Advertisement

ಏರಿಂಡಿಯಾದಲ್ಲಿ ಶೇ.49 ವಿದೇಶಿ ಹೂಡಿಕೆಗೆ ಕೇಂದ್ರದ ಅನುಮತಿ

03:04 PM Jan 10, 2018 | |

ಹೊಸದಿಲ್ಲಿ : ಏರಿಂಡಿಯಾದಲ್ಲಿ ವಿದೇಶಿ ನೇರ ಬಂಡವಾಳ ಮೂಲಕ ಶೇ.49ರ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ.

Advertisement

ಸಾಲದ ಹೊರೆಗೆ ನಲುಗುತ್ತಿರುವ ರಾಷ್ಟ್ರೀಯ ವಿಮಾನ ಸಂಸ್ಥೆಯಾಗಿರುವ ಏರಿಂಡಿಯಾಲ್ಲಿ ಈಗಿನ್ನು ಅನುಮತಿ ಮಾರ್ಗದ ಮೂಲಕ ವಿದೇಶಿ ಏರ್‌ ಲೈನ್‌ಗಳು ಶೇ.49ರ ವರೆಗೆ ಬಂಡವಾಳವನ್ನು ಹೂಡಬಹುದಾಗಿದೆ.

ಆದರೆ ಈ ಬಂಡವಾಳ ಹೂಡಿಕೆಯು ಶರತ್ತುಗಳಿಗೆ ಒಳಪಟ್ಟಿದೆ. ಅವೆಂದರೆ : 1.ಏರಿಂಡಿಯಾದಲ್ಲಿ ವಿದೇಶಿ ಏರ್‌ ಲೈನ್ಸ್‌ಗಳು ಹೂಡುವ ಬಂಡವಾಳ ಪರೋಕ್ಷ ವಾಗಿ ಇಲ್ಲವೇ ಪ್ರತ್ಯಕ್ಷವಾಗಿ ಶೇ.49ರ ಮಿತಿಯನ್ನು ಮೀರುವಂತಿಲ್ಲ; 2. ಏರಿಂಡಿಯಾದ ಹೆಚ್ಚಿನ ಒಡೆತನ ಮತ್ತು ನಿಯಂತ್ರಣ ಭಾರತೀಯ ರಾಷ್ಟ್ರದ ಕೈಯಲ್ಲೇ ಉಳಿಯತಕ್ಕದ್ದು. 

ಈ ನಡುವೆ ಸಾರಿಗೆ, ಪ್ರವಾಸೋದ್ಯ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸ್ಥಾಯೀ ಸಮಿತಿಯು ನಿನ್ನೆ ಮಂಗಳವಾರ “ಸರಕಾರ ಏರಿಂಡಿಯಾದಲ್ಲಿನ ಬಂಡವಾಳವನ್ನು ಮಾರುವ ಅಥವಾ ಅದನ್ನು ಖಾಸಗೀಕರಿಸುವ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಮತ್ತು ರಾಷ್ಟ್ರದ ಹೆಮ್ಮೆಯಾಗಿರುವ ಏರಿಂಡಿಯಾ ವಿಮಾನ ಸಂಸ್ಥೆಯಲ್ಲಿನ ಬಂಡವಾಳ ಮಾರಾಟಕ್ಕೆ ಪರ್ಯಾಯ ಸಾಧ್ಯತೆಯನ್ನು ಕಂಡುಕೊಳ್ಳಬೇಕು’ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next