Advertisement
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಹತ್ತು ಮಂದಿಯ ಪ್ರಮಾಣವಚನ ಸ್ವೀಕಾರದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಬಣಗಳ ನಡುವೆ ತೆರೆಮರೆಯ ಕಿತ್ತಾಟ ಆರಂಭ ವಾಗಿದೆ. ಇದರಿಂದ ಉಂಟಾಗಿರುವ ಕಗ್ಗಂಟು ಆಕಾಂಕ್ಷಿಗಳನ್ನು ಕಂಗೆಡಿಸಿದೆ. ಇದು ಅಲ್ಲಲ್ಲಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ. “ಪಕ್ಷ ನಿಷ್ಠರನ್ನು ನಿಕೃಷ್ಟವಾಗಿ ಕಾಣುತ್ತಿರುವ’ ಬಗ್ಗೆ ರವಿವಾರ ಕೆಲವರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.
Related Articles
Advertisement
ಆಕಾಂಕ್ಷಿಗಳು ಯಾರು?ಪಕ್ಷದ ಮೂಲಗಳ ಪ್ರಕಾರ ಒಟ್ಟಾರೆ ಸಚಿವ ಸಂಪುಟ 34 ಸಚಿವರನ್ನು ಒಳಗೊಂಡಿರುತ್ತದೆ. ಈ ಪೈಕಿ 10 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದ 20 ಸ್ಥಾನಗಳಿಗೆ ಮುಸುಕಿನ ಗುದ್ದಾಟ ನಡೆದಿದೆ. ಅತಿ ಹೆಚ್ಚು ಶಾಸಕರನ್ನು ನೀಡಿರುವ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಸಹಜವಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್, ಧಾರವಾಡ ಗ್ರಾಮೀಣ ಕ್ಷೇತ್ರದ ವಿನಯ ಕುಲಕರ್ಣಿ, ಬೆಳಗಾವಿಯ ಲಕ್ಷ್ಮೀ ಹೆಬ್ಟಾಳ್ಕರ್ (ಮಹಿಳಾ ಕೋಟಾದಿಂದಲೂ) ಮತ್ತು ಲಕ್ಷ್ಮಣ ಸವದಿ, ಭದ್ರಾವತಿಯ ಬಿ.ಕೆ. ಸಂಗಮೇಶ್ವರ, ಸೇಡಂನ ಡಾ| ಶರಣಪ್ರಕಾಶ ಪಾಟೀಲ್ ಮತ್ತಿತರರ ಹೆಸರು ಮುಂಚೂಣಿಯಲ್ಲಿದೆ.
ಒಕ್ಕಲಿಗರಲ್ಲಿ ಶಿರಾ ತಾಲೂಕಿನ ಟಿ.ಬಿ. ಜಯಚಂದ್ರ, ಬ್ಯಾಟರಾಯನಪುರದ ಕೃಷ್ಣ ಬೈರೇಗೌಡ, ವಿಜಯನಗರದ ಎಂ. ಕೃಷ್ಣಪ್ಪ, ಮಾಗಡಿಯ ಎಚ್.ಸಿ. ಬಾಲಕೃಷ್ಣ, ವೆಂಕಟೇಶ್, ನಾಗಮಂಗಲದ ಎನ್. ಚೆಲುವರಾಯಸ್ವಾಮಿ, ಕುಣಿಗಲ್‌ನ ರಂಗನಾಥ್ ಮತ್ತಿತರರು ರೇಸ್‌ನಲ್ಲಿದ್ದಾರೆ. ಇವರ ಜತೆಗೆ ಹೊಸ ಮುಖಗಳ ಕೋಟಾದಲ್ಲಿ ಅಜಯ್ ಸಿಂಗ್, ಸಲೀಂ ಅಹಮ್ಮದ್, ರಹೀಂ ಖಾನ್, ಎನ್.ಎಚ್. ಕೋನರೆಡ್ಡಿ, ವಿಜಯಾನಂದ ಕಾಶೆಪ್ಪನವರ, ನಾಗೇಂದ್ರ, ಆನೇಕಲ್‌ನ ಶಿವಣ್ಣ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಜಾತಿ, ಜಿಲ್ಲಾ ಕೋಟಾಗಳಡಿ ಲಾಬಿ
ಕೆಲವರು ತಮ್ಮ ಸಮುದಾಯ, ಜಿಲ್ಲೆ, ಪ್ರಾದೇಶಿಕತೆ ಕೋಟಾಗಳನ್ನು ಮುಂದಿಟ್ಟು ಮಂತ್ರಿ ಪಟ್ಟಕ್ಕೆ ಲಾಬಿ ಮಾಡುತ್ತಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, “ಅಧಿಕಾರ ಮುಖ್ಯವಲ್ಲ; ಜನರ ನಂಬಿಕೆ ಉಳಿಸಿ ಕೊಳ್ಳು ವುದು ಮುಖ್ಯ. ನಾಯಕರ ಮನೆಗಳ ಸುತ್ತ ಓಡಾಡುವುದು, ಚಾಡಿ ಹೇಳು ವುದರಿಂದ ಪ್ರಯೋಜನ ಇಲ್ಲ’ ಎಂದಿದ್ದಾರೆ. ಸಮುದಾಯ ಅವಗಣನೆ?
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕೊರಮ, ಕೊರಚ, ಲಂಬಾಣಿ, ಬೋವಿ ಸಹಿತ ಪರಿಶಿಷ್ಟ ಪಂಗಡಗಳು ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರೂ ಆ ಸಮುದಾಯಗಳ ಪ್ರತಿನಿಧಿಗಳನ್ನು ಅವಗಣಿಸಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಿದೆ. ಈ ಸಮುದಾಯಗಳ ರುದ್ರಪ್ಪ ಲಮಾಣಿ, ಪ್ರಕಾಶ ರಾಠೊಡ್ ಆಕಾಂಕ್ಷಿಗಳಾಗಿದ್ದಾರೆ. ರುದ್ರಪ್ಪ ಲಮಾಣಿಗೆ ಈ ಹಿಂದೆಯೇ ಅವಕಾಶ ನೀಡಲಾ ಗಿತ್ತು. ಪ್ರಕಾಶ್ ರಾಠೊಡ್ ಅವರು ಸಿದ್ದರಾಮಯ್ಯ ಜತೆಗೆ 120 ಕ್ಷೇತ್ರಗಳಲ್ಲಿ ಚುನಾವಣ ಪ್ರಚಾರ ಮಾಡಿದ್ದು, 40 ಕ್ಷೇತ್ರಗಳಲ್ಲಿ ಪ್ರಮುಖ ಭಾಷಣ ಮಾಡಿ ಪಕ್ಷದ ಗೆಲುವಿಗೆ ಶ್ರಮಿ ಸಿದ್ದಾರೆ. ಆದಾಗ್ಯೂ ಇವರು ಸಂಪುಟದಲ್ಲಿ ಸೇರದಿರುವ ಬಗ್ಗೆ ಸಮುದಾಯ ಬೇಸರ ವ್ಯಕ್ತಪಡಿಸಿದೆ.