ಚಿತ್ರದುರ್ಗ: ಎಷ್ಟು ದಿನ ಅಧಿಕಾರಲ್ಲಿ ಇರ್ತಿವಿ ಅನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು. ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಎಲ್ಲಾ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಆಪ್ತರಿಂದ ಸಿಎಂ ಬಿಎಸ್ ಯಡಿಯೂರಪ್ಪನವರ ಗದ್ದುಗೆಗೆ ಕಂಟಕವಿದೆ ಎಂದು ವಿನಯ್ ಕುಮರ್ ಗುರೂಜಿ ಹೇಳಿಕೆ ವಿಚಾರವಾಗಿ ಮಾತನಾಡಿದರು.
ಡಿ ಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ವಿಚಾರವಾಗಿ ಮಾತನಾಡಿದ ಸಿ ಟಿ ರವಿ, ಡಿಕೆಶಿ ಅವರನ್ನ ಇಡಿ ಕಸ್ಟಡಿಗೆ ಕೊಟ್ಟಿರುವುದು ನ್ಯಾಯಾಲಯ. ಕಾನೂನು, ನ್ಯಾಯಾಲಯಕ್ಕಿಂತ ಯಾರು ಅತೀತರಲ್ಲ. ಕೆಲವರು ಕಾನೂನುಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು. ಡಿಕೆಶಿಗೆ ವಿಚಾರದಲ್ಲಿ ಯಾರೇ ಬೆನ್ನಿಗೆ ನಿಂತರೂ ನ್ಯಾಯಾಲಯವೇ ತೀರ್ಮಾನ ಕೊಡಲಿದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ರಾಮಮಂದಿರ ನಿರ್ಮಾಣ ವಿಚಾರ: ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯತೆಯ ವಿಷಯ. ನಾವು ಪ್ರತಿಪಾದಿಸಿಕೊಂಡ ವಿಚಾರವನ್ನ ಕೈ ಬಿಡುವುದಿಲ್ಲ. ಆಕ್ರಮಣಕಾರಿ ಬಾಬರ್ ವೈಭವೀಕರಿಸುವುದನ್ನು ದೇಶ ಭಕ್ತರು ಸಹಿಸಲ್ಲ. ರಾಮಮಂದಿರದ ತೊಡಕನ್ನು ನಿವಾರಿಸುವ ತೀರ್ಪು ನ್ಯಾಯಾಲಯದಿಂದ ಹೊರಬರಲಿದೆ ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಂಕಿಂಗ್ ಪರೀಕ್ಷೆ ವಿಚಾರದಲ್ಲಿ ಮಾತನಾಡಿದ ಸಚಿವರು, ಬ್ಯಾಂಕಿಂಗ್ ಎಕ್ಸಾಮ್ ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದೆವು.
ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ ಎಂದರು.