Advertisement
ಖಾಲಿ ಇರುವ 2 ಸ್ಥಾನಗಳ ಜತೆಗೆ ಕೆಲವು ಸಚಿವರನ್ನು ಕೈಬಿಟ್ಟು ಇನ್ನಷ್ಟು ಹೊಸಬರಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂಬ ಬೇಡಿಕೆ ಇದ್ದು, ಪರಿಷತ್ ಚುನಾವಣೆಯ ಫಲಿ ತಾಂಶವೂ ಹಾಲಿ ಸಚಿವರ ಭವಿಷ್ಯ ನಿರ್ಧ ರಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.
ಡಿ. 13ರಂದು ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೆ ಮುನ್ನವೇ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ಮಾತು ಬಿಜೆಪಿ ವಲಯ ದಲ್ಲಿದೆ. ಮಾಜಿ ಸಿಎಂ ಯಡಿಯೂರಪ್ಪ ಇದಕ್ಕೆ ಪುಷ್ಟಿ ನೀಡು ವಂತೆ ಮಾತ ನಾಡಿದ್ದರೆ, ಶಾಸಕ ಬಸನಗೌಡ ಯತ್ನಾಳ್ ಸಂಪುಟ ವಿಸ್ತರಣೆಯ ಬಗ್ಗೆ ಮೇಲಿಂದ ಮೇಲೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಲು ಕಾರಣವಾಗಿವೆ. ಆದರೆ, ಡಿ. 10ರಂದು ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಲಿದ್ದು, ಅದಕ್ಕೆ ಮೊದಲು ಸಂಪುಟ ವಿಸ್ತರಣೆ ಅನುಮಾನ ಎಂಬ ಅಭಿಪ್ರಾಯವಿದೆ.
Related Articles
Advertisement
ಚರ್ಚೆಯಾಗಿಲ್ಲಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧಕ್ಷರ ನಡುವೆ ಹಾಗೂ ಪಕ್ಷದ ಯಾವುದೇ ಆಂತರಿಕ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂಬ ಮಾಹಿತಿ ಲಭಿಸಿದೆ. ಚುನಾವಣೆ ಮತ್ತು ಅಧಿವೇಶನ ಇರುವ ಈ ಸನ್ನಿವೇಶದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕುವ ಸಂಭವ ಕಡಿಮೆ ಎಂದು ಬಿಜೆಪಿ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ರಮೇಶ್, ವಿಜಯೇಂದ್ರ ಸೇರ್ಪಡೆ?
ಸಂಪುಟ ವಿಸ್ತರಣೆ ಚರ್ಚೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಕೇಳಿ ಬರುತ್ತಿವೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜತೆಗೆ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ರಮೇಶ್ ಅಧಿವೇಶನಕ್ಕೆ ಮುನ್ನ ಮತ್ತೆ ಸಂಪುಟ ಸೇರಲು ಕಸರತ್ತು ನಡೆಸಿ ದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಅವರನ್ನೂ ಸೇರಿಸಿಕೊಳ್ಳಬೇಕೆಂಬ ಒತ್ತಡ ಹಿಂದಿನಿಂದಲೂ ಇದೆ. ಈ ಬಾರಿ ವಿಸ್ತರಣೆ ಆದರೆ ವಿಜಯೇಂದ್ರ ಅವರಿಗೆ ಸ್ಥಾನ ಖಚಿತ ಎಂಬ ಮಾತು ಅವರ ಆಪ್ತ ವಲಯದಲ್ಲಿದೆ.