Advertisement

Film Piracy: ಚಲನಚಿತ್ರಗಳನ್ನು ಪೈರಸಿ ಮಾಡುವುದು ಇನ್ನು ಅಸಾಧ್ಯ!

10:46 PM Apr 19, 2023 | Team Udayavani |

ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ದೇಶದ ಸಿನಿಮಾರಂಗಕ್ಕೆ ಸಂತೋಷದ ಸುದ್ದಿಯನ್ನು ನೀಡಿದೆ. ಚಲನಚಿತ್ರ ತಿದ್ದುಪಡಿ ಮಸೂದೆಯನ್ನು (ಸಿನಿಮ್ಯಾಟೋಗ್ರಾಫ್ ಅಮೆಂಡ್‌ಮೆಂಟ್‌ ಬಿಲ್‌) ಅಂಗೀಕರಿಸುವ ಮೂಲಕ, ಸಿನಿಮಾಗಳನ್ನು ಪೈರಸಿ ಮಾಡುವುದಕ್ಕೆ ಬಲವಾದ ತಡೆಯನ್ನೊಡ್ಡಿದೆ. “ಸಿನಿಮಾಗಳನ್ನು ನಕಲಿ ಮಾಡಿ, ಅಂತರ್ಜಾಲದಲ್ಲಿ ಹರಿಬಿಡುವುದನ್ನು ತಡೆಯುವುದೇ ಇದರ ಉದ್ದೇಶ. ಈ ಮಸೂದೆಯನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

Advertisement

ಈ ಮಸೂದೆಯಲ್ಲಿ ಆಗಿರುವ ಇನ್ನೊಂದು ಮಹತ್ವದ ಬದಲಾವಣೆಯೆಂದರೆ ಯು, ಎ, ಯುಎ ಪ್ರಮಾಣಪತ್ರದಲ್ಲೂ ಬದಲಾವಣೆ ತಂದಿರುವುದು. ಇನ್ನು ಮುಂದೆ ಚಲನಚಿತ್ರ ಸೆನ್ಸಾರ್‌ ಮಂಡಳಿಗಳು ಯು, ಎ ಪ್ರಮಾಣಪತ್ರಗಳನ್ನು ನೀಡುವ ಬದಲು ವಯೋಮಾನದ ಆಧಾರದಲ್ಲಿ ಸಿನಿಮಾಗಳನ್ನು ವಿಂಗಡಿಸುವ ಅವಕಾಶ ನೀಡಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಅನುರಾಗ್‌ ಠಾಕೂರ್‌ ನೀಡಿಲ್ಲ. ಸಂಸತ್‌ ಅಧಿವೇಶನದಲ್ಲಿ ಇದು ಮಂಡಿಸಲ್ಪಟ್ಟ ನಂತರ ಎಲ್ಲ ಮಾಹಿತಿಗಳು ಸ್ಪಷ್ಟವಾಗಲಿವೆ ಎಂದು ಹೇಳಿದ್ದಾರೆ.

ಏನಿದು ಯು, ಎ?: ಇಲ್ಲಿಯವರೆಗೆ ಸೆನ್ಸಾರ್‌ ಮಂಡಳಿಗಳು ಸಿನಿಮಾವನ್ನು ವೀಕ್ಷಿಸಿ, ಅವುಗಳೊಳಗಿನ ಮಾಹಿತಿ ಆಧಾರದಲ್ಲಿ ಪ್ರಮಾಣಪತ್ರ ನೀಡುತ್ತಿದ್ದವು. ಯು ಅಂದರೆ ನಿರಾತಂಕವಾಗಿ ಸಾರ್ವಜನಿಕ ಪ್ರದರ್ಶನ ನಡೆಸಲು ಅವಕಾಶ, ಎ ಅಂದರೆ ಪ್ರಾಪ್ತವಯಸ್ಕ ಪ್ರೇಕ್ಷಕರಿಗೆ ಮಾತ್ರ ಸೀಮಿತ, ಯುಎ ಅಂದರೆ ಎಲ್ಲರೂ ನೋಡಬಹುದಾದರೂ 12 ವರ್ಷದೊಳಗಿನ ಮಕ್ಕಳು ಪೋಷಕರ ಮಾರ್ಗದರ್ಶನ ಪಡೆದಿರಬೇಕು. ಇನ್ನು ಮುಂದೆ ಇದು ಈ ಪ್ರಮಾಣಪತ್ರ ವಯಸ್ಸಿನ ಆಧಾರದಲ್ಲಿ ನೀಡಲ್ಪಡುತ್ತವೆ. ಇದು ಅತ್ಯಂತ ಗಮನಾರ್ಹ ಬದಲಾವಣೆಯಾಗಿದೆ. ಆದ್ದರಿಂದ ಇಡೀ ಚಿತ್ರರಂಗಕ್ಕೆ ಅತ್ಯಂತ ಮಹತ್ವದ ಸುದ್ದಿಯಾಗಿ ಇದು ಪರಿಣಮಿಸಿದೆ.

2019ರಲ್ಲಿ ಚಲನಚಿತ್ರ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಈ ಹೊಸ ಬದಲಾವಣೆಗಳನ್ನು ಚಿತ್ರೋದ್ಯಮದೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next