Advertisement
ಇದಕ್ಕಾಗಿ “ಸಿ ವಿಜಿಲ್’ (ಸಿಟಿಜನ್ ವಿಜಿಲ್) ಆ್ಯಪ್ ಸಿದಟಛಿಪಡಿಸಿದೆ. ನಾಗರಿಕರಿಂದ ದೂರುಗಳನ್ನು ಸ್ವೀಕರಿಸುವ ದಿಸೆಯಲ್ಲಿ ಆಯೋಗದ ಚೊಚ್ಚಲ ಉಪಕ್ರಮವಿದು. ನಾಗರಿಕರು ಇದಕ್ಕೆ ಲಾಗಿನ್ ಆಗಿ ಅಥವಾ ಅನಾಮಧೇಯವಾಗಿಯೂ ಈ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬಹುದು.
Related Articles
Advertisement
ಜಿಪಿಎಸ್ ಆಧಾರ: ನಾವು ಕಳುಹಿಸುವ ಮಾಹಿತಿಯು ಘಟನಾ ಸ್ಥಳದ ಜಿಪಿಎಸ್ ಲೊಕೇಶನ್ ಆ್ಯಪ್ ಮೂಲಕ ರವಾನೆಯಾಗುವುದರಿಂದ ಅಧಿಕಾರಿಗಳು ಧಾವಿಸುವುದಕ್ಕೂ ಸುಲಭ. ಇದು ಜಿಲ್ಲಾಮಟ್ಟದಲ್ಲಿ ರೂಟ್ ಮ್ಯಾಪ್‌ನೊಂದಿಗೆ ಸಂಯೋಜಿತಗೊಂಡಿರುತ್ತದೆ. ಆ್ಯಪ್‌ನಲ್ಲಿ ಲೈವ್ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಲು ಮಾತ್ರ ಅವಕಾಶವಿದೆ.
ಸ್ಟೆಟಸ್ ಟ್ರ್ಯಾಕಿಂಗ್ ಸಲ್ಲಿಸಿದ ದೂರುಗಳು, ರದ್ದುಗೊಂಡ ದೂರುಗಳು, ಪ್ರಕ್ರಿಯೆಯಲ್ಲಿರುವ ದೂರುಗಳು ಮತ್ತು ಒಟ್ಟು ದೂರುಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯ. ದೂರು ಸಲ್ಲಿಕೆ ತತ್‌ಕ್ಷಣ ಸ್ವೀಕೃತಿ ಸಂಖ್ಯೆ ಸಿಗಲಿದ್ದು, ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಲೂಬಹುದು. ಯಾವಾಗಿನಿಂದ ಕಾರ್ಯಾರಂಭ?
ಸದ್ಯ ಆ್ಯಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ತರಬೇತಿ ಗಾಗಿ ಬಳಸಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಆ್ಯಪ್ ಕಾರ್ಯ ನಿರ್ವಹಿಸಲಿದೆ. ದೂರುಗಳ ಸಮರ್ಪಕ ನಿರ್ವಹಣೆಗೆ ನಾಗರಿಕರು, ಮಾನಿಟರ್, ಇನ್‌ವೆಸ್ಟಿಗೇಟರ್, ಅಬ್ಸರ್‌ವರ್ ಹೀಗೆ ನಾಲ್ಕು ಲಾಗಿನ್‌ಗಳ ಮೂಲಕ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಬೇಕಿದೆ ಕೊಂಚ ಬದಲಾವಣೆ
ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ನಡೆಯುವ ಘಟನೆಗಳು ಅಥವಾ ಇತರ ವ್ಯಕ್ತಿಗಳಿಂದ ಬಂದ ನಂಬಲರ್ಹ ಮಾಹಿತಿ ರವಾನೆಗೆ (ಅಪ್ ಲೋಡ್) ಇದರಲ್ಲಿ ವ್ಯವಸ್ಥೆ ಇಲ್ಲ. ಈ ಸಂಬಂಧ ಕಂಟ್ರೋಲ್ ರೂಂಗೇ ಮಾಹಿತಿ ನೀಡಬೇಕು. ಫೋಟೋ, ವಿಡಿಯೋ ಚಿತ್ರೀಕರಣ ಸಾಧ್ಯವಿರದ ಕಡೆ ಮಾಹಿತಿಯನ್ನು ಮಾತ್ರ (ಮೆಸೇಜ್) ಕಳುಹಿಸಲು ಅವಕಾಶ ಇರಬೇಕು. ಇಲ್ಲಿಯೂ ಸ್ಥಳದ ಗುರುತನ್ನು ಹೊಂದಿರಬೇಕು. ನೀತಿ ಸಂಹಿತೆ ಜಾರಿ ಬಳಿಕ “ಸಿ ವಿಜಿಲ್’ ಆ್ಯಪ್ ಕಾರ್ಯಾರಂಭ ಮಾಡಲಿದೆ. ಇದರೊಂದಿಗೆ 1950 ಸಹಾಯವಾಣಿ, ತಾ| ಕಂಟ್ರೋಲ್ ರೂಂ ಹಾಗೂ ನೇರವಾಗಿ ಅಧಿಕಾರಿಗಳಿಗೂ ನಾಗರಿಕರು ದೂರು ನೀಡಬಹುದು. ಘಟನಾ ಸ್ಥಳದಿಂದ ಫೋಟೋ/ ವಿಡಿಯೋ ತೆಗೆಯಲು ಸಾಧ್ಯವಾಗದಾಗ ಆ್ಯಪ್ ಮೂಲಕ ಸಂದೇಶ ಕಳುಹಿಸಲು ಅವಕಾಶ ಒದಗಿಸುವಂತೆ ಆಯೋಗವನ್ನು ಕೋರಲಾಗುವುದು.
● ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ, ಉಡುಪಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ