Advertisement

ಕಬ್ಬಿನ ಬೆಂಬಲ ಬೆಲೆ 25 ರೂ. ಕನಿಷ್ಠ ಹೆಚ್ಚಳ

02:25 AM May 25, 2017 | Karthik A |

ಹೊಸದಿಲ್ಲಿ: ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಕಬ್ಬು ಬೆಳೆಗಾರರಿಗೆ ಸಂತಸದ ಸುದ್ದಿ. ಕೇಂದ್ರ ಸರಕಾರ 2017-18ನೇ ಸಾಲಿನಲ್ಲಿ ಕಬ್ಬಿಗೆ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲಿಗೆ 25 ರೂ. ನಷ್ಟು ಏರಿಸಿದೆ. ಇದರಿಂದ ಪ್ರತಿ ಕ್ವಿಂಟಾಲ್‌ ಕಬ್ಬಿಗೆ 225 ರೂ. ಬೆಂಬಲ ಬೆಲೆ ಸಿಗಲಿದೆ. ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳ ಪರಿಸ್ಥಿತಿ ಸುಧಾರಿಸಿದ್ದು, ಬೆಂಬಲ ಬೆಲೆಯನ್ನು ಶೇ.10.6ರಷ್ಟು ಹೆಚ್ಚಳಗೊಳಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಅಲ್ಲದೆ ಕಳೆದ ವರ್ಷ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬರಗಾಲ ಕಾಡಿದ್ದರಿಂದ ಕಬ್ಬಿನ ಇಳುವರಿ ಕಡಿಮೆಯಾಗಿತ್ತು. ಆದರೆ ಈ ಬಾರಿ ಉತ್ತಮ ಮುಂಗಾರು ಆಗಲಿದೆ ಎಂದು ಹೇಳಿರುವುದರಿಂದಾಗಿ ಪರಿಸ್ಥಿತಿ ಸುಧಾರಿಸಬಹುದು ಎಂದು ತಿಳಿಸಿದ್ದಾರೆ.

Advertisement

ಎಫ್ಡಿಐ ಪರಿಶೀಲನಾ ಮಂಡಳಿ ರದ್ದು: ಈಗಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತ ಪರಿಶೀಲನಾ ಮಂಡಳಿಯನ್ನು ಕೇಂದ್ರ ಸಂಪುಟ ರದ್ದುಗೊಳಿಸಿದೆ. ಇದಕ್ಕೆ ಬದಲಾಗಿ ಬೇರೆಯೇ ಸಮಿತಿಯನ್ನು ಸ್ಥಾಪಿಸುವುದಾಗಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next