ಚಿಕ್ಕಮಗಳೂರು: ಮತದಾರರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಗೊತ್ತು. ಒಪ್ಪಂದವೆಲ್ಲಾ ಕಾಂಗ್ರೆಸ್ಸಿಗೆ ಬಿಟ್ಟಿದ್ದು, ನಮ್ಮದು ಜನರೊಂದಿಗೆ ಸಂಬಂಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಸಹೋದರರ ವಿರುದ್ಧ ಕಿಡಿಕಾರಿದರು.
“ಜೆಡಿಎಸ್ ಬೆಂಬಲ ಇಲ್ಲದಿದ್ದರೆ ನೀವು ಶಾಸಕರಾಗಲು ತಿಣುಕಾಡಬೇಕಿತ್ತು. ಜೆಡಿಎಸ್ ಬೆಂಬಲ ಇಲ್ಲದಿದ್ದರೆ ನಿಮ್ಮ ತಮ್ಮನನ್ನೂ ಸಂಸದರಾಗಿ ಗೆಲ್ಲಿಸಲು ಆಗುತ್ತಿರಲಿಲ್ಲ. ಬಿಜೆಪಿ ಅಲೆಯಲ್ಲಿ ಜೆಡಿಎಸ್ ಬೆಂಬಲ ಇದ್ದ ಕಾರಣಕ್ಕೆ ಸಂಸದರಾಗಿ ಆಯ್ಕೆಯಾದರು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಇದನ್ನೂ ಓದಿ:ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ
ಕುಮಾರಸ್ವಾಮಿಯನ್ನು ಸಿಎಂ ಮಾಡಿ, ಇಳಿಸಲು ಅವರದ್ದೇ ಶಾಸಕರನ್ನು ಕಳಿಸಿದ್ದು ನಾವೇ? ಸಿಎಂ ಸ್ಥಾನದಲ್ಲಿ ಕೂರಿಸಿ, ಕಾಲೆಳೆದ ಎರಡೂ ಕೆಲಸ ಮಾಡಿದ್ದೂ ಅವರೇ ಎಂದು ಟೀಕಿಸಿದರು.
ಎಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿಲ್ಲ ಅಲ್ಲಿ ಬೆಂಬಲ ಕೊಡಿ ಎಂದು ಕೇಳಿದ್ದೇವೆ. ಜೆಡಿಎಸ್ ಕೈನಲ್ಲಿ ಸ್ವಲ್ಪ ಮತಗಳಿವೆ, ಅವರು ಹಾಕುತ್ತೀವೆಂದು ಬಹಿರಂಗವಾಗಿ ಹೇಳಿಲ್ಲ ಎಂದು ಸಿ.ಟಿ.ರವಿ ಹೇಳಿದರು.