ಕೋಲ್ಕತಾ: ಮುಂದಿನ ತಿಂಗಳಿಂದ ಪೌರತ್ವ ವಿದೇಯಕ ಕಾಯ್ದೆ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯ ವರ್ಗೀಯ ಹೇಳಿದ್ದಾರೆ.
2021ರ ಏಪ್ರಿಲ್-ಮೇ ನಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಪ್ರಚಾರ ಸಭೆಯ ಬಳಿಕ ಮಾತನಾಡಿದ ವಿಜಯವರ್ಗೀಯ “ನಮ್ಮ ನೆರೆಯ ರಾಷ್ಟ್ರಗಳಲ್ಲಿ ತೊಂದರೆಗೀಡಾದವರಿಗೆ ದೇಶದಲ್ಲಿ ಪೌರತ್ವ ನೀಡುವ ನಿಟ್ಟಿಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದೆ. ಜನವರಿಯಿಂದ ಅದನ್ನು ಅನುಷ್ಠಾನಗೊಳಿಸುವ ಸಾಧ್ಯತೆಗಳು ಇವೆ’ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ನಿರಾಶ್ರಿತರ ಬಗ್ಗೆ ಅನುಕಂಪ ಧೋರಣೆ ಹೊಂದಿಲ್ಲ ಎಂದು ಅವರು ದೂರಿದರು.
ಇದನ್ನೂ ಓದಿ:ಮರಾಠಿ ಚಿತ್ರರಂಗದ ಹಿರಿಯ ನಟ ರವಿ ಪಟವರ್ಧನ್ ನಿಧನ ; ಮಹಾರಾಷ್ಟ್ರ ಮುಖ್ಯಮಂತ್ರಿ ಸಂತಾಪ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳದ ಸಚಿವ, ಟಿಎಂಸಿ ನಾಯಕ ಫಿರ್ಹಾದ್ ಹಕೀಂ ಬಿಜೆಪಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.