Advertisement

ಪೌರತ್ವ ತಿದ್ದುಪಡಿ ಮಸೂದೆ; ಜೆಡಿಯುನಲ್ಲಿ ಭಿನ್ನಾಭಿಪ್ರಾಯ, ಶಿವಸೇನಾ ಯೂ ಟರ್ನ್; ವಿಪ್ ಜಾರಿ

10:07 AM Dec 11, 2019 | Nagendra Trasi |

ನವದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಿರಿಯ ಮುಖಂಡರಾದ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅಸಮಾಧಾನವ್ಯಕ್ತಪಡಿಸಿದ್ದಾರೆ.

Advertisement

ಪೌರತ್ವ ತಿದ್ದುಪಡಿ (ಸಿಎಬಿ) ಮಸೂದೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸುವುದಾಗಿದೆ. ಈ ಮಸೂದೆ ಸೋಮವಾರ ಸುದೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಈ ಸಂದರ್ಭದಲ್ಲಿ ಮಸೂದೆಗೆ ನಿತೀಶ್ ನೇತೃತ್ವದ ಜೆಡಿಯು ಬೆಂಬಲ ನೀಡಿತ್ತು.

ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕುಮಾರ್, ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಪಕ್ಷದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂವಿಧಾನದ ಚೌಕಟ್ಟಿನಲ್ಲಿ ನಾವು ಜಾತ್ಯತೀತತೆ ಮತ್ತು ಗಾಂಧಿ ವಿಚಾರಧಾರೆಯನ್ನು ಅನುಸರಿಸಬೇಕಾಗಿದೆ ಎಂದು ಕಿಶೋರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಜೆಡಿಯು ಹಿರಿಯ ಮುಖಂಡ, ಮಾಜಿ ರಾಯಭಾರಿ ಕೂಡಾ, ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಬಾಹಿರವಾದದ್ದು, ತಾರತಮ್ಯದಿಂದ ಕೂಡಿದ್ದು, ದೇಶದ ಒಗ್ಗಟ್ಟು ಮತ್ತು ಐಕ್ಯತೆಯ ವಿರೋಧಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು. ಗಾಂಧಿಜೀಯೂ ಕೂಡಾ ಇದನ್ನು ನಿರಾಕರಿಸುತ್ತಿದ್ದರು. ತನ್ನ ಅಭಿಪ್ರಾಯ ಪಕ್ಷದ ವಿರುದ್ಧವಾದದ್ದು ಎಂಬುದು ತನಗೆ ತಿಳಿದಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದು, ನಿತೀಶ್ ಕುಮಾರ್ ಜೀ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುವ ವೇಳೆ ಈ ಬಗ್ಗೆ ಮರುಪರಿಶೀಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಬೆಂಬಲವಿಲ್ಲ; ಶಿವಸೇನಾ

Advertisement

ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾದ ವೇಳೆ ಶಿವಸೇನಾ ಬೆಂಬಲ ನೀಡಿತ್ತು. ರಾಜ್ಯಸಭೆಯಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾಗುವ ವೇಳೆ ಶಿವಸೇನಾ ಬೆಂಬಲ ನೀಡಲ್ಲ ಎಂದು ಉಲ್ಟಾ ಹೊಡೆದಿದೆ. ದೇಶದ ಹಿತಾಸಕ್ತಿ ಮೊದಲು ಎಂದು ಉದ್ಧವ್ ಠಾಕ್ರೆ ಹಾಗೂ ಸಂಜಯ್ ರಾವತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ವಿಪ್ ಜಾರಿ ಮಾಡಿದ ಕಾಂಗ್ರೆಸ್:

ಬುಧವಾರ ರಾಜ್ಯಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಾಂಗ್ರೆಸ್ ಪಕ್ಷ ವಿಪ್ ಜಾರಿ ಮಾಡಿದೆ. ಅಲ್ಲದೇ ಡಿಸೆಂಬರ್ 10 ಮತ್ತು 11ರಂದು ಎಲ್ಲಾ ಸದಸ್ಯರು ರಾಜ್ಯಸಭೆಯಲ್ಲಿ ಹಾಜರಿರಬೇಕು ಎಂದು ಬಿಜೆಪಿ ಕೂಡಾ ವಿಪ್ ಜಾರಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next