Advertisement

49 ಹೊಸ ತಾಲೂಕುರಚನೆಗೆ ಸಂಪುಟದ ಸಮ್ಮತಿ

11:30 AM Aug 29, 2017 | |

ಬೆಂಗಳೂರು: ಬಜೆಟ್‌ನಲ್ಲಿ ಘೋಷಣೆ ಮಾಡಿರುವ ದಾಂಡೇಲಿ,ಅಳ್ನಾವರ, ಬಬಲೇಶ್ವರ, ಕುಡಚಿ, ಬ್ರಹ್ಮಾವರ, ಕಾಪು, ಮೂಡಬಿದರೆ ಸೇರಿದಂತೆ 49 ಹೊಸ ತಾಲೂಕು ರಚನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಕುರಿತು ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, 49 ಹೊಸ ತಾಲೂಕುಗಳ ರಚನೆಗೆ ಒಪ್ಪಿಗೆ ನೀಡಲಾಗಿದ್ದು, ಹೊಸ ತಾಲೂಕುಗಳ ಗಡಿ ನಿರ್ಧಾರವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಆದೇಶ ಹೊರಡಿಸುವುದಿಲ್ಲ. ಹೊಸ ತಾಲೂಕುಗಳಿಗೆ ಸೇರ್ಪಡೆಯಾಗುವ ಭೂ ಪ್ರದೇಶದ ಗಡಿ ನಿಗದಿ ಪಡಿಸಿ ಶೀಘ್ರವೇ ಸರ್ಕಾರಕ್ಕೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಬಂದ ನಂತರ ಸರ್ಕಾರ ಅಧಿಕೃತ ಆದೇಶ 

Advertisement

ಸಂಪುಟದ ಪ್ರಮುಖ ನಿರ್ಣಯಗಳು

  • ಮೈಸೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ನಿರ್ಧಾರ
  • ಆಲಮಟ್ಟಿ ಎಡದಂಡೆ ಕಾಲುವೆ ಆಧುನಿಕರಣಕ್ಕೆ 112 ಕೋಟಿ ನೀಡಲು ಒಪ್ಪಿಗೆ. 
  • ಚೆನ್ನರಾಯಪಟ್ಟಣ ತಾಲೂಕಿನಲ್ಲಿ 25 ಕೆರೆ ತುಂಬಿಸಲು 79 ಕೋಟಿ ರೂ. ಬಿಡುಗಡೆಗೆ ತೀರ್ಮಾನ
  • ಕೃಷ್ಣ ಜಲಭಾಗ್ಯ ನಿಗಮಕ್ಕೆ 1500 ಕೋಟಿ ಸಾಲಕ್ಕೆ ಅನುಮೋದನೆ. 
  •  ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ನಿರ್ಮಲ,ಸಿರಿಗಂಧ ಕಿಟ್‌ ವಿತರಿಸಲು 6.50 ಕೋಟಿ.
  •  ಗದಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಯ ಆಧುನಿಕರಣಕ್ಕೆ 5.8 ಕೋಟಿ. 
  •  ಕುಣಬಿ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು.
  • ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 170 ಕೋಟಿ ನೀಡಲು ಒಪ್ಪಿಗೆ
  • ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗೆ 20 ಕೋಟಿ ಯೋಜನೆಗೆ ಒಪ್ಪಿಗೆ
  •  2017-18 ನೇ ಸಾಲಿಗೆ ರಸಗೊಬ್ಬರ ದಾಸ್ತಾನು ಮಾಡಲು ಸಹಕಾರ ಮಾರಾಟ ಮಂಡಳಿಗೆ 500 ಕೋಟಿ ಸಾಲಕ್ಕೆ ಸರ್ಕಾರ ಖಾತ್ರಿ ನೀಡುವುದು.
  •  ತೊಗರಿಗೆ ಬೆಂಬಲ ಬೆಲೆಯಡಿಯಲ್ಲಿ ರೈತರಿಗೆ ನೀಡಿರುವ 13.92 ಕೋಟಿಗೆ ಅನುಮೋದನೆ.
  • ರಾಯಚೂರು ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ 25 ಕೋಟಿ  
  • ಕೆಂಪೇಗೌಡ ಪ್ರಾಧಿಕಾರದ ಅಧಿಕಾರೇತರ ಸದಸ್ಯರ ಸಂಖ್ಯೆಯನ್ನು 2 ರಿಂದ 6 ಕ್ಕೆ ಹೆಚ್ಚಿಸುವುದು.
  • ಗಜೇಂದ್ರಗಢ-ನರೇಗಲ್‌, ರೋಣ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಕೆರೆ ನಿರ್ಮಾಣಕ್ಕೆ 60 ಕೋಟಿಗೆ ಒಪ್ಪಿಗೆ
Advertisement

Udayavani is now on Telegram. Click here to join our channel and stay updated with the latest news.

Next