ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಲಕ್ಷ್ಮೀ ವಿಲಾಸ್‌ಬ್ಯಾಂಕ್(ಎಲ್‌ವಿಬಿ) ಯನ್ನು ಡಿಬಿಎಸ್ ಬ್ಯಾಂಕ್ ಇಂಡಿ ಯಾ ಲಿ.(ಡಿಬಿಐ ಎಲ್)ನೊಂದಿಗೆ ವಿಲೀನ ಮಾಡಲು ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಶುಕ್ರವಾರವೇ ಲಕ್ಷ್ಮೀ ವಿಲಾಸ್‌ಬ್ಯಾಂಕು, ಡಿಬಿಎಸ್ ಬ್ಯಾಂಕ್ ಹೆಸರಿನಲ್ಲಿ ಕಾರ್ಯಾರಂಭ ಮಾಡಲಿದೆ.
ಸಂಪುಟ ಸಭೆ ನಂತರ ಮಾತನಾಡಿದ ಸಚಿವ ಪ್ರಕಾಶ್ ಜಾಬ್ಡೇಕರ್, ಲಕ್ಷ್ಮೀ ವಿಲಾಸ ಬ್ಯಾಂಕ್‌ನಲ್ಲಿ ಇರುವ ಖಾತೆದಾರರ 20 ಸಾವಿರ ಕೋಟಿ ರೂ. ಠೇವಣಿ ಸುರಕ್ಷಿತವಾಗಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ.
ಸಂಪುಟ ತೀರ್ಮಾನದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಹೊರಡಿಸಿದ ಆರ್‌ಬಿಐ, ಶುಕ್ರವಾರ(ನ.27)ದಿಂದಲೇ ಲಕ್ಷ್ಮಿ ವಿಲಾಸ ಬ್ಯಾಂಕ್, ಡಿಬಿಎಸ್ ಬ್ಯಾಂಕಿನ ಹೆಸರಲ್ಲಿ ಕಾರ್ಯಾಚರಣೆ ಶುರು ಮಾಡಲಿದೆ ಎಂದಿದೆ. ಜತೆಗೆ, ವಿತ್‌ಡ್ರಾ ಮೇಲೆ ಹೇರಲಾಗಿದ್ದ ನಿರ್ಬಂಧವೂ ಅಂದೇ ಕೊನೆಗೊಳ್ಳಲಿದೆ ಎಂದೂ ತಿಳಿಸಿದೆ.
ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್‌ನ ಅಂಗಸಂಸ್ಥೆಯಾದ ಡಿಬಿಐ ಎಲ್‌ನೊಂದಿಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನಗೊಳ್ಳಲಿದ್ದು, 20 ಲಕ್ಷ ಠೇವಣಿ ದಾರರು ಮತ್ತು 4 ಸಾವಿರ ಉದ್ಯೋಗಿಗಳು ನಿಟ್ಟುಸಿರು ಬಿಡು ವಂತಾಗಿದೆ.
ಒಬ್ಬ ಠೇವಣಿದಾರ 25 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ವಿತ್‌ಡ್ರಾ ಮಾಡುವಂತಿಲ್ಲ ಎಂದು 30 ದಿನಗಳ ಅವಧಿಯ ನಿರ್ಬಂಧ ಹೇರಿ ಕೇಂದ್ರ ಸರಕಾರ ನ.17ರಂದು ಆದೇಶ ಹೊರಡಿಸಿತ್ತು. ಅಲ್ಲದೆ, ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಆರ್‌ಬಿಐ ಸೂಪರ್‌ಸೀಡ್ ಮಾಡಿತ್ತು.