಕ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ. ಸಂಕ್ರಾಂತಿ ಬಳಿಕ ಉತ್ತಮ ದಿನ ನೋಡಿ ನೂತನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

Advertisement

ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಕೇಳುತ್ತಿದ್ದು, ಅದು ಅವರವರ ವೈಯಕ್ತಿಕ ಅಭಿಪ್ರಾಯ ಎಂದರು. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಬಗ್ಗೆ ನಾನು ಮಾತನಾಡುವ ಅವಶ್ಯಕತೆಯಿಲ್ಲ. ಈಶ್ವರ ಖಂಡ್ರೆ ಹೇಳಿಕೆಗೂ ನಾನು ಉತ್ತರ ಕೊಡುವುದಿಲ್ಲ. ಮೊದಲು ಕುಮಾರಸ್ವಾಮಿ ಕೊಳಕು ಹೇಳಿಕೆ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗುವುದು.

ಪೌರತ್ವ ಕಾನೂನು ಬಗ್ಗೆ ಅನೇಕ ಕಡೆಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಪೌರತ್ವ ಕಾನೂನು ದೇಶದ ಅಖಂಡತೆಗೆ ಮತ್ತಷ್ಟು ಬಲ ಬಂದಿದೆ. ಇವರೆಗೂ ಪೌರತ್ವ ಕಾಯ್ದೆ ಎಂಟು ಬಾರಿ ತಿದ್ದುಪಡಿಯಾಗಿದೆ. ಅನವಶ್ಯಕವಾಗಿ ದೇಶದ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್‌ ಗೊಂದಲ ಸೃಷ್ಟಿಸಿ, ಬೀದಿಗಿಳಿದು ಹೋರಾಟ ಮಾಡುವಂತೆ ಪ್ರೇರೇಪಿಸುತ್ತಿದೆ. ಗಂಗಾವತಿಯಲ್ಲಿ ಪೌರತ್ವ ಜಾಗೃತಿ ಕುರಿತಂತೆ ನಡೆದ ಗಲಾಟೆ ಅನ್ಯ ಪಕ್ಷದವರ ಕೈವಾಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next